- Kannada News Photo gallery niramala sitharamn will announce union budget 2022 here is the some photos
ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿಗಳನ್ನು ಭೇಟಿಯಾದ ವಿತ್ತ ಸಚಿವೆ-ಇಲ್ಲಿವೆ ಫೋಟೋಗಳು
ಈ ಬಾರಿಯ ಕೇಂದ್ರ ಮುಂಗಡ ಪತ್ರ ಮಂಡನೆ ಇಂದು ನಡೆಯಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿಗಳನ್ನು ಅವರು ಭೇಟಿಯಾದರು. ಬಜೆಟ್ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್ ಅವರು ಕಾಣಿಸಿಕೊಂಡ ಬಗೆಗಿನ ಕೆಲವು ಚಿತ್ರಗಳು ಇಲ್ಲಿವೆ.
Updated on:Feb 01, 2022 | 10:35 AM

ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತ ಸಚಿವಾಲಯಕ್ಕೆ ಆಗಮಿಸಿದ ಸಂದರ್ಭ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೂ ಮುನ್ನ ಪ್ರತಿಯನ್ನು ಹಿಡಿದು ನಿಂತ ಸಂದರ್ಭ.

ರಾಷ್ಟ್ರಪತಿ ಭವನದತ್ತ ಹೊರಟ ವಿತ್ತ ಸಚಿವೆ ಬಜೆಟ್ ಪ್ರತಿಯನ್ನು ಹಿಡಿದು ನಿಂತಾಗ ಕಾಣಿಸಿಕೊಂಡಿದ್ದು ಹೀಗೆ.

ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸೀತಾರಾಮನ್ ಅವರು ಇತರ ಸಚಿವರೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾದರು.

ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ, ಬಜೆಟ್ನಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಣೆ ನೀಡಿದರು.

ರಾಷ್ಟ್ರಪತಿಯನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಅನುಮತಿ ಪಡೆದರು.

ಬಹುನೀರೀಕ್ಷಿತ ಕೇಂದ್ರ ಮುಂಗಡ ಪತ್ರ ಮಂಡನೆ ಇಂದು ನಡೆಯಿಲಿದೆ. ಈ ವರ್ಷವೂ ಕೂಡ ಕಾಗದ ರಹಿತ ಬಜೆಟ್ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸಿಕೊಡಲಿದ್ದಾರೆ.
Published On - 10:32 am, Tue, 1 February 22




