AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

OTT Release this week: ಚಿತ್ರಮಂದಿರಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇನ್ನೂ ಅಬ್ಬರಿಸುತ್ತಿದೆ. ತಮಿಳಿನ ‘ಡ್ಯೂಡ್’, ರಶ್ಮಿಕಾ ನಟನೆಯ ಹಿಂದಿಯ ‘ಥಮ’ ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವಾರ ಒಟಿಟಿ ವೀಕ್ಷಕರಿಗೂ ನಿರಾಸೆ ಇಲ್ಲ, ಕೆಲ ಹಿಟ್ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಿದೆ ನೋಡಿ ಪಟ್ಟಿ...

ಮಂಜುನಾಥ ಸಿ.
|

Updated on: Oct 25, 2025 | 3:36 PM

Share
ಎಂಡಿ ಶ್ರೀಧರ್ ನಿರ್ದೇಶನ ಮಾಡಿದ್ದ ಕನ್ನಡ ಸಿನಿಮಾ ‘ಜಂಭೂ ಸರ್ಕಸ್’ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರವೀಣ್ ತೇಜ್, ಅಂಜಲಿ, ಅಚ್ಯುತ್ ಕುಮಾರ್, ಅವಿನಾಶ್ ನಟಿಸಿದ್ದ ಈ ಸಿನಿಮಾ ಇದೀಗ ಈ ಸಿನಿಮಾ ಸನ್​​ ನೆಕ್ಸ್ಟ್​​​ನಲ್ಲಿ ಬಿಡುಗಡೆ ಆಗಿದೆ.

1 / 6
ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಈ ವಾರ ಒಟಿಟಿಗೆ ಕಾಲಿಟ್ಟಿದೆ. ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಪವನ್ ಕಲ್ಯಾಣ್ ಅವರ ಮಾಸ್ ಅವತಾರ ಪ್ರೇಕ್ಷಕರಿಗೆ ಇಷ್ಟವಾಗಿತ್ತು, ಈ ವಾರ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

2 / 6
ರಾಜಕೀಯ ದಲ್ಲಾಳಿಯೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಕಿಟ್ಟು ಹೆಸರಿನ ಬ್ರೋಕರ್ ಹೇಗೆ ರೆಬಲ್ ಆಗಿ ಭ್ರಷ್ಟ ರಾಜಕಾರಣಿಗಳ ಎದುರು ನಿಲ್ಲುತ್ತಾನೆ ಜೊತೆಗೆ ತನ್ನ ತಾಯಿಯ ಕೊಲೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

3 / 6
ಜಾನ್ಹವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿದ್ದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಪರಮ ಸುಂದರಿ’. ಹಿಂದಿ ಯುವಕನೊಬ್ಬ ಮಲಯಾಳಿ ಯುವತಿಯೊಟ್ಟಿಗೆ ಪ್ರೀತಿಯಲ್ಲಿ ಬೀಳುವ ಕತೆಯನ್ನು ‘ಪರಮ ಸುಂದರಿ’ ಒಳಗೊಂಡಿತ್ತು. ಸಿನಿಮಾ ದೊಡ್ಡ ಕಲೆಕ್ಷನ್ ಮಾಡಲಿಲ್ಲ. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 6
ಪಿಚ್ ಟು ರಿಚ್ ಒಂದು ರಿಯಾಲಿಟಿ ಶೋ. ಇದೊಂದು ಫ್ಯಾಷನ್ ರಿಯಾಲಿಟಿ ಶೋ ಆಗಿದ್ದು ಫ್ಯಾಷನ್ ಬ್ರ್ಯಾಂಡ್​​ಗಳು 40 ಕೋಟಿ ರೂಪಾಯಿ ಹೂಡಿಕೆ ಪಡೆಯಲು ಕರಣ್ ಜೋಹರ್, ಮನೀಶ್ ಮಲ್ಹೋತ್ರಾ ಮತ್ತು ಅಕ್ಷಯ್ ಕುಮಾರ್ ಎದುರು ಬಿಸಿನೆಸ್ ಐಡಿಯಾ ಪ್ರೆಸೆಂಟ್ ಮಾಡುತ್ತಾರೆ. ಮೂವರು ಸೆಲೆಬ್ರಿಟಿಗಳು ಅಳೆದು ತೂಗಿ ಹೂಡಿಕೆ ಮಾಡುತ್ತಾರೆ. ರಿಯಾಲಿಟಿ ಶೋ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ.

5 / 6
ಮಹಾಭಾರತದ ಕತೆಯನ್ನು ಒಳಗೊಂಡಿರುವ ಅನಿಮೇಷನ್ ಸಿನಿಮಾ ‘ಮಹಾಭಾರತ್: ಏಕ್ ಧರ್ಮ ಯುದ್ಧ’ ಜಿಯೋ ಹಾಟ್​​ಸ್ಟಾರ್​​ನಲ್ಲಿ ಇದೇ ವಾರ ಬಿಡುಗಡೆ ಆಗಿದೆ. ವಿಶೇಷವೆಂದರೆ ಇದು ಸಂಪೂರ್ಣವಾಗಿ ಎಐ ಬಳಸಿ ನಿರ್ಮಿಸಲಾಗಿರುವ ಸಿನಿಮಾ ಆಗಿದೆ.

6 / 6
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ

ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್

ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ

ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ

ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?