ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ
OTT Release this week: ಚಿತ್ರಮಂದಿರಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇನ್ನೂ ಅಬ್ಬರಿಸುತ್ತಿದೆ. ತಮಿಳಿನ ‘ಡ್ಯೂಡ್’, ರಶ್ಮಿಕಾ ನಟನೆಯ ಹಿಂದಿಯ ‘ಥಮ’ ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವಾರ ಒಟಿಟಿ ವೀಕ್ಷಕರಿಗೂ ನಿರಾಸೆ ಇಲ್ಲ, ಕೆಲ ಹಿಟ್ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಿದೆ ನೋಡಿ ಪಟ್ಟಿ...
Updated on: Oct 25, 2025 | 3:36 PM

ಎಂಡಿ ಶ್ರೀಧರ್ ನಿರ್ದೇಶನ ಮಾಡಿದ್ದ ಕನ್ನಡ ಸಿನಿಮಾ ‘ಜಂಭೂ ಸರ್ಕಸ್’ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರವೀಣ್ ತೇಜ್, ಅಂಜಲಿ, ಅಚ್ಯುತ್ ಕುಮಾರ್, ಅವಿನಾಶ್ ನಟಿಸಿದ್ದ ಈ ಸಿನಿಮಾ ಇದೀಗ ಈ ಸಿನಿಮಾ ಸನ್ ನೆಕ್ಸ್ಟ್ನಲ್ಲಿ ಬಿಡುಗಡೆ ಆಗಿದೆ.

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಈ ವಾರ ಒಟಿಟಿಗೆ ಕಾಲಿಟ್ಟಿದೆ. ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಪವನ್ ಕಲ್ಯಾಣ್ ಅವರ ಮಾಸ್ ಅವತಾರ ಪ್ರೇಕ್ಷಕರಿಗೆ ಇಷ್ಟವಾಗಿತ್ತು, ಈ ವಾರ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ರಾಜಕೀಯ ದಲ್ಲಾಳಿಯೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಕಿಟ್ಟು ಹೆಸರಿನ ಬ್ರೋಕರ್ ಹೇಗೆ ರೆಬಲ್ ಆಗಿ ಭ್ರಷ್ಟ ರಾಜಕಾರಣಿಗಳ ಎದುರು ನಿಲ್ಲುತ್ತಾನೆ ಜೊತೆಗೆ ತನ್ನ ತಾಯಿಯ ಕೊಲೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ಜಾನ್ಹವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿದ್ದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಪರಮ ಸುಂದರಿ’. ಹಿಂದಿ ಯುವಕನೊಬ್ಬ ಮಲಯಾಳಿ ಯುವತಿಯೊಟ್ಟಿಗೆ ಪ್ರೀತಿಯಲ್ಲಿ ಬೀಳುವ ಕತೆಯನ್ನು ‘ಪರಮ ಸುಂದರಿ’ ಒಳಗೊಂಡಿತ್ತು. ಸಿನಿಮಾ ದೊಡ್ಡ ಕಲೆಕ್ಷನ್ ಮಾಡಲಿಲ್ಲ. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಪಿಚ್ ಟು ರಿಚ್ ಒಂದು ರಿಯಾಲಿಟಿ ಶೋ. ಇದೊಂದು ಫ್ಯಾಷನ್ ರಿಯಾಲಿಟಿ ಶೋ ಆಗಿದ್ದು ಫ್ಯಾಷನ್ ಬ್ರ್ಯಾಂಡ್ಗಳು 40 ಕೋಟಿ ರೂಪಾಯಿ ಹೂಡಿಕೆ ಪಡೆಯಲು ಕರಣ್ ಜೋಹರ್, ಮನೀಶ್ ಮಲ್ಹೋತ್ರಾ ಮತ್ತು ಅಕ್ಷಯ್ ಕುಮಾರ್ ಎದುರು ಬಿಸಿನೆಸ್ ಐಡಿಯಾ ಪ್ರೆಸೆಂಟ್ ಮಾಡುತ್ತಾರೆ. ಮೂವರು ಸೆಲೆಬ್ರಿಟಿಗಳು ಅಳೆದು ತೂಗಿ ಹೂಡಿಕೆ ಮಾಡುತ್ತಾರೆ. ರಿಯಾಲಿಟಿ ಶೋ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ.

ಮಹಾಭಾರತದ ಕತೆಯನ್ನು ಒಳಗೊಂಡಿರುವ ಅನಿಮೇಷನ್ ಸಿನಿಮಾ ‘ಮಹಾಭಾರತ್: ಏಕ್ ಧರ್ಮ ಯುದ್ಧ’ ಜಿಯೋ ಹಾಟ್ಸ್ಟಾರ್ನಲ್ಲಿ ಇದೇ ವಾರ ಬಿಡುಗಡೆ ಆಗಿದೆ. ವಿಶೇಷವೆಂದರೆ ಇದು ಸಂಪೂರ್ಣವಾಗಿ ಎಐ ಬಳಸಿ ನಿರ್ಮಿಸಲಾಗಿರುವ ಸಿನಿಮಾ ಆಗಿದೆ.




