ಪುನೀತ್ ರಾಜ್ಕುಮಾರ್ ಫೋಟೋಗೆ ನಮಿಸಿದ ರಾಹುಲ್ ಗಾಂಧಿ; ಇಲ್ಲಿವೆ ಫೋಟೋಗಳು
ಅಪ್ಪು ಫೋಟೋಗೆ ರಾಹುಲ್ ಗಾಂಧಿ ನಮನ ಸಲ್ಲಿಸಿದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Updated on:Mar 31, 2022 | 9:32 PM

ಪುನೀತ್ ನಿವಾಸಕ್ಕೆ ತೆರಳಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಜತೆ ಮಾತುಕತೆ ನಡೆಸಿದರು ರಾಹುಲ್ ಗಾಂಧಿ. ಶುಕ್ರವಾರ (ಏಪ್ರಿಲ್ 1) ಶಿವಕುಮಾರ ಶ್ರೀಗಳ 115ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 31) ತುಮಕೂರಿನ ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಆ ಬಳಿಕ ಪುನೀತ್ ನಿವಾಸಕ್ಕೆ ಬಂದರು.

ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ರಾಹುಲ್ ಅವರು ದುಃಖ ವ್ಯಕ್ತಪಡಿಸಿದರು. ಪುನೀತ್ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು ರಾಹುಲ್ ಗಾಂಧಿ.

ಅಪ್ಪು ಫೋಟೋಗೆ ರಾಹುಲ್ ಗಾಂಧಿ ನಮನ ಸಲ್ಲಿಸಿದರು.

ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಪುನೀತ್ ನಿವಾಸಕ್ಕೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. 15ಕ್ಕೂ ಅಧಿಕ ಪೊಲೀಸರು ಪುನೀತ್ ನಿವಾಸಕ್ಕೆ ಭದ್ರತೆ ನೀಡಿದರು.

.ಪುನೀತ್ ನಿವಾಸಕ್ಕೆ ತೆರಳಿದ ರಾಹುಲ್ ಗಾಂಧಿ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ ಜತೆ ಮಾತುಕತೆ ನಡೆಸಿದರು.

ರಾಘವೇಂದ್ರ ರಾಜ್ಕುಮಾರ್ ಜತೆ ಡಿಕೆಶಿ
Published On - 9:31 pm, Thu, 31 March 22

TV9 Kannada
Read More



