AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದ್ದಾರೆ ನೋಡಿ ರಶ್ಮಿಕಾ ತಂದೆ-ತಾಯಿ, ತಂಗಿ; ರಿಸೆಪ್ಶನ್​ ಅಲ್ಲಿ ಗಮನ ಸೆಳೆದ ಫ್ಯಾಮಿಲಿ ಫೋಟೋ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ವಿವಾಹ ಆದರು. ಆ ಬಳಿಕ ದಂಪತಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆದರು. ಅಭಿಮಾನಿಗಳಿಗೆ ಊಟ ಕೂಡ ಹಾಕಿಸಿದರು. ಈಗ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರ ರಿಸೆಪ್ಶನ್ ಫೋಟೋ ಗಮನ ಸೆಳೆದಿದೆ. ಇದರಲ್ಲಿ ಫ್ಯಾಮಿಲಿ ಫೋಟೋ ವಿಶೇಷ ಎನಿಸಿಕೊಂಡಿದೆ.

ರಾಜೇಶ್ ದುಗ್ಗುಮನೆ
|

Updated on:Mar 05, 2026 | 7:07 AM

Share
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸಿ ಮದುವೆ ಆದವರು. ಇಬ್ಬರದ್ದೂ ಒಂದೇ ವೃತ್ತಿ. ಸಿನಿಮಾ ಸೆಟ್ ಅಲ್ಲೇ ಇವರಿಗೆ ಪ್ರೀತಿ ಮೂಡಿತು ಎಂದು ಹೇಳಲಾಗಿದೆ. ಈಗ ಇವರ ವಿವಾಹ ನಡೆದಿದೆ.

1 / 7
ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿವಾಹ ನಡೆಯಿತು. ಮಾರ್ಚ್ 4ರಂದು ಹೈದರಾಬಾದ್​​ನಲ್ಲಿ ಅದ್ದೂರಿ ಆರತಕ್ಷತೆಯನ್ನು ಆಯೋಜಿಸಲಾಗಿತ್ತು.

2 / 7
ಈ ವಿವಾಹ ಕಾರ್ಯಕ್ರಮ ಖಾಸಗಿಯಾಗಿ ನಡೆಯಿತು. ಇದಕ್ಕೆ ಯಾವುದೇ ಸೆಲೆಬ್ರಿಟಿಗಳಿಗೆ ಜೋಡಿ ಆಹ್ವಾನ ನೀಡಿರಲಿಲ್ಲ. ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿ ಆಗಿದ್ದರು.

3 / 7
ಈ ಕಾರ್ಯಕ್ರಮದಲ್ಲಿ ರಾಮ್ ಚರಣ್, ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಗಿ ಆದರು.

4 / 7
ಇನ್ನು, ಕುಟುಂಬದ ಫೋಟೋ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಇಡೀ ಕುಟುಂಬ ಒಂದೇ ಕಡೆ ಸೇರಿತ್ತು. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇತ್ತು.

5 / 7
ರಶ್ಮಿಕಾ ಮಂದಣ್ಣ ಬಹುತೇಕ ತಾಯಿ ರೀತಿಯಲ್ಲೇ ಇದ್ದಾರೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು, ರಶ್ಮಿಕಾ ಅವರ ಸಹೋದರಿ ಶಿಮಾನ್ ಮಂದಣ್ಣ ಕೂಡ ಗಮನ ಸೆಳೆದರು.

6 / 7
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮದುವೆಗಿಂತ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಿತ್ತು.

7 / 7

Published On - 6:58 am, Thu, 5 March 26

Follow Us