ಬಿಗ್ ಬಾಸ್ಗೆ ರೀ ಎಂಟ್ರಿ ಪಡೆದು ಡಲ್ ಆದ ಸಂಜನಾ ಗಲ್ರಾನಿ
ಕನ್ನಡದ ನಟಿ ಸಂಜನಾ ಗಲ್ರಾನಿ ಅವರು ಕನ್ನಡ ಬಿಗ್ ಬಾಸ್ನಲ್ಲಿ ಸ್ಪರ್ಧಿಸಿದ್ದರು. ಅದು ಕೂಡ ಮೊದಲ ಸೀಸನ್ನಲ್ಲಿ. ಈಗ ಹಲವು ವರ್ಷಗಳ ಬಳಿಕ ಅವರು ತೆಲುಗು ಬಿಗ್ ಬಾಸ್ಗೆ ತೆರಳಿದ್ದಾರೆ. ಅಲ್ಲಿ ಅವರು ಟಫ್ ಸ್ಪರ್ಧಿ ಆಗಿದ್ದಾರೆ. ಅವರು ಈಗ ಸಾಕಷ್ಟು ಡಲ್ ಆಗಿದ್ದಾರೆ.
Updated on:Oct 23, 2025 | 12:54 PM

ಸಂಜನಾ ಗಲ್ರಾಣಿ ಅವರು ‘ಬಿಗ್ ಬಾಸ್ ತೆಲುಗು’ನಲ್ಲಿ ಸಾಕಷ್ಟು ಛಾಪು ಮೂಡಿಸಿದರು. ಅವರು ಈ ಮೊದಲು ಎಲಿಮಿನೇಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ ಅವರು ರೀ ಎಂಟ್ರಿ ಪಡೆದುಕೊಂಡಿದ್ದಾರೆ ಅನ್ನೋದು ವಿಶೇಷ.

ಮನೆಯವರೇ ನಿರ್ಧರಿಸಿ ಸಂಜನಾ ಅವರನ್ನು ಹೊರಹಾಕಿದ್ದರು. ಬಿಗ್ ಬಾಸ್ ಮನೆ ಮಂದಿ ನಾಮಿನೇಟ್ ಮಾಡುವ ಅಧಿಕಾರವನ್ನಷ್ಟೇ ಪಡೆದಿದ್ದಾರೆ. ಅವರನ್ನು ಹೊರಹಾಕುವ ಅಧಿಕಾರ ಯಾರಿಗೂ ಇಲ್ಲ. ಈ ಕಾರಣಕ್ಕೆ ಒಂದು ವಾರ ಬಿಟ್ಟು ಅವರು ರೀ ಎಂಟ್ರಿ ಪಡೆದರು.

ಸಂಜನಾ ಗಲ್ರಾಣಿ ಅವರು ಬಿಗ್ ಬಾಸ್ನಲ್ಲಿ ರೀ ಎಂಟ್ರಿ ಪಡೆದ ಬಳಿಕ ಜೋಶ್ನಲ್ಲೇನೋ ಇದ್ದರು. ಆದರೆ, ಇತ್ತೀಚೆಗೆ ಅವರು ಡಲ್ ಆದಂತೆ ಕಾಣಿಸುತ್ತಿದೆ. ಅಲ್ಲದೆ, ಅವರಿಗೆ ಬೀಳುತ್ತಿರುವ ವೋಟ್ ಶೇರ್ ಕೂಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಮನಯೆಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಅವರ ಮೇಲೆ ಫೋಕಸ್ ಹೆಚ್ಚಿರುವುದರಿಂದ ಸಂಜನಾ ಮಾಡ್ತಿರೋ ಸರ್ಕಸ್ಗಳು ಹೆಚ್ಚು ಕೆಲಸ ಮಾಡುತ್ತಿಲ್ಲ. ಅವರು ಫಿನಾಲೆವರೆಗೆ ಇರುವ ಕನಸು ಕಾಣುತ್ತಿದ್ದಾರೆ.

ಸಂಜನಾ ಗಲ್ರಾಣಿ ಅವರು ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನಗಳ ಕಾಲ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರು ಈಗಲೇ ಫಿನಾಲೆ ಕನಸು ಕಾಣುತ್ತಿದ್ದಾರೆ. ಕನ್ನಡದವರ ಬಳಿಯೂ ವೋಟ್ಗಾಗಿ ಅವರು ಕೋರಿಕೆ ಇಡುತ್ತಿದ್ದಾರೆ.
Published On - 12:43 pm, Thu, 23 October 25




