- Kannada News Photo gallery Sanya Iyer Looks entirely different In her New Photoshoot Entertainment News In Kannada
ಇವರೇನಾ ಸಾನ್ಯಾ ಅಯ್ಯರ್? ಗುರುತೇ ಸಿಗದಷ್ಟು ಬದಲಾದ ನಟಿ
ಸಾನ್ಯಾ ಅಯ್ಯರ್ ಅವರ ಹೊಸ ಫೋಟೋಶೂಟ್ನಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರ ಹೇರ್ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ. ಅವರು ಕಣ್ಣಿಗೆ ಕನ್ನಡಕ ಹಾಕಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
Updated on: Nov 11, 2024 | 11:48 AM

ನಟಿ ಸಾನ್ಯಾ ಅಯ್ಯರ್ ಅವರು ‘ಪುಟ್ಟಗೌರಿಯ ಮದುವೆ’ ರೀತಿಯ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದವರು. ಅವರು ಆ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಕಾಣಿಸಿಕೊಂಡರು. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ಸಾನ್ಯಾ ಅಯ್ಯರ್ ಅವರ ಹೊಸ ಫೋಟೋಶೂಟ್ನಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರ ಹೇರ್ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ. ಅವರು ಕಣ್ಣಿಗೆ ಕನ್ನಡಕ ಹಾಕಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರನ್ನು ಕೆಲವರು ಹಾಲಿವುಡ್ ಹೀರೋಯಿನ್ಗಳಿಗೆ ಹೋಲಿಕೆ ಮಾಡಿದ್ದಾರೆ.

ಸಾನ್ಯಾ ಅಯ್ಯರ್ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಅವ ವರು ‘ಗೌರಿ’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಅವರು ಖಾತೆ ತೆರೆದಿದ್ದಾರೆ.

ಸದ್ಯ ಸಾನ್ಯಾ ಅಯ್ಯರ್ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರು ಮತ್ತೆ ಕಿರುತೆರೆ ಲೋಕದಲ್ಲಿ ಮಿಂಚಲಿ ಎಂಬುದು ಅವರ ಅಭಿಮಾನಿಗಳ ಕೋರಿಕೆಗಳಲ್ಲಿ ಒಂದು.



















