- Kannada News Photo gallery Shivarajkumar Hugged Kichcha Sudeep Before Going To Surgery To America Cinema News in Kannada
ಸರ್ಜರಿಗಾಗಿ ಅಮೆರಿಕಕ್ಕೆ ಹೊರಟ ಶಿವಣ್ಣನಿಗೆ ಸುದೀಪ್ ಪ್ರೀತಿಯ ಅಪ್ಪುಗೆ; ಇಲ್ಲಿವೆ ಫೋಟೋಸ್
ಶಿವರಾಜ್ಕುಮಾರ್ ಅವರಿಗೆ ಆರೋಗ್ಯ ಕೈಕೊಟ್ಟ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಇತ್ತೀಚೆಗೆ ಅವರೇ ಈ ವಿಚಾರವನ್ನು ಖಚಿಪಡಿಸಿದ್ದರು. ತಮಗೆ ಅನಾರೋಗ್ಯ ಆಗಿದೆ ಎಂಬುದನ್ನು ಹೇಳಿದ್ದರು ಶಿವಣ್ಣ. ಆದರೆ, ಏನಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಈಗ ಶಿವರಾಜ್ಕುಮಾರ್ ಅವರು ಅಮೆರಿಕ ಹೊರಟಿದ್ದಾರೆ. ಅವರಿಗೆ ಕಿಚ್ಚ ವಿಶ್ ಮಾಡಿದ್ದಾರೆ.
Updated on: Dec 18, 2024 | 2:55 PM

ಶಿವರಾಜ್ಕುಮಾರ್ ಅವರು ಸರ್ಜರಿಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು (ಡಿಸೆಂಬರ್ 18) ಸಂಜೆ ವೇಳೆಗೆ ಅವರು ಅಮೆರಿಕಕ್ಕೆ ಪ್ರವಾಸ ಬೆಳೆಸಲಿದ್ದಾರೆ. ಅದಕ್ಕೂ ಮೊದಲು ಅನೇಕ ಗಣ್ಯರು, ಗೆಳೆಯರು, ಕುಟುಂಬದವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ.

ಶಿವರಾಜ್ಕುಮಾರ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇವರಿಬ್ಬರದ್ದೂ ಅಣ್ಣ-ತಮ್ಮ ಸಂಬಂಧ. ಈಗ ಶಿವರಾಜ್ಕುಮಾರ್ ಅವರು ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ಅವರ ನಿವಾಸಕ್ಕೆ ಸುದೀಪ್ ಬಂದಿದ್ದಾರೆ.

ಶಿವಣ್ಣ ಅವರು ಎದುರು ಕಾಣುತ್ತಿದ್ದಂತೆ ಸುದೀಪ್ ಅವರು ಪ್ರೀತಿಯಿಂದ ಹಗ್ ಕೊಟ್ಟರು. ಇದು ಭಾವನಾತ್ಮಕ ಅಪ್ಪುಗೆ ಆಗಿತ್ತು. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಇವರ ಬಾಂಧವ್ಯ ಕಂಡು ಎಲ್ಲರೂ ಕೊಂಡಾಡುತ್ತಿದ್ದಾರೆ.

ಶಿವರಾಜ್ಕುಮಾರ್ ಅವರಿಗೆ ಇರುವ ಅನಾರೋಗ್ಯದ ವಿಚಾರ ತಿಳಿದು ಸುದೀಪ್ ಗಾಬರಿಗೊಂಡಿದ್ದರು. ಆದರೆ, ಶಿವಣ್ಣ ಅವರ ಪಾಸಿಟಿವ್ ಎನರ್ಜಿಯಿಂದ ಅವರು ಖುಷಿಪಟ್ಟಿದ್ದಾರೆ. ಈಗ ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಮಿಯಾಮಿಗೆ ತೆರಳುತ್ತಿದ್ದಾರೆ. ಹೀಗಾಗಿ, ಕಿಚ್ಚ ಶುಭ ಹಾರೈಸಿದ್ದಾರೆ. ಅವರು ಸಂಪೂರ್ಣ ಚೇತರಿಕೆ ಕಾಣಲಿ ಎಂದು ಕೋರಿದ್ದಾರೆ.

ಮುಂದಿನ ವಾರ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಗೆಲುವು ಕಾಣಲಿ ಎಂಬ ಆಶಯದಲ್ಲಿ ಸುದೀಪ್ ಇದ್ದಾರೆ. ಈ ಕಾರಣಕ್ಕೆ ಅವರು ಶಿವರಾಜ್ಕುಮಾರ್ ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.




