Shobha Shetty: ಕಣ್ಣೀರ ಧಾರೆ; ಕೆಲವೇ ದಿನಗಳಲ್ಲಿ ಸುಸ್ತಾಗಿ ಹೋದ ಶೋಭಾ ಶೆಟ್ಟಿ
ಶೋಭಾ ಶೆಟ್ಟಿ ಬಿಗ್ ಬಾಸ್ಗೆ ಬಂದ ಮೊದಲ ವಾರ ಕೂಗಾಡಿದ್ದರು. ಮಂಜು ವಿರುದ್ಧ ಅವರು ಭರ್ಜರಿ ವಾದ ನಡೆಸಿದ್ದರು. ಇದನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದರು. ಅದೇ ಕೊನೆ ಅದಾದ ಬಳಿಕ ಶೋಭಾ ಥಂಡ್ ಆಗಿದ್ದಾರೆ.
Updated on: Nov 29, 2024 | 8:53 AM

ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್ನಲ್ಲಿ ಸಾಕಷ್ಟು ಆವೇಶದಿಂದ ಆಟ ಆಡಿದ್ದರು. ಈಗ ಅವರು ಕನ್ನಡ ಬಿಗ್ ಬಾಸ್ಗೆ ಬಂದಿದ್ದಾರೆ. ಇದನ್ನು ನೋಡಿ ಅನೇಕರು ಅವರು ಇದೇ ಆಟವನ್ನು ಇಲ್ಲಿಯೂ ಮುಂದುವರಿಸಬಹುದು ಎಂದುಕೊಂಡಿದ್ದರು.

ಶೋಭಾ ಶೆಟ್ಟಿ ಬಿಗ್ ಬಾಸ್ಗೆ ಬಂದ ಮೊದಲ ವಾರ ಕೂಗಾಡಿದ್ದರು. ಮಂಜು ವಿರುದ್ಧ ಅವರು ಭರ್ಜರಿ ವಾದ ನಡೆಸಿದ್ದರು. ಇದನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದರು. ಅದೇ ಕೊನೆ ಅದಾದ ಬಳಿಕ ಶೋಭಾ ಥಂಡ್ ಆಗಿದ್ದಾರೆ.

ಮೊದಲ ಟಾಸ್ಕ್ನಲ್ಲಿ ಇಂಜುರಿ ಹಾಗೂ ಸೋಲಿನ ಕಾರಣಕ್ಕೆ ಶೋಭಾ ಕಣ್ಣೀರು ಹಾಕಿದ್ದರು. ಈಗ ಅವರು ಮತ್ತೆ ಅತ್ತಿದ್ದಾರೆ. ಶೋಭಾ ಶೆಟ್ಟಿ ಅಳುವಿನ ಹಿಂದೆ ಸಾಕಷ್ಟು ನೋವಿದೆ. ಅವರ ಉಗ್ರ ಸ್ವರೂಪ ಎಲ್ಲಿ ಹೋಯಿತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ನಲ್ಲಿ ಎರಡನೇ ರೌಂಡ್ನಲ್ಲಿ ಶೋಭಾಗೆ ಅವಕಾಶ ಕೊಡೋದಾಗಿ ಅವರ ತಂಡದ ನಾಯಕಿ ಮೋಕ್ಷಿತಾ ಹೇಳಿದ್ದರು. ಆದರೆ ಆ ಬಳಿಕ ಆಟವೇ ರದ್ದಾಗಿ ಹೋಯಿತು.

ಇದು ಶೋಭಾಗೆ ಬೇಸರ ಮೂಡಿಸಿದೆ. ಆಡೋಕೆ ಅವಕಾಶ ಸಿಗಲಿಲ್ಲವಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



