Updated on:Mar 06, 2023 | 4:32 PM
ಹೋಳಿ ಹುಣ್ಣಿಮೆ ಬಂದರೆ ಸಾಕು ಎಲ್ಲೆಲ್ಲೂ ಬಣ್ಣಗಳದ್ದೇ ಕಲರವ. ಬೀದಿ ಬೀದಿಗಳಲ್ಲಿ ಪರಸ್ಪರ ಬಣ್ಣ ಎರಚುತ್ತ ಕುಣಿದು ಕುಪ್ಪಳಿಸುತ್ತಾರೆ. ಈ ಹಬ್ಬದ ಸಮಯದಲ್ಲೇ ಶಿರಸಿಯಲ್ಲಿ ವಿಶೇಷ ಆಚರಣೆಯೊಂದು ನಡೆಯುತ್ತದೆ. ಬೀದಿ ಬೀದಿಗಳಲ್ಲಿ ಬೇಡರ ವೇಷ ಧರಿಸಿ ಕುಣಿಯುತ್ತಾರೆ. (ಚಿತ್ರ: ಸಾಮಾಜಿಕ ಜಾಲತಾಣ)
ನವಿಲು ಗರಿಗಳ ಪದರು, ಗೆಜ್ಜೆ, ದಪ್ಪ ಮೀಸೆ, ಕೆಂಪು ಬಟ್ಟೆ, ಕತ್ತಿ, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡು ನಗರದ ಬೀದಿಗಳಲ್ಲಿ ಢನ್ಕ ನಕ ಢನ್ಕ ನಕ ಶಬ್ಧಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಮಧ್ಯೆ ಕತ್ತಿ ಬೀಸುತ್ತ ಜನರನ್ನು ರಂಜಿಸುತ್ತಾರೆ. (ಚಿತ್ರ: ಸಾಮಾಜಿಕ ಜಾಲತಾಣ)
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅತ್ಯಂತ ವಿಶಿಷ್ಟ ಜನಪದ ಕಲೆ ಬೇಡರ ವೇಷ. ಇದು ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. (ಚಿತ್ರ: ಸಾಮಾಜಿಕ ಜಾಲತಾಣ)
ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಬೀದಿ ಬೀದಿಗಳಲ್ಲಿ ಸಂಚರಿಸಿ ನೃತ್ಯ ಮಾಡಿ ತನ್ನ ರೌದ್ರ ರೂಪದ ದರ್ಶನ ಮಾಡಿಸುತ್ತಾರೆ ಈ ಬೇಡ ವೇಷಧಾರಿಗಳು. ಹೋಳಿ ಹಬ್ಬದ ನಾಲ್ಕುದಿನ ಹಿಂದೆಯಿಂದಲೇ ಶುರುವಾಗುವ ಬೇಡರ ಕುಣಿತ ಹೋಳಿ ಹಬ್ಬದಂದು ಬಣ್ಣಗಳ ಹಬ್ಬದ ಮೂಲಕ ಮುತ್ತಾಯಗೊಳುತ್ತೆ. (ಚಿತ್ರ: ಸಾಮಾಜಿಕ ಜಾಲತಾಣ)
ಅಪ್ಪಟ ಜನಪದ ಶೈಲಿಯ ಈ ವೇಷಕ್ಕೆ ಬಣ್ಣ ಹಚ್ಚಲು ಮುಸ್ಸಂಜೆಯಿಂದ ರಾತ್ರಿಯ ವರೆಗೂ ಸಮಯ ಬೇಕಾಗುತ್ತೆ. ಬಹಳ ವರ್ಷಗಳಿಂದ ಬಣ್ಣ ಹಚ್ಚುವ ಕೆಲಸ ಮಾಡಿ ನಿಪುಣರಾದ ಕಲಾವಿದರು ಮಾತ್ರ ಈ ಕೆಲಸವನ್ನು ಮಾಡಲು ಸಾಧ್ಯ. (ಚಿತ್ರ: ಸಾಮಾಜಿಕ ಜಾಲತಾಣ)
300 ವರ್ಷ ಇತಿಹಾಸವಿರುವ ಬೇಡರ ವೇಷದ ಹಿಂದೆ ಅನೇಕ ಕಥೆಗಳಿವೆ. ಹೋಳಿ ಹುಣ್ಣಿಮೆಯ ರಾತ್ರಿ ಈ ಬೇಡ ವೇಷಧಾರಿಗಳು ವೀರಾವೇಷದಿಂದ ಕುಣಿಯುತ್ತಾರೆ. (ಚಿತ್ರ: ಸಾಮಾಜಿಕ ಜಾಲತಾಣ)
ರಸ್ತೆ ತುಂಬೆಲ್ಲ ತಮಟೆ, ಡೋಲುಗಳ ನಾದಕ್ಕೆ ಹೆಜ್ಜೆ ಹಾಕುತ್ತಾರೆ. ಇದನ್ನು ನೋಡಲು ಜನ ಸಾಗರವೇ ಸೇರಿತ್ತೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಈ ಆಚರಣೆ ಚಿರ ಪರಿಚಿತ. (ಚಿತ್ರ: ಸಾಮಾಜಿಕ ಜಾಲತಾಣ)
ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ ಕೂಡ ಎರಡು ವರ್ಷಗಳಿಗೊಮ್ಮೆ ನಡೆಯುತ್ತೆ. ಜಾತ್ರೆ ಇಲ್ಲದ ವರ್ಷ ಇಲ್ಲಿ ಬೇಡರ ವೇಷ ನಡೆದರೆ, ಬೇಡರ ವೇಷ ನಡೆಯದ ವರ್ಷ ಜಾತ್ರೆ ನಡೆಯುತ್ತೆ. (ಚಿತ್ರ: ಸಾಮಾಜಿಕ ಜಾಲತಾಣ)
Published On - 4:31 pm, Mon, 6 March 23