AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ಚರಿತಂ’ ನಾಟಕ ವೀಕ್ಷಿಸಿ ಐದು ನಿಮಿಷ ಚಪ್ಪಾಳೆ ತಟ್ಟಿದ ಪ್ರೇಕ್ಷಕರು

ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ‘ಸೀತಾ ಚರಿತಂ’ ನಾಟಕದ ಭವ್ಯ ಪ್ರದರ್ಶನ ನಡೆಯಿತು. 513 ಕಲಾವಿದರ ಭಾಗವಹಿಸುವಿಕೆಯೊಂದಿಗೆ, ಈ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಪ್ರದರ್ಶನದ ಅಂತ್ಯದಲ್ಲಿ, ಪ್ರೇಕ್ಷಕರು ಐದು ನಿಮಿಷಗಳ ಕಾಲ ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 08, 2025 | 11:12 AM

Share
ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಗ್ರ್ಯಾಂಡ್ ಥಿಯೇಟರ್‌ನಲ್ಲಿ ‘ಸೀತಾ ಚರಿತಂ’ ನಾಟಕದ ಪ್ರಥಮ ಪ್ರದರ್ಶನ ನಡೆಯಿತು. ಸುಮಾರು 513 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಈ ಪ್ರಥಮ ಪ್ರದರ್ಶನದ ನಂತರ, ಪ್ರೇಕ್ಷಕರು ಎದ್ದು ನಿಂತು 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. ನರ್ತಕಿ ಶ್ರೀವಿದ್ಯಾ ಪ್ರೇಮ್ವಿ ಸೀತಾ ಚರಿತಂ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

1 / 5
ಈ ನಾಟಕ ವೀಕ್ಷಣೆಗೆ ಪ್ರಸಿದ್ಧ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಕೂಡ ಆಗಮಿಸಿದ್ದರು. ನಾಟಕ ನೋಡಿ ಖುಷಿ ಆದರು.  ‘ನಾನು ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ. ಶ್ರೀವಿದ್ಯಾ ನಿರ್ದೇಶಕಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು. ಜನಪ್ರಿಯ ನಟಿ ಹಿನಾ ಖಾನ್ ‘ನನಗೆ ಕಾರ್ಯಕ್ರಮ ತುಂಬಾ ಇಷ್ಟವಾಯಿತು. ಇಡೀ ಕಾರ್ಯಕ್ರಮದ ಉದ್ದಕ್ಕೂ ನಾನು ರೋಮಾಂಚನಗೊಂಡೆ. ಶ್ರೀವಿದ್ಯಾ ಸೀತೆಯ ವ್ಯಕ್ತಿತ್ವದಂತೆ ಕಾಣುತ್ತಿದ್ದರು. ಎಲ್ಲಾ ನಟರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚಿಕೊಂಡರು.

2 / 5
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ಗಾಯಕಿ ಅನುರಾಧಾ ಪೌಡ್ವಾಲ್, ಹಿರಿಯ ನಟರಾದ ಪಂಕಜ್ ಬೆರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಧಾರಾವಿಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಉಚಿತ ಶಾಲೆಯ 50 ಕ್ಕೂ ಹೆಚ್ಚು ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

3 / 5
‘ಸೀತಾ ಚರಿತಂ’ ಕಾರ್ಯಕ್ರಮದ ಬಗ್ಗೆ ಅನುರಾಧಾ ಪೌಡ್ವಾಲ್ ಮಾತನಾಡಿದ್ದಾರೆ. ‘ಇದು ನಮಗೆ ಅದ್ಭುತ ಅನುಭವವಾಗಿತ್ತು. ಇದಕ್ಕಾಗಿ ಬಹಳಷ್ಟು ಶ್ರಮ ಬೇಕಾಯಿತು. ನಮ್ಮ ಸಂಸ್ಕೃತಿಯನ್ನು ಹರಡಲು ಮತ್ತು ಮಕ್ಕಳಲ್ಲಿ ಧರ್ಮದ ಬಗ್ಗೆ ಆಸಕ್ತಿ ಮೂಡಿಸಲು ಇದು ಒಂದು ಪ್ರಮುಖ ಮಾರ್ಗವಾಗಿದೆ’ ಎಂದಿದ್ದಾರೆ.

4 / 5
‘ಸೀತಾ ಚರಿತಂ’  ನಾಟಕವನ್ನು ರಾಮಾಯಣದ 20 ಕ್ಕೂ ಹೆಚ್ಚು ಆವೃತ್ತಿಗಳನ್ನು ಅಧ್ಯಯನ ಮಾಡಿ ರಚಿಸಲಾಗಿದೆ. ಶ್ರೀ ಶ್ರೀ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಬರೆಯಲಾಗಿದೆ. ಈ ಪ್ರದರ್ಶನವು ಶಾಸ್ತ್ರೀಯ ನೃತ್ಯ, ಜಾನಪದ ಕಲೆ, ಬೊಂಬೆಯಾಟ, ಮೂಲ ಸಂಗೀತ ಮತ್ತು ಡಿಜಿಟಲ್ ಯುಗದ ಮಿಶ್ರಣದ ಮೂಲಕ ಸೀತೆಯ ಜೀವನದ ಪ್ರೀತಿ, ತ್ಯಾಗ, ಜ್ಞಾನ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. 1327 ಆರ್ಟ್ ಆಫ್ ಲಿವಿಂಗ್ ಉಚಿತ ಶಾಲೆಗಳಲ್ಲಿ ಕಲಿಯುತ್ತಿರುವ 1 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಇದರಲ್ಲಿ ಸಂಗ್ರಹಿಸಿದ ಹಣ ಬಳಕೆ ಆಗಲಿದೆ.

5 / 5

Published On - 11:07 am, Tue, 8 July 25

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ

ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್