‘ಕೆಜಿಎಫ್ 2’ ಬಳಿಕ ಶ್ರೀನಿಧಿ ಶೆಟ್ಟಿ ಸೈಲೆಂಟ್; ಈಗ ಕನ್ನಡದ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ
‘ಕೆಜಿಎಫ್’ ಶ್ರೀನಿಧಿ ಶೆಟ್ಟಿ ಅವರ ಮೊದಲ ಸಿನಿಮಾ. ‘ಕೆಜಿಎಫ್ 2’ ಅವರ ಎರಡನೇ ಸಿನಿಮಾ. ಮರೂನೇ ಸಿನಿಮಾ ತಮಿಳಿನಲ್ಲಿ. ಆ ಬಳಿಕ ಅವರು ಸಿನಿಮಾ ಮಾಡಿರಲೇ ಇಲ್ಲ. ಈಗ ಅವರ ನಟನೆಯ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿ ಆಗುತ್ತಿದೆ. ಅಲ್ಲದೆ, ಕನ್ನಡದ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆಗುತ್ತಿದ್ದಾರೆ.
Updated on: Apr 21, 2025 | 12:45 PM

ಶ್ರೀನಿಧಿ ಶೆಟ್ಟಿ ಅವರು ಮಾಡೆಲ್ ಆಗಿ ಗಮನ ಸೆಳೆದವರು. ಆ ಬಳಿಕ ಅವರಿಗೆ ‘ಕೆಜಿಎಫ್’ ಚಿತ್ರದಲ್ಲಿ ನಟಿಸೋ ಆಫರ್ ಸಿಕ್ಕಿತು. ಈ ಸಿನಿಮಾದಲ್ಲಿ ನಟಿಸಿದ ಬಳಿಕ ಶ್ರೀನಿಧಿ ಶೆಟ್ಟಿ ವೃತ್ತಿ ಜೀವನ ಬದಲಾಯಿತು. ಎರಡನೇ ಪಾರ್ಟ್ನಲ್ಲೂ ಶ್ರೀನಿಧಿ ಅವರು ನಟಿಸಿದರು.

‘ಕೆಜಿಎಫ್’ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದ ಬಳಿಕ ನಟಿಯರಿಗೆ ಸಾಲು ಸಾಲು ಆಫರ್ಗಳು ಬರುತ್ತವೆ. ಅದನ್ನು ಬಾಚಿಕೊಂಡು ನಟಿಯರು ಸೆಟಲ್ ಆಗುತ್ತಾರೆ. ಆದರೆ, ಶ್ರೀನಿಧಿ ಶೆಟ್ಟಿ ಆ ರೀತಿ ಮಾಡಲೇ ಇಲ್ಲ ಅನ್ನೋದು ವಿಶೇಷ.

‘ಕೆಜಿಎಫ್ 2’ ಬಳಿಕ ರಿಲೀಸ್ ಆಗಿದ್ದು ತಮಿಳಿನ ‘ಕೋಬ್ರಾ’ ಸಿನಿಮಾ ಮಾತ್ರ. ಆ ಬಳಿಕ ಶ್ರೀನಿಧಿ ಶೆಟ್ಟಿ ಕಳೆದೇ ಹೋದರು. ಅವರು ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಯಿತು. ಈಗ ಅವರು ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ.

ತೆಲುಗಿನ ‘ಹಿಟ್ 3’ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ. ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ. ನಾನಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಶ್ರೀನಿಧಿ ಕಂಬ್ಯಾಕ್ ಮಾಡುತ್ತಿದ್ದು ಅವರು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಶ್ರೀನಿಧಿ ಶೆಟ್ಟಿ ಅವರ ಕೈಯಲ್ಲಿ ಸದ್ಯ ‘ತೆಲುಸು ಕಾದ’ ಮೊದಲಾದ ಚಿತ್ರಗಳಿವೆ. ‘ಕಿಚ್ಚ 47’ ಚಿತ್ರಕ್ಕೆ ಅವರೇ ನಾಯಕಿ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ವಿಚಾರ ನಿಜವೇ ಆದಲ್ಲಿ ಫ್ಯಾನ್ಸ್ ಪಾಲಿಗೆ ಖುಷಿ ಆಗೋದು ಗ್ಯಾರಂಟಿ. ಈ ಚಿತ್ರದ ಮೂಲಕ ಅವರು ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದಂತೆ ಆಗುತ್ತದೆ.



















