- Kannada News Photo gallery Tara Anuradha requests DK Shivakumar to give Karnataka Ratna to Ambareesh
ಅಂಬರೀಷ್ಗೂ ‘ಕರ್ನಾಟಕ ರತ್ನ’ ಕೊಡಿ: ಸರ್ಕಾರಕ್ಕೆ ಮನವಿ ಮಾಡಿದ ನಟಿ ತಾರಾ
ಇತ್ತೀಚೆಗೆ ನಟ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಯಿತು. ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೂ ಈ ಗೌರವ ಸಲ್ಲಬೇಕು ಎಂದು ಅಭಿಮಾನಿಗಳು ಹೇಳಲಾರಂಭಿಸಿದರು. ಈಗ ನಟಿ ತಾರಾ ಅವರು ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
Updated on: Sep 15, 2025 | 10:44 PM

ನಟಿ ತಾರಾ ಅನುರಾಧಾ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮನವಿ ನೀಡಿದ್ದಾರೆ. ನಟ ಅಂಬರೀಷ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ತಾರಾ ಅವರು ಕೋರಿದ್ದಾರೆ.

ಕೈ ಬರಹದಿಂದ ಬರೆದಿರುವ ಮನವಿ ಪತ್ರವನ್ನು ಡಿಕೆ ಶಿವಕುಮಾರ್ ಅವರಿಗೆ ತಾರಾ ನೀಡಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಅವರು ಮನವಿ ಸಲ್ಲಿಸಿದ್ದಾರೆ. ಇದರಿಂದ ಅಂಬರೀಷ್ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

‘ಅಂಬರೀಷ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂಬುದು ಎಲ್ಲ ಕಲಾವಿದರು ಮತ್ತು ಅಭಿಮಾನಿಗಳ ಕೋರಿಕೆ. ತಾವು ಅವರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದು, ಅವರಿಗೆ ಸಲ್ಲಬೇಕಾದ ಸನ್ಮಾನ ಪಾಲಿಸಿ’ ಎಂದು ತಾರಾ ಬರೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರು ಸ್ಟಾರ್ ನಟನಾಗಿದ್ದರು. ಚಿತ್ರರಂಗದ ಬೆಳವಣಿಗೆಗೆ ಅವರ ಕೊಡುಗೆ ಕೂಡ ಸಾಕಷ್ಟು ಇದೆ. ನಟನಾಗಿ ಅಷ್ಟೇ ಅಲ್ಲದೇ, ರಾಜಕಾರಣಿ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.

ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ನೀಡಿದ್ದು ಖುಷಿಯ ಸಂಗತಿ. ಅದೇ ರೀತಿ ನಟ ಅಂಬರೀಷ್ ಅವರಿಗೂ ಈ ಪ್ರಶಸ್ತಿ ಸಲ್ಲಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.




