- Kannada News Photo gallery Urvashi Rautela costume in Agent movie Wild Saala song reportedly costs Rs 20 lakh
Urvashi Rautela: ಊರ್ವಶಿ ರೌಟೇಲಾ ಧರಿಸಿದ ಈ ಬಟ್ಟೆಯ ದುಡ್ಡಿನಲ್ಲಿ ಒಂದು ಮನೆ ಕಟ್ಟಬಹುದು; ಹೌಹಾರಿದ ನೆಟ್ಟಿಗರು
Agent Movie Wild Saala Song: ಊರ್ವಶಿ ರೌಟೇಲಾ ಅವರ ಕಾಸ್ಟ್ಯೂಮ್ಗಾಗಿ ನಿರ್ಮಾಪಕರು ಈ ಪರಿ ಖರ್ಚು ಮಾಡಿದ್ದಾರೆ. ಈ ಬಟ್ಟೆಯಲ್ಲಿ ಅಂಥ ವಿಶೇಷತೆ ಏನಿದೆ ಎಂದು ನೆಟ್ಟಿಗರು ಪತ್ತೆ ಹಚ್ಚುತ್ತಿದ್ದಾರೆ.
Updated on: Apr 28, 2023 | 6:40 PM

ನಟಿ ಊರ್ವಶಿ ರೌಟೇಲಾ ಅವರು ಬಹುಭಾಷೆಯಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಭಾರತದಲ್ಲಿ ಅವರಿಗೆ ಬೇಡಿಕೆ ಇದೆ. ‘ಏಜೆಂಟ್’ ಸಿನಿಮಾದ ಒಂದು ಹಾಡಿನಲ್ಲಿ ಅವರು ಹೆಜ್ಜೆ ಹಾಕಿದ್ದಾರೆ.

ಏಪ್ರಿಲ್ 28ರಂದು ಬಿಡುಗಡೆ ಆಗಿರುವ ‘ಏಜೆಂಟ್’ ಸಿನಿಮಾದ ‘ವೈಲ್ಡ್ ಸಾಲಾ..’ ಹಾಡಿನಲ್ಲಿ ಅಖಿಲ್ ಅಕ್ಕಿನೇನಿ ಮತ್ತು ಊರ್ವಶಿ ರೌಟೇಲಾ ಜೊತೆಯಾಗಿ ಕುಣಿದಿದ್ದಾರೆ. ಅಭಿಮಾನಿಗಳಿಗೆ ಈ ಹಾಡು ಇಷ್ಟವಾಗಿದೆ.

ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಊರ್ವಶಿ ರೌಟೇಲಾ ಅವರು ‘ವೈಲ್ಡ್ ಸಾಲಾ..’ ಹಾಡಿನಲ್ಲಿ ಧರಿಸಿದ ಬಟ್ಟೆಯ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ! ಈ ವಿಚಾರ ತಿಳಿದು ನೆಟ್ಟಿಗರು ಹೌಹಾರಿದ್ದಾರೆ.

ಊರ್ವಶಿ ರೌಟೇಲಾ ಧರಿಸಿದ ಈ ಬಟ್ಟೆಯಲ್ಲಿ ಅಂಥ ವಿಶೇಷತೆ ಏನಿದೆ ಎಂದು ನೆಟ್ಟಿಗರು ಪತ್ತೆ ಹಚ್ಚುತ್ತಿದ್ದಾರೆ. ನ್ಯೂಯಾರ್ಕ್ ಮೂಲದ ಕಂಪನಿಯೊಂದು ಇದನ್ನು ಡಿಸೈನ್ ಮಾಡಿದೆ. ಅದಕ್ಕಾಗಿ ನಿರ್ಮಾಪಕರು ಈ ಪರಿ ಖರ್ಚು ಮಾಡಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಊರ್ವಶಿ ರೌಟೇಲಾ ಅವರು ನಟಿಸುತ್ತಿದ್ದಾರೆ. ಹೆಚ್ಚಾಗಿ ಅವರಿಗೆ ಐಟಂ ಸಾಂಗ್ ಅವಕಾಶಗಳು ಸಿಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಅವರು ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ.



















