- Kannada News Photo gallery Vaishnavi Gowda And Gagan Chinnappa Starrer Seetha Raama Serial tittle song getting Good Response
‘ಸೀತಾ ರಾಮ’ ಟೈಟಲ್ ಗೀತೆಯಲ್ಲಿ ಗಮನ ಸೆಳೆದ ವೈಷ್ಣವಿ; ಧಾರಾವಾಹಿ ಕಥೆಯ ಬಗ್ಗೆ ಮೂಡಿದೆ ಕುತೂಹಲ
Vaishnavi Gowda: ಇತ್ತೀಚೆಗೆ ಧಾರಾವಾಹಿಯ ಟೈಟಲ್ ಸಾಂಗ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿ ಜುಲೈ 17ರಿಂದ ಪ್ರಸಾರ ಕಾಣುತ್ತಿದೆ.
Updated on: Jun 27, 2023 | 1:19 PM

ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ನಟನೆಯ ‘ಸೀತಾ ರಾಮ’ ಧಾರಾವಾಹಿ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿದೆ. ವೈಷ್ಣವಿ ಗೌಡ ಅವರು ಸೀತಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರೆ, ಗಗನ್ ಅವರು ರಾಮ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ಈ ಧಾರಾವಾಹಿ ಪ್ರೋಮೋ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇತ್ತೀಚೆಗೆ ಧಾರಾವಾಹಿಯ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಈ ಧಾರಾವಾಹಿ ಜುಲೈ 17ರಿಂದ ಪ್ರಸಾರ ಕಾಣುತ್ತಿದೆ.

ಕೇಳುಗರಿಂದ ಈ ಹಾಡಿಗೆ ಸಖತ್ ಮೆಚ್ಚುಗೆ ಸಿಗುತ್ತಿದೆ. ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ ಕಾಂಬಿನೇಷನ್ ಇಷ್ಟವಾಗಿದೆ.

ರೀತು ಸಿಂಗ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾಳೆ. ಈ ಬಾಲಕಿಯ ನಟನೆ ಈಗಾಗಲೇ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಮೋದ್ ಮರವಂತೆ ‘ಸೀತಾ ರಾಮ’ ಟೈಟಲ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹಾಡಿನ ಸಾಹಿತ್ಯ ಎಲ್ಲರ ಗಮನ ಸೆಳೆದಿದೆ. ಶಶಾಂಕ್ ಶೇಷಗಿರಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಕಲ್ಯಾಣ್ ಮಂಜುನಾಥ್ ಅವರ ಕಂಠದಲ್ಲಿ ‘ಸೀತಾ ರಾಮ’ ಟೈಟಲ್ ಸಾಂಗ್ ಮೂಡಿ ಬಂದಿದೆ. ಈ ಹಾಡಿನ ಸಾಹಿತ್ಯಕ್ಕೆ ಮೆಚ್ಚುಗೆ ಸಿಕ್ಕಿದೆ.

ವೈಷ್ಣವಿ ನಟನೆಯ ಈ ಧಾರಾವಾಹಿಗಾಗಿ ಫ್ಯಾನ್ಸ್ ಕಾದಿದ್ದಾರೆ.




