- TV9 Kannada Photo gallery Virat Kohli Wins Second IPL Title For RCB: Fans Praise 'Lucky Charm' Anushka Sharma
ಆರ್‌ಸಿಬಿ ಪಾಲಿಗೆ ‘ಲಕ್ಕಿ ಚಾರ್ಮ್’ ಆದ ಅನುಷ್ಕಾ ಶರ್ಮಾ
ಐಪಿಎಲ್‌ನಲ್ಲಿ ಆರ್‌ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಬೆನ್ನಲ್ಲೇ, ನಟಿ ಅನುಷ್ಕಾ ಶರ್ಮಾ ಅವರನ್ನು ಅಭಿಮಾನಿಗಳು ತಂಡದ 'ಲಕ್ಕಿ ಚಾರ್ಮ್' ಎಂದು ಕೊಂಡಾಡುತ್ತಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲಾ ಅನುಷ್ಕಾ ಅವರನ್ನೇ ಗುರಿಮಾಡಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿತ್ತು.ಆದರೆ, ಈಗ ಕಾಲ ಬದಲಾಗಿದೆ.
Updated on:Jun 01, 2026 | 12:38 PM

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾದ ಬಳಿಕ ಅನುಷ್ಕಾ ಆರ್‌ಸಿಬಿ ಪಂದ್ಯಗಳಿಗೆ ಸದಾ ಹಾಜರಿರುತ್ತಿದ್ದರು. ಆದರೆ ಅಂದು ಕೊಹ್ಲಿ ವಿಫಲರಾದಾಗಲೆಲ್ಲಾ ಕೆಲವರು ಅನುಷ್ಕಾ ಅವರೇ ಅಶುಭ ಎಂದು ದೂಷಿಸಿದ್ದರು. ಇಂದು ಆರ್‌ಸಿಬಿ ಸತತ ಎರಡನೇ ಟ್ರೋಫಿ ಗೆಲ್ಲುತ್ತಿದ್ದಂತೆ ಅವರನ್ನು ಲಕ್ಕಿ ಚಾರ್ಮ್ ಎಂದು ಕರೆಯಲಾಗುತ್ತಿದೆ.

ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯ ಒನ್‌ಸೈಡೆಡ್ ಆಯಿತು. ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡವನ್ನು ಆರ್‌ಸಿಬಿ ಮಣಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಮುಡಿಗೇರಿಸಿಕೊಂಡರು.

ವಿರಾಟ್ ಕೊಹ್ಲಿ ಗೆಲುವಿನ ರನ್ ಬಾರಿಸುತ್ತಿದ್ದಂತೆ, ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮಾ ಅವರತ್ತ ಫ್ಲೈಯಿಂಗ್ ಕಿಸ್ ನೀಡಿದರು. ಇದನ್ನು ಕಂಡು ಅನುಷ್ಕಾ ಆನಂದದಿಂದ ಜಿಗಿದು ಸಂಭ್ರಮಿಸಿದರು. ನಂತರ ಇಬ್ಬರೂ ಮೈದಾನದಲ್ಲಿ ವಿಜಯೋತ್ಸವ ಆಚರಿಸಿದರು.

ಅನುಷ್ಕಾ ಸೆಲೆಬ್ರೇಷನ್ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅವರನ್ನು ಆರ್‌ಸಿಬಿಯ ಅದೃಷ್ಟದ ದೇವತೆ ಎಂದಿದ್ದಾರೆ. ಅನುಷ್ಕಾ ಗ್ಯಾಲರಿಯಲ್ಲಿದ್ದರೆ ಸಾಕು ಎದುರಾಳಿ ತಂಡಗಳು ಧೂಳೀಪಟವಾಗುತ್ತವೆ, ಅವರೇ ನಮ್ಮ ಪಾಲಿನ ನಿಜವಾದ ಲಕ್ಕಿ ಚಾರ್ಮ್ ಎಂದು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

ವಮಿಕಾ ಮತ್ತು ಅಕಾಯ್ ಹುಟ್ಟಿದ ಬಳಿಕ ಅನುಷ್ಕಾ ಮೈದಾನಕ್ಕೆ ಬರುವುದು ಕಡಿಮೆಯಾಗಿತ್ತು. ಈಗ ಅವರು ಮತ್ತೆ ನಿಯಮಿತವಾಗಿ ಪಂದ್ಯ ವೀಕ್ಷಿಸಲು ಆರಂಭಿಸಿದ್ದು, ಅವರು ಮೈದಾನಕ್ಕೆ ಮರಳಿದ ಮೇಲೆಯೇ ಆರ್‌ಸಿಬಿಯ ಅದೃಷ್ಟ ಸಂಪೂರ್ಣ ಬದಲಾಗಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
Published On - 12:37 pm, Mon, 1 June 26




