‘ಕಾಂಗ್ರೆಸ್‌ನ ನಕಲಿ ದೇಶಭಕ್ತಿಯ ಮುಖವಾಡ ಕಳಚಿದೆ’: ವಂದೇ ಮಾತರಂ 2 ಚರಣ ಹಾಡಿದ್ದಕ್ಕೆ ಪ್ರಲ್ಹಾದ್​​​ ಜೋಶಿ ಕಿಡಿ

ಮೊದಲ ದಿನದ ವಿಧಾನ ಮಂಡಲದ ವಿಶೇಷ ಅಧಿವೇಶನದ ವೇಳೆ ವಂದೇ ಮಾತರಂ ಗೀತೆಯ ಗಾಯನವನ್ನು ಎರಡು ಚರಣಗಳನ್ನು ಮಾತ್ರ ಹಾಡಲಾಗಿಯಿತು. ಈ ವೇಳೆ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದವು. ಇದು ಗದ್ದಲಕ್ಕೆ ಕಾರಣವಾಯಿತು. ಸದ್ಯ ಈ ವಿಚಾರವಾಗಿ ಇದೀಗ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತೀವ್ರ ವಾಗ್ದಾಳಿ ಮಾಡಿದ್ದಾರೆ.

‘ಕಾಂಗ್ರೆಸ್‌ನ ನಕಲಿ ದೇಶಭಕ್ತಿಯ ಮುಖವಾಡ ಕಳಚಿದೆ’: ವಂದೇ ಮಾತರಂ 2 ಚರಣ ಹಾಡಿದ್ದಕ್ಕೆ ಪ್ರಲ್ಹಾದ್​​​ ಜೋಶಿ ಕಿಡಿ
ಪ್ರಲ್ಹಾದ್​ ಜೋಶಿ
Image Credit source: tv9 kannada
Edited By:

Updated on: Sep 21, 2026 | 4:45 PM

ಬೆಂಗಳೂರು, ಸೆಪ್ಟೆಂಬರ್​​ 21: ‘ವಿಧಾನಸೌಧದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಕಾನೂನುಬಾಹಿರವಾಗಿ ಕತ್ತರಿಸಿ, ಕೇವಲ ಎರಡೇ ಚರಣವನ್ನು ಹಾಡಿ, ರಾಜ್ಯ ಸರ್ಕಾರ ತನ್ನದೇ ಫರ್ಮಾನು ಹೊರಡಿಸಿ, ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದ ಈ ಆಡಳಿತ ನಮ್ಮ ರಾಷ್ಟ್ರದ ಗೀತೆಗೆ ನೇರ ಅಪಮಾನ ಎಸಗಿದೆ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ಮಾಡಿದ್ದಾರೆ.

ವಂದೇ ಮಾತರಂ 2 ಚರಣ ಹಾಡಿದ್ದು ಖಂಡನೀಯ ಎಂದ ಜೋಶಿ 

ವಿಶೇಷ ಅಧಿವೇಶನದಲ್ಲಿ ವಂದೇ ಮಾತರಂ 2 ಚರಣ ಹಾಡಿದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ರಾಜ್ಯ ಕಾಂಗ್ರೆಸ್​ ಸರ್ಕಾರದ ನಕಲಿ ದೇಶಭಕ್ತಿಯ ಮುಖವಾಡ ಇಂದು ಸಂಪೂರ್ಣವಾಗಿ ಕಳಚಿದೆ. ಇದು ಅತ್ಯಂತ ಖಂಡನೀಯ, ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.

ಪ್ರಲ್ಹಾದ್​ ಜೋಶಿ ಟ್ವೀಟ್ 


‘ಕಾಂಗ್ರೆಸ್‌ಗೆ ನಮ್ಮ ರಾಷ್ಟ್ರಗೀತೆಯನ್ನು ಕಂಡರೆ ಏಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದು, ರಾಷ್ಟ್ರೀಯ ಗೌರವ ರಕ್ಷಣೆಗೆ 2026ರ ಇತ್ತೀಚಿನ ಅಧಿವೇಶನದಲ್ಲಿ ಸಂಸತ್ತು ತಂದ ಕಾಯ್ದೆಗೆ ಈ ದುರಾಡಳಿತದ ಆದೇಶ ಅಪಮಾನಿಸಿದಂತೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಧಾನ ಮಂಡಲ ವಿಶೇಷ ಅಧಿವೇಶನ: ಮೊದಲ ದಿನವೇ ಪರಿಷತ್​​ನಲ್ಲಿ ‘ವಂದೇ ಮಾತರಂ’ ಕದನ

‘ದೆಹಲಿಯಲ್ಲಿರುವ ನಕಲಿ ಕುಟುಂಬವೊಂದನ್ನು ಓಲೈಸಲು ಕಾಂಗ್ರೆಸ್ ಈ ದೇಶದ ಹೆಮ್ಮೆಯನ್ನೇ ಬಲಿಕೊಡಲು ನಿಂತಿದೆ. ನಿಮ್ಮ ತುಘಲಕ್ ಆದೇಶಗಳಿಂದ ಭಾರತಾಂಬೆಯ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ. ಈ ದೇಶವಿರೋಧಿ ಕ್ರೂರ ಮನಸ್ಥಿತಿಯ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ. ಕರ್ನಾಟಕದ ಜಾಗೃತ ದೇಶಭಕ್ತ ಜನತೆ ನಿಮ್ಮ ಈ ನೀಚ ಕೃತ್ಯಕ್ಕೆ ತಕ್ಕ ರಾಜಕೀಯ ಪಾಠ ಕಲಿಸುವುದು ನಿಶ್ಚಿತ’ ಎಂದು ಪ್ರಲ್ಹಾದ್​ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us