ಹನಿಟ್ರ್ಯಾಪ್​ ಷಡ್ಯಂತ್ರ: ವಿಧಾನಸೌಧದಲ್ಲೇ ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2025 | 6:16 PM

ಸದ್ಯ ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುದ್ದಿ ಸಂಚಲನ ಸೃಷ್ಟಿಸಿದೆ. ರಾಜಕೀಯವಾಗಿ ಮುಗಿಸುವ ಹುನ್ನಾರದಿಂದ ಹನಿಟ್ರ್ಯಾಪ್​ಗೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ವಿಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿ ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾದರು.

ಹನಿಟ್ರ್ಯಾಪ್​ ಷಡ್ಯಂತ್ರ: ವಿಧಾನಸೌಧದಲ್ಲೇ ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕ
ಹನಿಟ್ರ್ಯಾಪ್​ ಷಡ್ಯಂತ್ರ: ವಿಧಾನಸೌಧದಲ್ಲೇ ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕ
Follow us on

ಬೆಂಗಳೂರು, ಮಾರ್ಚ್​ 20: ಹನಿಟ್ರ್ಯಾಪ್ (Honey Trap) ವಿಚಾರ ಇದೀಗ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಗುಲ್ಲೇಬಿಸಿದೆ. ಸಚಿವರು ಹಾಗೂ ಕೇಂದ್ರದ ಮುಖಂಡರಿಗೂ ಹನಿಟ್ರ್ಯಾಪ್ ಮಾಡಲಾಗಿದೆ ಅಂತಾ ಕೆಲ ಸಚಿವರೇ ಗಂಭೀರ ಆರೋಪ ಮಾಡಿದ್ದಾರೆ. ವಿಪಕ್ಷದ ನಾಯಕರಂತೂ ಇದೇ ವಿಚಾರಕ್ಕೆ ನಿಗಿ ನಿಗಿ ಅಂತಿದ್ದಾರೆ. ಈ ವಿಚಾರವಾಗಿ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ (Munirathna) ಮಾತನಾಡಿ, ಹನಿಟ್ರ್ಯಾಪ್ ಟೀಮ್ ಯಾರು ಅಂತಾ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕ

ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಮುನಿರತ್ನ, ಈ ಹಿಂದೆ ನನಗೆ ಮತ್ತು ರಮೇಶ್ ಜಾರಕಿಹೊಳಿ‌ಗೆ ಹನಿಟ್ರ್ಯಾಪ್ ಮಾಡಿದ್ದರು. ನಾನು ಕಾಂಗ್ರೆಸ್​​ನಿಂದ ಬಿಜೆಪಿಗೆ ಹೋದಾಗಲೇ ಪ್ರಯತ್ನ ಪಟ್ಟಿದ್ದಾರೆ. ಈಗ ರಾಜಣ್ಣಗೆ ಹನಿಟ್ರ್ಯಾಪ್​ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಹೋಮ್ ಮಿನಿಸ್ಟರ್ ಈಗ ತ‌ನಿಖೆಗೆ ಆದೇಶಿಸುತ್ತೇನೆ ಎಂದಿದ್ದಾರೆ. ಇದನ್ನ ಇಲ್ಲಿಗೆ ನಿಲ್ಲಸಬೇಕು. ಇಲ್ಲದಿದ್ದರೆ ಎಲ್ಲ ಶಾಸಕರ ಜೀವನವನ್ನ ಹಾಳು ಮಾಡುತ್ತಾರೆ. ಈಗ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾದರು.

ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್​​ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ

ಇದನ್ನೂ ಓದಿ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
​​​ನನ್ನ ಮೇಲೆ ಹನಿಟ್ರ್ಯಾಪ್ ಯತ್ನ: ಸದನದಲ್ಲೇ ಬಹಿರಂಗಪಡಿಸಿದ ಸಚಿವ ರಾಜಣ್ಣ

ರಮೇಶ್ ಜಾರಕಿಹೊಳಿ‌ ಮತ್ತು ಕೆ.ಎನ್​.ರಾಜಣ್ಣ ಏನು ಪಾಪ ಮಾಡಿದ್ದಾರೆ. ರೇವಣ್ಣರನ್ನು ಕೊರಳು ಪಟ್ಟಿ ಹಿಡಿದು ಎಳೆದುಕೊಂಡು‌ ಬಂದಿದ್ದಾರೆ. ಹೆಚ್​ಡಿ ದೇವೇಗೌಡರ ಮನೆ ಬಾಗಿಲು‌ ಹೊಡೆದು ಎಳೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಮೆಂಟಲೀ ನಾನು ಡಿಸೈಡ್ ಆಗಿದ್ದೇನೆ, ನಾನು ಸತ್ರೂ ಪರವಾಗಿಲ್ಲ. ದಾಖಲೆ‌ ಸಮೇತ ನಾನು ಕಂಪ್ಲೆಂಟ್ ಕೊಡುತ್ತೇನೆ. ಈ ರೀತಿಯ ಪಾಪದ ಕೆಲಸ, ಇಷ್ಟೊಂದು ಕರ್ಮನಾ? ಜೊತೆಯಲ್ಲಿ ಇದ್ದವರಿಗೆ ಹೀಗೂ ತೊಂದರೆ ಕೊಡಬಹುದಾ ಎಂದು ಮುನಿರತ್ನ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ​​​ನನ್ನ ಮೇಲೆ ಹನಿಟ್ರ್ಯಾಪ್ ಯತ್ನ: ಸದನದಲ್ಲೇ ಬಹಿರಂಗಪಡಿಸಿದ ಸಚಿವ ರಾಜಣ್ಣ

ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಅತ್ಯಾಚಾರ ಮಾಡಿದ್ದೇನೆ ಅಂತ ಆರೋಪ ಮಾಡಿದ್ದಾರೆ. 15 ವರ್ಷದ ನನ್ನ ಮೊಮ್ಮಕ್ಕಳು ಇದ್ದಾರೆ. ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮನೆ ಹಾಳು ಮಾಡಿದರು. ಶಾಸಕ ರಮೇಶ್ ಜಾರಕಿಹೊಳಿ ಮನೆ ಹಾಳು ಮಾಡಿದರು. ಈಗ ನನ್ನ ಮನೆ ಹಾಳು ಮಾಡಿದ್ದಾರೆ. ಮುಂದೆ ಬೇರೆ ಶಾಸಕರ ಮನೆಯನ್ನು ಹಾಳು ಮಾಡಬಾರದು ಎಂದಿದ್ದಾರೆ.

ವರದಿ: ಈರಣ್ಣ ಬಸವ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:57 pm, Thu, 20 March 25