AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ ಟಿಕೆಟ್‌ ಫೈಟ್: ಕೆ.ಗೌತಮ್‌ಗೆ ಮಣೆ ಹಾಕಿದ ಕಾಂಗ್ರೆಸ್, ಮುನಿಯಪ್ಪ ಮುನಿಸು ತಣಿಸಲು ಮುಂದಾದ ಹೈಕಮಾಂಡ್

ಕೋಲಾರ ಕ್ಷೇತ್ರದ ಟಿಕೆಟ್​ ಅನ್ನು ಕಾಂಗ್ರೆಸ್​ ಹೈಕಮಾಂಡ್​ ಅಳೆದು ತೂಗಿ ಬೆಂಗಳೂರು ಮಾಜಿ ಮೇಯರ್​ ವಿಜಯ್ ಕುಮಾರ್ ಪುತ್ರ, ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಕೆ. ವಿ. ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಸಚಿವ ಕೆಹೆಚ್​ ಮುನಿಯಪ್ಪ ಮುನಿಸಿಕೊಂಡಿದ್ದು, ಹೈಕಮಾಂಡ್​ ಮುನಿಸು ಶಮನಕ್ಕೆ ಮುಂದಾಗಿದೆ.

ಕೋಲಾರ ಟಿಕೆಟ್‌ ಫೈಟ್: ಕೆ.ಗೌತಮ್‌ಗೆ ಮಣೆ ಹಾಕಿದ ಕಾಂಗ್ರೆಸ್, ಮುನಿಯಪ್ಪ ಮುನಿಸು ತಣಿಸಲು ಮುಂದಾದ ಹೈಕಮಾಂಡ್
ಸಚಿವ ಕೆಹಚ್​ ಮುನಿಯಪ್ಪ
TV9 Web
| Edited By: |

Updated on:Mar 30, 2024 | 2:17 PM

Share

ಕೋಲಾರ, ಮಾರ್ಚ್​ 30: ರಾಜ್ಯದ 28 ಲೋಕಸಭಾ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್‌ಗೆ (Congress) ಕೋಲಾರದಿಂದಾದ (Kolar) ಟೆನ್ಷನ್ ಯಾವ ಕ್ಷೇತ್ರದಿಂದಲೂ ಆಗಿರಲಿಲ್ಲ. ಕೋಲಾರದ ಜೊತೆಗೆ ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿಯನ್ನು ಪೆಂಡಿಂಗ್ ಇಟ್ಟಿದ್ದ ಕಾಂಗ್ರೆಸ್, ನಿನ್ನೆ (ಮಾ.29) ರ ರಾತ್ರಿ ಮೂರು ಕ್ಷೇತ್ರದ ಟಿಕೆಟ್​​ ಫೈನಲ್ ಮಾಡಿತ್ತು. ಚಾಮರಾಜನಗರಕ್ಕೆ ಸುನಿಲ್ ಬೋಸ್, ಬಳ್ಳಾರಿಗೆ ಇ.ತುಕಾರಾಂ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯಗೆ ಮಣೆ ಹಾಕಲಾಗಿತ್ತು. ಆದರೆ, ರಾತ್ರಿ ಬಿಡುಗಡೆಯಾದಗದ ಪಟ್ಟಿಯಲ್ಲೂ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿರಲಿಲ್ಲ. ಆದರೆ, ಅಂತಿಮವಾಗಿ ಅಳೆದು ತೂಗಿ, ಇಬ್ಬರ ಬಣಕ್ಕೂ ಟಿಕೆಟ್ ಕೊಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಹೈಕಮಾಂಡ್, ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸಿದೆ. ಬೆಂಗಳೂರು ಮಾಜಿ ಮೇಯರ್​ ವಿಜಯ್ ಕುಮಾರ್ ಪುತ್ರ, ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಕೆ. ವಿ. ಗೌತಮ್ ಅವರಿಗೆ ಕೋಲಾರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ವಿರೋಧಿಸಿದ್ದ ರಮೇಶ್ ಬಣಕ್ಕೆ ಮೇಲುಗೈ

ರಮೇಶ್ ಕುಮಾರ್ ಬಣದ ಜೊತೆ ಸಂಧಾನ ಸಭೆ ನಡೆಸಿದ್ದ ಸಿಎಂ ಮತ್ತು ಡಿಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವಂತೆ ಸೂಚಿಸಿದರು. ರಮೇಶ್ ಕುಮಾರ್ ಬಣವೂ ಸಹ, ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಬಾರದು. ನೀಡಿದರೇ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿತ್ತು. ಇಷ್ಟೆಲ್ಲಾ ಆದ್ಮೇಲೂ ಮುನಿಯಪ್ಪ ಮಾತ್ರ ಅಳಿಯನಿಗೆ ಟಿಕೆಟ್ ಕೊಡಿಸಲು ಲಾಬಿ ಮುಂದುವರಿಸಿದ್ದರು. ಆದರೆ, ಎರಡೂ ಬಣಕ್ಕೂ ಕೊಕ್‌ ಕೊಟ್ಟು ಗೌತಮ್‌ಗೆ ಟಿಕೆಟ್ ನೀಡಲಾಗಿದೆ. ಹೈಕಮಾಂಡ್ ನಿರ್ಧಾರವನ್ನು ರಮೇಶ್ ಬಣ ಸ್ವಾಗತಿಸಿದೆ.

ರಮೇಶ್ ಕುಮಾರ್ ಬಣವನ್ನೂ ಸಂಧಾನ ಮಾಡಿ, ತಮ್ಮ ಅಳಿಯನಿಗೆ ಟಿಕೆಟ್ ಕೊಡಬೇಕು ಅಂತ ಮುನಿಯಪ್ಪ ಪಟ್ಟು ಹಿಡಿದಿದ್ದರು. ಅಸಮಾಧಾನಿತರನ್ನೂ ಭೇಟಿ ಮಾಡಲು ಯತ್ನಿಸಿದ್ದರು. ಸಿಎಂ ಮನಸ್ಸು ಮಾಡಬೇಕು. ಸಮಸ್ಯೆ ಬಗೆಹರಿಸಬೇಕು ಅಂತಾ ಒತ್ತಾಯಿಸಿದ್ದರು. ಆದರೆ ಮುನಿಯಪ್ಪಗೂ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಮೇಯರ್​ ಪುತ್ರ ಗೌತಮ್ ಕಣಕ್ಕೆ

ಮುನಿಯಪ್ಪ ಮುನಿಸು ತಣಿಸಲು ಮುಂದಾದ ಹೈಕಮಾಂಡ್

ತಮ್ಮ ಅಳಿಯನಿಗೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಕೆಹೆಚ್​​ ಮುನಿಯಪ್ಪ ಅವರನ್ನು ಸಮಾಧಾನ ಮಾಡಲು ಹೈಕಾಮಾಂಡ್​ ಮುಂದಾಗಿದೆ. “ಕೋಲಾರ ಟಿಕೆಟ್ ಆಯ್ಕೆ ವಿಚಾರದಲ್ಲಿ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ಸಚಿವ ಕೆ.ಹೆಚ್ ಮುನಿಯಪ್ಪ ಅವರು ಗೆಲ್ಲುವ ತಂತ್ರಗಾರಿಕೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಎಸ್‌ಸಿ ಎಡ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮುನಿಯಪ್ಪ ಮನವರಿಕೆ ಮಾಡಿಕೊಟ್ಟರು. ಅಲ್ಲದೆ ಕೋಲಾರ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕೂಡ ಕೇಳಿದ್ದೇವೆ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲ​​​ ಟ್ವೀಟ್​ ಮಾಡಿದ್ದಾರೆ.

ಕೇಂದ್ರ ಚುನಾವಣಾ ಸಮಿತಿ ಯಾವುದೇ ಅಭ್ಯರ್ಥಿ ಆಯ್ಕೆ ಮಾಡಿದರೂ ಕೆಲಸ ಮಾಡ್ತೇವೆ ಅಂತ ಹೇಳಿದ್ದಾರೆ. ವೈಯಕ್ತಿಕ ಏನೇ ಭಿನ್ನಾಭಿಪ್ರಾಯ ಇದ್ದರೂ ಪಾರ್ಟಿ ತೀರ್ಮಾನಕ್ಕೆ ಬದ್ಧರಾಗಿ ಅಂತ ಹೇಳಿದ್ದೇವೆ. ಏಳು ಬಾರಿ ಸಂಸದರಾಗಿರುವ ಮುನಿಯಪ್ಪ ಕೂಡ ಪಕ್ಷಕ್ಕಾಗಿ ಯಾವುದೇ ತ್ಯಾಗ ಮಾಡಲು ಸಿದ್ದ ಎಂದಿದ್ದಾರೆ. ಒಟ್ಟಿಗೆ ಚುನಾವಣೆ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸುವ ಅಭಿಪ್ರಾಯ ಹೊಂದಿದ್ದಾರೆ ಎಂದು ಸುರ್ಜೇವಾಲ ಪೋಸ್ಟ್ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:38 pm, Sat, 30 March 24