AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬಕಾರಿ ಹಗರಣದ ಆರೋಪದ ನಡುವೆಯು ಆರ್.ಬಿ. ತಿಮ್ಮಾಪುರಗೆ ಸಿಎಂ ಭಾಗ್ಯ?: ‘ಕೊರವಂಜಿ’ ಭವಿಷ್ಯಕ್ಕೆ ಸಚಿವ ಫುಲ್​​​ ಖುಷ್

ಅಬಕಾರಿ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವಾಗಲೇ, ಬಾಗಲಕೋಟೆ ವಿದ್ಯಾರ್ಥಿನಿಯೊಬ್ಬಳು 'ಕೊರವಂಜಿ' ವೇಷದಲ್ಲಿ ಸಚಿವರು ಮುಖ್ಯಮಂತ್ರಿಯಾಗುವ ಭವಿಷ್ಯ ನುಡಿದಿದ್ದಾಳೆ. ಈ ಕುತೂಹಲಕಾರಿ ವಿಡಿಯೋ ವೈರಲ್ ಆಗಿದ್ದು, ಸಚಿವರು ಸಂತಸ ವ್ಯಕ್ತಪಡಿಸಿ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಗಂಭೀರ ರಾಜಕೀಯ ಪರಿಸ್ಥಿತಿಯ ನಡುವೆ ತಮಾಷೆಯ ಚರ್ಚೆಗೆ ಕಾರಣವಾಗಿದೆ.

ಅಬಕಾರಿ ಹಗರಣದ ಆರೋಪದ ನಡುವೆಯು ಆರ್.ಬಿ. ತಿಮ್ಮಾಪುರಗೆ ಸಿಎಂ ಭಾಗ್ಯ?: 'ಕೊರವಂಜಿ' ಭವಿಷ್ಯಕ್ಕೆ  ಸಚಿವ ಫುಲ್​​​ ಖುಷ್
ವಿಡಿಯೋ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Feb 07, 2026 | 5:14 PM

Share

 ಬಾಗಲಕೋಟೆ , ಫೆ.7: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಚರ್ಚೆಯ ನಡುವೆಯೂ ಒಂದು ತಮಾಷೆಯ ಮತ್ತು ಕುತೂಹಲದ ಸುದ್ದಿಯೊಂದು ಸೋಶಿಯಲ್​​​​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಒಂದೆಡೆ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ. ತಿಮ್ಮಾಪುರ (R.B. Thimmapur) ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ‘ಕೊರವಂಜಿ’ ವಿದ್ಯಾರ್ಥಿನಿಯ ಭವಿಷ್ಯವಾಣಿ ಸಚಿವರಿಗೆ ಹೊಸ ಹುರುಪು ನೀಡಿದಂತಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಖಾಸಗಿ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ‘ಕೊರವಂಜಿ’ ವೇಷ ಧರಿಸಿ ವೇದಿಕೆಯ ಮೇಲಿದ್ದ ಸಚಿವ ತಿಮ್ಮಾಪುರ ಅವರನ್ನು ಕಂಡ ವಿದ್ಯಾರ್ಥಿನಿ ನಿಮಗೆ ಮುಖ್ಯಮಂತ್ರಿ ಆಗುವ ಭಾಗ್ಯ ಇದೆ ಎಂದು  ತನ್ನ ಪಾತ್ರದ ಶೈಲಿಯಲ್ಲೇ ಮಾತನಾಡಿದ್ದಾಳೆ.

“ಬರ್ರಿ ಸಾಹೇಬ್ರ ಮುಂದಕ್ಕೆ ಬರ್ರಿ… ನೀವು ಮಂತ್ರಿ ಆಗ್ತೀರಿ ಅಂತ ನಮ್ಮ ಚಿಕ್ಕಮ್ಮ ಹೇಳಿದ ಖಣಿ ನಿಜ ಆಗೈತಿ.” “ಈಗ ನಾನು ಹೇಳ್ತೀನಿ ಕೇಳ್ರಿ, ಮುಂದೆ ನೀವು ರಾಜ್ಯದ ಮುಖ್ಯಮಂತ್ರಿ ಆಗುವ ಸುಯೋಗ ಐತಿ!” “ಇದನ್ನು ನಾನು ಹೇಳ್ತಿಲ್ಲ, ಗುಡ್ಡದ ಯಲ್ಲವ್ವ ನನ್ನ ಬಾಯಿಂದ ನುಡಿಸ್ತಾ ಇದ್ದಾಳೆ” ಎಂದು ಹೇಳಿ ಸಚಿವರಿಂದ ದಕ್ಷಿಣೆಯನ್ನೂ ಪಡೆದಳು. ವಿದ್ಯಾರ್ಥಿನಿಯ ಈ ಮಾತಿನಿಂದ ಸಚಿವರು ಫುಲ್ ಖುಷಿಯಾಗಿದ್ದು, ಆ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಬಡವರ ಬಂಧು, ಶಿಕ್ಷಣ ಪ್ರೇಮಿ” ಎಂದು ವಿದ್ಯಾರ್ಥಿನಿ ಹೊಗಳಿದ್ದಕ್ಕೆ ಸಚಿವರು ನಗುನಗುತ್ತಲೇ ದಕ್ಷಿಣೆ ನೀಡಿ ಹರಸಿದ್ದಾರೆ.

ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ 2500 ಕೋಟಿ ರೂ. ಹಗರಣ, ಅಕ್ರಮದ ಹಣ ಅಸ್ಸಾಂ ಚುನಾವಣೆಗೆ ಬಳಕೆ: ಆರ್ ಅಶೋಕ್ ಗಂಭೀರ ಆರೋಪ

ವಿಡಿಯೋ ಇಲ್ಲಿದೆ ನೋಡಿ:

ಪ್ರಸ್ತುತ ಸಚಿವರು ಅಬಕಾರಿ ಇಲಾಖೆಯ 6,000 ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿದ್ದಾರೆ. ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದು ಸದನದಲ್ಲಿ ಹಾಸಿಗೆ ಹಾಸಿ ಮಲಗಿ ಪ್ರತಿಭಟನೆ ಮಾಡುತ್ತಿರುವ ಈ ಹೊತ್ತಿನಲ್ಲಿ, ಈ ವಿಡಿಯೋ ವೈರಲ್ ಆಗಿರುವುದು ಚರ್ಚೆಗೆ ಕಾರಣವಾಗಿದೆ. ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗಾಗಿ ಸುಮಾರು 600 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹಿಸಲಾಗಿದೆ ಮತ್ತು ಮದ್ಯದ ಲೈಸೆನ್ಸ್ ನೀಡಲು ಭಾರಿ ಲಂಚ ಪಡೆಯಲಾಗಿದೆ ಎಂದು ಮದ್ಯ ವ್ಯಾಪಾರಿಗಳು ರಾಜ್ಯಪಾಲರಿಗೂ ದೂರು ನೀಡಿದ್ದರು.”ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಇದು ಪ್ರತಿಪಕ್ಷಗಳ ರಾಜಕೀಯ ಪಿತೂರಿ” ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಕೆಲವು ಅಧಿಕಾರಿಗಳ ವಿರುದ್ಧ ಆಂತರಿಕ ವಿಚಾರಣೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Sat, 7 February 26

Follow Us
ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜೇಗೌಡ
ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜೇಗೌಡ
ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು
ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು
ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ
ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ
ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ
ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ
ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು
ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು
‘ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ರು’; ಚೇತನ್
‘ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ರು’; ಚೇತನ್
ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ
ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ