AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾನಗಲ್​​ ಗ್ಯಾಂಗ್​ ರೇಪ್​ ಕೇಸ್​ SIT ತನಿಕೆಗೆ ಬೊಮ್ಮಾಯಿ ಆಗ್ರಹ

ಹಾವೇರಿ ಜಿಲ್ಲೆಯ ಹಾನಗಲ್​​ ಪಟ್ಟಣದ ಖಾಸಗಿ ಹೊಟೇಲ್​​ನಲ್ಲಿ ನಡೆದ ನೈತಿಕ ಪೊಲೀಸ್​ಗಿರಿ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಿಯಾದ ಸೆಕ್ಷನ್ ಹಾಕಿ. ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ (ಚಾರ್ಜ್​ ಶೀಟ್​) ಸಲ್ಲಿಕೆಯಾಗಬೇಕು. ಸಾಮೂಹಿಕ ಅತ್ಯಾಚಾರ ನಡೆದಿರುವ ಎಲ್ಲಾ ಪ್ರಕರಣಗಳೂ ಎಸ್​ಐಟಿ ತನಿಖೆಗೆ ನೀಡಬೇಕು.

ಹಾನಗಲ್​​ ಗ್ಯಾಂಗ್​ ರೇಪ್​ ಕೇಸ್​ SIT ತನಿಕೆಗೆ ಬೊಮ್ಮಾಯಿ ಆಗ್ರಹ
ಮಾಜಿ‌ ಸಿಎಂ ಬಸವರಾಜ್ ಬೊಮ್ಮಾಯಿ
ಕಿರಣ್​ ಹನಿಯಡ್ಕ
| Edited By: |

Updated on:Jan 13, 2024 | 2:46 PM

Share

ಬೆಂಗಳೂರು, ಜನವರಿ 13: ಹಾವೇರಿ (Haveri) ಜಿಲ್ಲೆಯ ಹಾನಗಲ್ (Hangal)​​ ಪಟ್ಟಣದ ಖಾಸಗಿ ಹೊಟೇಲ್​​ನಲ್ಲಿ ನಡೆದ ನೈತಿಕ ಪೊಲೀಸ್​ಗಿರಿ (Moral Policegiri) ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಿಯಾದ ಸೆಕ್ಷನ್ ಹಾಕಿ. ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ (ಚಾರ್ಜ್​ ಶೀಟ್​) ಸಲ್ಲಿಕೆಯಾಗಬೇಕು. ಸಾಮೂಹಿಕ ಅತ್ಯಾಚಾರ ನಡೆದಿರುವ ಎಲ್ಲಾ ಪ್ರಕರಣಗಳೂ ಎಸ್​ಐಟಿ ತನಿಖೆಗೆ ನೀಡಬೇಕು. ಸರ್ಕಾರ ಯಾವ ರೀತಿ ಯೋಚಿಸುತ್ತದೆಯೋ, ಅದೇ ರೀತಿ ಪೊಲೀಸರು ಕೆಲಸ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ‌ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಡಾ.ಅಶ್ವಥ್ ನಾರಾಯಣ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ನಾಳೆ (ಜ.14) ಬಿಜೆಪಿ ಮಹಿಳಾ ನಿಯೋಗ ಹಾನಗಲ್​ಗೆ ಭೇಟಿ ಕೊಡುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಪ್ರಕರಣಗಳ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಎಸ್​ಐಟಿ ರಚಿಸಿದರೂ ನ್ಯಾಯಾಂಗ ಮೇಲುಸ್ತುವಾರಿಯ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಾಗಿದೆ. ಯುವಕರು ರೂಂನಲ್ಲಿ ಯುವತಿಯನ್ನು ಥಳಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸಾಮೂಹಿಕ ಅತ್ಯಾಚಾರ ಮುಚ್ಚಿಡುವ ಪ್ರಯತ್ನ ಪೊಲೀಸರು ಮಾಡಿದ್ದಾರೆ. ನಾನು ಕರೆ ಮಾಡಿ ಕೇಳಿದಾಗಲೂ ಪೊಲೀಸರು ಮೊಂಡುವಾದವನ್ನೇ ಮಾಡಿದರು. ಸಾಮೂಹಿಕ ಅತ್ಯಾಚಾರ ಆಗಿದೆ ಅಂದಿದ್ದರೂ, ಎಫ್​ಐಆರ್​ನಲ್ಲಿ ಇದನ್ನೂ ದಾಖಲಿಸಿಲ್ಲ. ಹಾನಗಲ್​ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ನಾಯಕರ ಒತ್ತಡ ಇದೆ. ನಾನು ಎಸ್ಪಿಗೆ ಮಾತಾಡಿದಾಗ ಆ ರೀತಿ ಆಗಿಲ್ಲ ಎಂದರು. ಆರು ಜನರಲ್ಲಿ ಇನ್ನೂ ಮೂರು ಜನ ಅರೆಸ್ಟ್ ಆಗಿಲ್ಲ. ಗೃಹ ಸಚಿವರು ಸ್ಟಾಂಡರ್ಡ್‌ ಇನ್​ಸ್ಟ್ರಕ್ಷನ್ ಕೊಟ್ಟಿದ್ದೇವೆ ಎಂದಿದ್ದಾರೆ. ಸಮುದಾಯಗಳನ್ನು ನೋಡಿ ಕೇಸ್ ಹಾಕಿ ಅಂತ ನೀವು ಸ್ಟಾಂಡರ್ಡ್ ಇನ್​ಸ್ಟ್ರಕ್ಷನ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಗ್ಯಾಂಗ್​ ರೇಪ್​ ಪ್ರಕರಣವಾಗಿ ಬದಲಾದ ಹಾನಗಲ್ ನೈತಿಕ ಪೊಲೀಸ್​ಗಿರಿ ಕೇಸ್

ಬೇರೆ ಕೋಮಿನವರು ಆಗಿದ್ದರೇ ಮೊದಲು ಒಳಗೆ ಹಾಕಿ ನಂತರ ವಿಚಾರಣೆ ಮಾಡುತ್ತಿದ್ದರು. ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ? ಅಲ್ಪಸಂಖ್ಯಾತ ಹೆಣ್ಣುಮಗಳ ಮೇಲೆ ಅತ್ಯಾಚಾರ ಆಗಿದೆ. ಅಲ್ಪಸಂಖ್ಯಾತರ ರಕ್ಷಕರು ಎಂದು ಬಿಂಬಿಸುವವರು ರಕ್ಷಣೆ ಮಾಡಿಲ್ಲ. ನಿಮ್ಮ ಕೆಲಸವನ್ನು ಮಾಡುವವರಿಗೆ ಮಾತ್ರವೇ ನಿಮ್ಮ ರಕ್ಷಣೆ ‌ಇದೆಯಾ? ಯಾವುದೇ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳು ಕಲೆಕ್ಷನ್ ಅಡ್ಡಾ ಆಗಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವ ವಾತಾವರಣ ಕೆಟ್ಟು ಹೋಗಿದೆ. ಆದರೂ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಬೆಂಗಳೂರಿನಲ್ಲೇ ಕಳೆದ ವರ್ಷಕ್ಕಿಂತ ಮಹಿಳೆಯರ ಮೇಲಿನ ಅಪರಾಧ ಶೇ 30ರಷ್ಟು ಹೆಚ್ಚಾಗಿದೆ. ಹಲವು ಪ್ರಕರಣಗಳನ್ನು ಮುಚ್ಚಿ ಹಾಕುವ ಕೆಲಸ ಆಗುತ್ತಿದೆ. ಯಾರಾದರೂ ಕಾನೂನು ಪ್ರಕಾರ ಕೆಲಸ ಮಾಡಿದರೆ ಅವರ ಮೇಲೆ ಸರ್ಕಾರದ ವಕ್ರದೃಷ್ಟಿ ಬೀಳುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸ್ಟೇಷನ್​ಗೆ ಬಂದು ಹಾಜರಿ ಹಾಕಬೇಕಿದ್ದ ಪುಡಿ ರೌಡಿಗಳು ಮತ್ತೆ ಇಸ್ಪೀಟ್ ಕ್ಲಬ್​ಗಳನ್ನು ಶುರು ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಬೆಂಬಲ ಅವರಿಗೆ ಇದೆ. ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದರೆ ಇವರ ಕರ್ತವ್ಯ ಮುಗೀತಾ? ಪೊಲೀಸರೇ ಕ್ಲಬ್​ಗಳನ್ನು ಚಾಲನೆ ಮಾಡಿ ಎಂದು ಹೇಳುತ್ತಿದ್ದಾರೆ. ಇದು ಜಂಗಲ್ ರಾಜ್ಯ ಆಗಿದೆ ವಿಪಕ್ಷದವರು ಇಂತಹದ್ದನ್ನು ಮಾತಾಡಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ನ್ಯಾಯ ಕೇಳಿದರೆ ಕೇಸ್ ಹಾಕುತ್ತೀರಿ, ಅನ್ಯಾಯ ಮಾಡಿದವರನ್ನು ತಿರುಗಾಡಲು ಬಿಟ್ಟಿದ್ದೀರಿ ಎಂದು ಹರಿಹಾಯ್ದರು.

ಕರಾವಳಿ ಭಾಗದ ನೈತಿಕ ಪೊಲೀಸ್​ಗಿರಿಗೂ ಹಾನಗಲ್ ಪ್ರಕರಣಕ್ಕೂ ಹೋಲಿಕೆ ಬೇಡ. ಅಲ್ಲಿ ಗ್ಯಾಂಗ್ ರೇಪ್ ಆಗಿಲ್ಲ. ಕರಾವಳಿ ಭಾಗದಲ್ಲಿ ಆ್ಯಂಟಿ ಕಮ್ಯುನಲ್ ಸೆಲ್ ಮಾಡುತ್ತೇವೆ ಅಂತಾ ಸಿಎಂ ಹೇಳಿದ್ದರು, ‌ಕರಾವಳಿ ಭಾಗಕ್ಕೆ ಮಾತ್ರ ಯಾಕೆ? ರಾಜ್ಯದ ಬೇರೆ ಕಡೆಗಳಲ್ಲಿ ಕೂಡಾ ಸ್ಥಾಪನೆ ಮಾಡಿ ಎಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:58 pm, Sat, 13 January 24

Follow Us
Kiran Haniyadka
Kiran Haniyadka
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ