ಪತಿಯಷ್ಟು ಕೆಲಸ ಮಾಡಲು ಆಗದಿದ್ರೂ ನನ್ನ ಕೈಲಾದಷ್ಟು ಮಾಡ್ತೇನೆ -ಮಂಗಳಾ ಅಂಗಡಿ ಕಣ್ಣೀರು

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಪಕ್ಷದ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಕ್ಕ ನಂತರ ಟಿವಿ9 ಗೆ ಮಂಗಳಾ ಅಂಗಡಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಪತಿಯಷ್ಟು ಕೆಲಸ ಮಾಡಲು ಆಗದಿದ್ರೂ ನನ್ನ ಕೈಲಾದಷ್ಟು ಮಾಡ್ತೇನೆ -ಮಂಗಳಾ ಅಂಗಡಿ ಕಣ್ಣೀರು
ಮಂಗಳಾ ಅಂಗಡಿ ಕಣ್ಣೀರು
Follow us
KUSHAL V
|

Updated on:Mar 25, 2021 | 11:29 PM

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಪಕ್ಷದ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಕ್ಕ ನಂತರ ಟಿವಿ9 ಗೆ ಮಂಗಳಾ ಅಂಗಡಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಟಿಕೆಟ್ ಸಿಕ್ಕಿದೆ ಅಂತಾ ಗೊತ್ತಾಗುತ್ತಿದ್ದಂತೆ ಮಂಗಳಾ ಅಂಗಡಿ ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟರು. ಜೊತೆಗೆ, ಟಿಕೆಟ್ ನೀಡಿದ ಪಕ್ಷದ ಹೈಕಮಾಂಡ್, ರಾಜ್ಯ ನಾಯಕರು, ಬೆಳಗಾವಿ ಬಿಜೆಪಿ ಕಾರ್ಯಕರ್ತರಿಗೆ ಮಂಗಳಾ ಅಂಗಡಿ ಧನ್ಯವಾದ ಸಲ್ಲಿಸಿದರು.

MANGALA ANGADI 1

‘ಅವರನ್ನ ಕಳೆದುಕೊಂಡು ನಾನು ಹೇಗಿರಬೇಕು’

ಟಿಕೆಟ್ ವಿಚಾರದ ಕುರಿತು ಇನ್ನು ಯಾವ ನಾಯಕರು ನನಗೆ ಕರೆ ಮಾಡಿಲ್ಲ. ಸುರೇಶ್ ಅಂಗಡಿಯವರಂತೆ ಕೆಲಸ ಮಾಡಲು ದೇವರು ಶಕ್ತಿ ನೀಡಲಿ. ಸುರೇಶ್ ಅಂಗಡಿಯವರಷ್ಟು ಕೆಲಸ ಮಾಡಲು ಆಗದಿದ್ರೂ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ಪಕ್ಷ ಜವಾಬ್ದಾರಿ ಕೊಟ್ಟಿದ್ದನ್ನ ನಾನು ನಿಭಾಯಿಸುತ್ತೇನೆ ಎಂದು ಮಂಗಳ ಅಂಗಡಿ ಟಿವಿ9ಗೆ ಹೇಳಿದರು.

ಸುರೇಶ್ ಅಂಗಡಿಯವರು ಎಲ್ಲಾ ಕೆಲಸ ಮಾಡಿದ್ದಾರೆ. ಅವಕಾಶ ಸಿಕ್ಕರೆ ಬಾಕಿ ಸಿಕ್ಕ ಕೆಲಸ ಮಾಡುತ್ತೇನೆ. ಸುರೇಶ್ ಅಂಗಡಿ ಇಲ್ಲಾ ಅಂತಾ ನಾನು ಸ್ಪರ್ಧೆ ಮಾಡ್ತಿದ್ದೀನಿ ಅನ್ನೋ ನೋವು ಇದೆ. ಒಂದು ಕಡೆ ಸಂತೋಷ ಮತ್ತೊಂದು ಕಡೆ ದುಃಖ ಆಗ್ತಿದೆ. ಅವರನ್ನ ಕಳೆದುಕೊಂಡು ನಾನು ಹೇಗಿರಬೇಕು ಅಂತಾ ಮಂಗಳಾ ಅಂಗಡಿ ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟರು.

‘ನಮ್ಮ ತಾಯಿಗೆ ಅವಕಾಶ ನೀಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆ’ ನಮ್ಮ ತಾಯಿಗೆ ಅವಕಾಶ ನೀಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ಥಳೀಯ ನಾಯಕರೆಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ ಎಂದು ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಹೇಳಿದರು. ನಮ್ಮ ತಂದೆ ಮಾಡಿರುವ ಸಾಕಷ್ಟು ಅಭಿವೃದ್ಧಿ ಕೆಲಸ ಇವೆ. ಎದುರಾಳಿ ಯಾರೇ ನಿಂತರೂ ನಿಭಾಯಿಸಲು ಸಿದ್ಧರಿದ್ದೇವೆ ಎಂದು ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಹೇಳಿದ್ದಾರೆ.

ನಾವು ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿ ಎಂದು ಕೇಳಿಕೊಂಡಿದ್ದೆವು. ಆದರೆ, ನನಗೆ ಕೊಡಬೇಕು, ಇವರಿಗೆ ಕೊಡಬೇಕು ಅಂತಾ ಏನಿರಲಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾ ಹೇಳಿದ್ದೇವು. ನಮ್ಮ ತಾಯಿಗೆ ಅವಕಾಶ ನೀಡಿದ್ದಕ್ಕೆ ಕೇಂದ್ರ, ರಾಜ್ಯದ ನಾಯಕರಿಗೆ ವಂದನೆ ಸಲ್ಲಿಸುತ್ತೇನೆ ಎಂದು ಶ್ರದ್ಧಾ ಹೇಳಿದರು.

ನಮ್ಮ ತಂದೆಯವರು ಮಾಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಇವೆ. ಎದುರಾಳಿ ಯಾರೇ ನಿಂತರೂ ಅದನ್ನು ನಿಭಾಯಿಸಲು ತಯಾರಿದ್ದೇವೆ. ಮತದಾರರು ನಮ್ಮ ತಂದೆ, ಕುಟುಂಬದ ಮೇಲೆ ವಿಶ್ವಾಸವಿಟ್ಟಿದ್ರು. ತಂದೆಯವರು ಹೋದ್ಮೇಲೂ ಕುಟುಂಬದವರು ನಿಲ್ಲಬೇಕು ಅಂತಿದ್ರು. ಮತದಾರರ ಜೊತೆ ನಾವು ಮುಂದೆಯೂ ಇರ್ತೇವೆ. ಅವರ ಸಣ್ಣ ಆಪೇಕ್ಷೆಯೂ ಪೂರ್ಣಗೊಳಿಸುವ ಭರವಸೆ ಕೊಡುತ್ತೇವೆ. ತಂದೆಯವರು ಯಾವ ರೀತಿ ಜನರ ಜೊತೆ ಸಂಬಂಧ ಇಟ್ಟುಕೊಂಡಿದ್ರೂ ಅದಕ್ಕಿಂತ ಜಾಸ್ತಿ ಇಟ್ಟುಕೊಳ್ಳುವ ಶಕ್ತಿ ನಮಗೆ ದೇವರು ಕೊಡಲಿ ಎಂದು ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಹೇಳಿದರು.

ಇದನ್ನೂ ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಎಲೆಕ್ಷನ್​: ದಿ.ಸುರೇಶ್ ಅಂಗಡಿ ಪತ್ನಿಗೆ ಬಿಜೆಪಿ ಟಿಕೆಟ್​

Published On - 10:11 pm, Thu, 25 March 21