Fraternity : ಸಮಾಜದ ಸ್ವಾಸ್ಥ್ಯ ಕೆಡಿಸದಂತೆ ಬದುಕುವುದು ಎಲ್ಲರಲ್ಲಿಯೂ ಮೊಳೆಕೆಯೊಡೆಯಬೇಕು

Work is Worship : ಧರ್ಮಗಳು ಬೀದಿಗೆ ಬರಬಾರದು. ಆದರೆ ಬಂದಿವೆ. ಯಾವುದೇ ಧರ್ಮವೂ ಮನುಷ್ಯನ ಹೊಟ್ಟೆ ತುಂಬಿಸುವುದಿಲ್ಲ. ಆದರೆ ಕಾಯಕ ಮನುಷ್ಯನ ಹೊಟ್ಟೆ ತುಂಬಿಸುತ್ತದೆ. ಆದ್ದರಿಂದ ಕಾಯಕವೇ ನಮ್ಮ ಧರ್ಮವಾಗಬೇಕು.

Fraternity : ಸಮಾಜದ ಸ್ವಾಸ್ಥ್ಯ ಕೆಡಿಸದಂತೆ ಬದುಕುವುದು ಎಲ್ಲರಲ್ಲಿಯೂ ಮೊಳೆಕೆಯೊಡೆಯಬೇಕು
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Apr 21, 2022 | 2:07 PM

Communal Clashes : ಕೋಮುವಾದ ನಮ್ಮ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ವ್ಯಾಪಾರ, ಮಠ, ಮಂದಿರ, ಮಸೀದಿ, ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ವಿಜೃಂಭಿಸುತ್ತಿರುವ ಕೋಮುದಾದದ ಅನಾಹುತಗಳು ಮತ್ತು ಜಾಗತಿಕ ಭಯೋತ್ಪಾದಕತೆಯೊಂದಿಗೆ ಅದು ವಿಸ್ತರಿಸಿಕೊಳ್ಳುತ್ತಿರುವ ಸಂಬಧದ ಅಪಾಯಗಳನ್ನು ನೆನೆದರೆ ಭಯವಾಗುತ್ತದೆ. ಈ ನಾಡು ಧಾರ್ಮಿಕ ಮೂಲಭೂತವಾದಿಗಳಿಂದ ಒಡೆಯುತ್ತಿರುವುದನ್ನು ಅಸಹಾಯಕತೆಯಿಂದ ನಾವು ನೋಡಬೇಕಾಗಿರುವುದು ದುರಂತ. ಮನುಷ್ಯತ್ವ, ಮಾನವೀಯತೆ ಮತ್ತು ಸ್ಪಷ್ಟವಾದ ವೈಚಾರಿಕತೆಯಿಂದ ಈ ನಾಡಿನ ಚರಿತ್ರೆ ಮತ್ತು ಸಂಸ್ಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡದಿದ್ದರೆ ನಾವು ಮುಂದಿನ ದಿನಗಳಲ್ಲಿ ಬಹು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಬ್ಬ ಲೇಖಕನಾಗಿ ನನಗೆ ಅನ್ನಿಸುವುದೇನೆಂದರೆ, ದೇವರು, ದೇವಾಲಯ ಮತ್ತು ಮಸೀದಿಗಳು ಈ ಸಂದರ್ಭದ ಮನುಷ್ಯನ ಮುಖ್ಯ ಅಗತ್ಯಗಳಲ್ಲ. ಅಗತ್ಯವಾದುದೇನೆಂದರೆ, ಮನುಷ್ಯ ಈ ಸಮಾಜದ ಸ್ವಾಸ್ಥ್ಯವನ್ನು ಕೆಡಿಸದ ಹಾಗೆ ಬದುಕುವುದು. ಎಲ್ಲರ ಹೃದಯದಲ್ಲಿ ಮೊಳಕೆಯೊಡೆಯಬೇಕು. ಸಿ. ಎಸ್. ಭೀಮರಾಯ, ಲೇಖಕ (C.S. Bhimaray)

ಕಾಯಕದಲ್ಲಿ ಮೇಲು-ಕೀಳು ಇಲ್ಲವೆಂದ ಬಳಿಕ ಜಾತಿ, ಮತ ಮತ್ತು ಧರ್ಮಗಳ ಕಟ್ಟುಗಳಿನ್ನೆಲ್ಲಿ? ಅವು ತಮ್ಮಷ್ಟಕ್ಕೆ ತಾವೇ ಕಳಚಿಬೀಳಬೇಕು; ಸಮಾಜದಲ್ಲಿ ಸರ್ವಸಮಾನತೆ ನೆಲೆಸಬೇಕು. ಅವರಿವರೆನ್ನದೆ, ಎಲ್ಲರೂ ಸರ್ವಸಮಾನರಾಗಿ ಬಾಳುವುದರಿಂದಲೇ ಉತ್ತಮ ಸಮಾಜ ಮತ್ತು ರಾಷ್ಟ್ರದ ಏಳ್ಗೆ ಸಾಧ್ಯವೆಂಬುದನ್ನು ಚೆನ್ನಾಗಿ ಅರಿಯಬೇಕು.

ಧರ್ಮಗಳು ಬೀದಿಗೆ ಬರಬಾರದು. ಆದರೆ ಅವು ಬೀದಿಗೆ ಬಂದಿವೆ. ಯಾವುದೇ ಧರ್ಮವೂ ಮನುಷ್ಯನ ಹೊಟ್ಟೆ ತುಂಬಿಸುವುದಿಲ್ಲ. ಆದರೆ ಕಾಯಕ ಮನುಷ್ಯನ ಹೊಟ್ಟೆ ತುಂಬಿಸುತ್ತದೆ. ಆದ್ದರಿಂದ ಕಾಯಕವೇ ನಮ್ಮ ಧರ್ಮವಾಗಬೇಕು. ನಮ್ಮಲ್ಲಿನ ತತ್ವ -ಸಿದ್ಧಾಂತಗಳು, ಸಂಸ್ಕೃತಿಯ ವಿಚಾರಗಳು, ಭಾಷೆ, ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಬಣ್ಣ ತಾರತಮ್ಯದ ಚರ್ಚೆಗಳು, ವರ್ಗ ಕಲಹಗಳ ಚಿಂತನೆಗಳು, ರಾಷ್ಟ್ರೀಯ ಪರಿಕಲ್ಪನೆಯ ವಿಚಾರಗಳು -ಹೀಗೆ ಮುಂತಾದ ಸಂಗತಿಗಳು ಕಳಾಹೀನವಾಗಿ ತೋರುತ್ತಿವೆ. ಒಂದು ಕಾಲದಲ್ಲಿ ಕಾಲೇಜುಗಳ ಕ್ಯಾಂಪಸ್ಸುಗಳೆಂದರೆ ಯುವ ಮನಸ್ಸುಗಳ ಬಿಸಿಬಿಸಿ ಚರ್ಚೆಯ ತಾಣಗಳಾಗಿದ್ದವು. ಹಾಗೆಯೇ ಅರ್ಥಪೂರ್ಣ ಚಳವಳಿ-ಹೋರಾಟಗಳು ಮೊಳಕೆಯೊಡೆಯುತ್ತಿದ್ದ ಫಲವತ್ತು ಭೂಮಿಯೂ ಆಗಿರುತ್ತಿದ್ದವು.

ಅಂತಹ ಚಳವಳಿ-ಹೋರಾಟಗಳ ಚಿಂತನೆಗಳಲ್ಲಿ ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಜೆಪಿ, ಲೋಹಿಯಾ, ಫುಲೆ –ಮುಂತಾದ ಧೀಮಂತ ಚಿಂತಕರು ಬಂದು ಹೋಗುತ್ತಿದ್ದರು. ಆದರೆ ಇಂದು ನಮಗೆ ಯಾವ ಮಹಾನ್ ನಾಯಕರ ಚಿಂತನೆಗಳನ್ನು ಸಮಾಧಾನದಿಂದ ಗಮನಿಸುವ ವ್ಯವಧಾನವಿಲ್ಲ. ಇದು ಅತ್ಯಂತ ತಲ್ಲಣಗಳ ಕಾಲವಿದು. ಭಾರತೀಯ ಸಮಾಜವನ್ನು ಅತ್ಯಂತ ಸೂಕ್ಷ್ಮವಾಗಿ, ಅದರ ಉಸಿರಾಟದ ಏರಿಳಿತವನ್ನು ಚೆನ್ನಾಗಿ ಅರಿತು ವಿಶ್ಲೇಷಿಸಿದ್ದ ಈ ನಾಯಕರಿಗೆ ಇಡೀ ಜಗತ್ತಿನ ಜನರು ನೆಮ್ಮದಿಯಲ್ಲಿ, ಸಮಾನತೆಯಲ್ಲಿ ಮತ್ತು ಭ್ರಾತೃತ್ವ ವ್ಯವಸ್ಥೆಯಲ್ಲಿ ಬದುಕಬೇಕೆಂದು ಹಂಬಲವಿತ್ತು.

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ನಮ್ಮೆಲ್ಲರ ಗುಪ್ತ ಒಪ್ಪಿಗೆಯಿಲ್ಲದೇ ಯಾರೂ ಅಪರಾಧ ಮಾಡುವುದು ಸಾಧ್ಯವಿಲ್ಲ’

ಅಂಬೇಡ್ಕರ್, ಲೋಹಿಯಾ, ಜೇಪಿಗಳು ಅಪ್ಪಟ ಭಾರತೀಯ ಮನಸ್ಸಿನ ಅನನ್ಯ ಚಿಂತಕರು. ಅವರ ರಾಜಕೀಯ ಸಿದ್ಧಾಂತಗಳು, ಜಾತಿ-ವರ್ಗಗಳ ಪರಿಕಲ್ಪನೆಗಳು ಈಗಲೂ ತಾಜಾ ಅನ್ನಿಸುತ್ತವೆ. ಅವರ ವಿಚಾರಗಳು ಜಗತ್ತಿಗೆ ಹೊಸ ಹೊಸ ಒಳನೋಟಗಳನ್ನು ನೀಡುತ್ತಲೇ ಇವೆ. ಸಮಾಜದಲ್ಲಿನ ಹೊರ ನೋಟಕ್ಕೆ ಕಾಣಿಸುವ ದೌರ್ಜನ್ಯಗಳು ಬದಲಾದರೆ ಸಾಲದು, ಮನುಷ್ಯನ ಜಡ್ಡುಗಟ್ಟಿದ ಮನಸ್ಸೂ ಬದಲಾಗಬೇಕು; ಹೊಸ ಹೊಸ ಚಿಂತನೆಗಳನ್ನು ಆಹ್ವಾನಿಸುವ ಮುಕ್ತತೆ ಅದಕ್ಕೆ ದಕ್ಕಬೇಕೆಂಬುದು ಅವರ ಬಯಕೆಯಾಗಿತ್ತು. ದ್ವೇಷವನ್ನು ಬಿತ್ತಿ ಬೆಳೆಯುವುದಾದರೂ ಏನು?

ರಕ್ತ-ರಕ್ತಗಳ ನಡುವಿನ ಗೋಡೆಗಳು ಕುಸಿದು ಮನುಕುಲ ಒಂದಾಗಿ ಚೆಂದಾಗಿ ಮೆರೆಯಲಿ ದ್ವೇಷ ಅಸೂಯೆ ಅನ್ಯಾಯ ಅತ್ಯಾಚಾರ ಸರಿದು ಸ್ನೇಹ ಸಹೋದರ ಸಂಬಂಧಗಳ ಬಂಧುತ್ವ ಮೂಡಲಿ

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ನಡೀ ಜೀತಕ್ಕ, ಮುಂಜಾನೆ ಸತ್ರ ಮಣ್ಣಿಗಿಲ್ಲ ಸಂಜಿಕೆ ಸತ್ರ ಎಣ್ಣಿಗಿಲ್ಲ’

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ