ಓದು ಮಗು ಓದು: ಆನ್​ಲೈನ್​ ಶಿಕ್ಷಣ ಮತ್ತು ಸಿರಿಧಾನ್ಯ ತಿಂದ ಕೋಳಿ!

‘ನಾನು ಪುಟ್ಟ ಮಕ್ಕಳನ್ನು ಕರೆದು ಬರೆಯಲು ಹೇಳಿ ಕೊಡ್ತಾ ಇದ್ದದ್ದು ಅವರ ಕೈ ಹಿಡಿದು ಅಕ್ಷರ ತಿದ್ದಿಸಬಹುದು, ಅಷ್ಟು ಹೊತ್ತು ಅವರ ಮುಗ್ಧ ಸ್ಪರ್ಶವನ್ನು ಅನುಭವಿಸಬಹುದು ಎಂಬ ಒಂದೇ ಒಂದು ಕಾರಣಕ್ಕಾಗಿ. ಆದರೆ ತಂತ್ರಜ್ಞಾನ ಸ್ಪರ್ಶರಾಹಿತ್ಯವನ್ನು ಸೃಷ್ಟಿಸುತ್ತಿದೆ. ಇದು ‘ಇ’ ಕಾಲದ ಸಂಕೀರ್ಣ. ಆದಷ್ಟು ಇದು ಅಲ್ಪ ಕಾಲದ್ದಾಗಿರಲಿ ಎಂದು ಹಾರೈಸುತ್ತೇನೆ.‘ ಹೇಮಾ ಖುರ್ಸಾಪುರ

ಓದು ಮಗು ಓದು: ಆನ್​ಲೈನ್​ ಶಿಕ್ಷಣ ಮತ್ತು ಸಿರಿಧಾನ್ಯ ತಿಂದ ಕೋಳಿ!
Follow us
ಶ್ರೀದೇವಿ ಕಳಸದ
|

Updated on:Jan 16, 2021 | 11:31 AM

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್: tv9kannadadigital@gmail.com

ಲೇಖಕಿ, ಅನುವಾದಕಿ ಹೇಮಾ ಖುರ್ಸಾಪುರ ಬರೆದ ಈ ಲೇಖನ ಓದಿ.

ಜಾಸ್ತಿ ಏನಿಲ್ಲ ಹತ್ತು ವರ್ಷದ ಕೆಳಗೆ ಪಿಜಿ ಕ್ಲಾಸುಗಳನ್ನ ಮುಗಿಸಿಕೊಂಡು ಸಂಜೆ ಮನೆಗೆ ಬರ್ತಿದ್ದ ಹಾಗೆ, ಅಕ್ಕನ ಮಕ್ಕಳು ಅಕ್ಕ-ಪಕ್ಕದ ಮಕ್ಕಳನ್ನೆಲ್ಲ, ‘ಅಂಗಳದಲ್ಲಿ ಆಡಿದ್ದು ಸಾಕು. ಪಾಠೀ ಪುಸ್ತಕ ಎತ್ಕೊಂಡು ಪಡಸಾಲಿಗೆ ಬನ್ರೋ ಅಂತ ಕರೀತಾ ಇದ್ದದ್ದು ನಾನೇನಾ?’ ಎನ್ನುವ ಒಂದು ಸಣ್ಣ ಅನುಮಾನ ಇತ್ತಿಚೇಗೆ ನನ್ನನ್ನ ಕಾಡುತ್ತಿತ್ತು. ಕೋವಿಡ್ ಕಾಲದಲ್ಲಂತೂ ಇದು ಅನುಮಾನ ಅಲ್ಲ, ಕಾಲ ಬದಲಾಗಿದೆ ನಾನಿದನ್ನ ಒಪ್ಪಿಕೊಳ್ಳಬೇಕು ಎನ್ನುವುದಕ್ಕೆ ಬೇಕಾದ ಪುರಾವೆಗಳೆಲ್ಲ ಸಿಕ್ಕವು. ನೋಡನೋಡುತ್ತಿದ್ದ ಹಾಗೆ ಯುಗವೊಂದು ಮಗುಚಿದ ಹಾಗೆ ಮಕ್ಕಳೆಲ್ಲ ಪುಸ್ತಕದಿಂದ ಫೋನಿಗೆ ಟ್ಯಾಬ್ ಗೆ ಹೊರಳಿದ್ದಾರೆ.

ನಾನು ಮಕ್ಕಳನ್ನ ಅದರಲ್ಲೂ 3 ರಿಂದ 6 ವರ್ಷದ ಮಕ್ಕಳನ್ನ ಕರೆದು ಬರೆಯಲು ಹೇಳಿ ಕೊಡ್ತಾ ಇದ್ದದ್ದು ಅವರ ಕೈ ಹಿಡಿದು ಅಕ್ಷರ ತಿದ್ದಿಸಬಹುದು, ಅಷ್ಟು ಹೊತ್ತು ಅವರ ಮುಗ್ಧ ಸ್ಪರ್ಶವನ್ನು ಅನುಭವಿಸಬಹುದು ಎಂಬ ಒಂದೇ ಒಂದು ಕಾರಣಕ್ಕಾಗಿ. ಆದರೆ ಈಗ ಮಕ್ಕಳ ಕೈಗೆ ಮೊಬೈಲ್, ಟ್ಯಾಬ್ ಅಥವಾ ಕಂಪ್ಯೂಟರ್ ಸಿಕ್ಕರೆ ಅವರೇ ಎಲ್ಲರಿಂದ ದೂರ ಸರಿಯುತ್ತಾರೆ. ಒಂದು ರೀತಿ ಸ್ಪರ್ಶರಾಹಿತ್ಯವನ್ನು ಸೃಷ್ಟಿಸಿಕೊಳ್ಳುತ್ತಾರೆ. ಇದು ‘ಇ’ ಸಂಕೀರ್ಣ ಕಾಲದ್ದು ಮತ್ತು ಅಲ್ಪ ಕಾಲದ್ದಾಗಿರಲಿ ಎಂದು ನಾನು ಹಾರೈಸುತ್ತೇನೆ.

ಮಕ್ಕಳನ್ನ ಕರೆದು ಕೂರಿಸಿ ಪಾಠ ಹೇಳುವುದು ಈಗ ಅದು ಸಾಧ್ಯ ಆಗಲ್ಲ ಅಂತಿಲ್ಲ. ಆದರೆ ಇದು ಆನ್​ಲೈನ್​ ಕಾಲ. ಮಕ್ಕಳನ್ನ ‘ಇ’ ಕಾಲಕ್ಕೆ ತಕ್ಕಂತೆ ಬೆಳೆಸದೇ ಹೋದರೆ ಅದು ಕಾಲಕ್ಕೆ ತಕ್ಕ ನಡೆ ಅಲ್ಲ. ಕಾಲದ ಜೊತೆ ಸಾಗದ್ದು ಯಾವತ್ತೂ ಕಾಲವಶ. ಶಾಲೆಗಳು ಮುಚ್ಚಿರುವ ಕಾಲದಲ್ಲೂ ಮಕ್ಕಳ ಕಲಿಕೆಯ ರೀತಿ ಮಾತ್ರ ಅದ್ಭುತ. ಈ ಕಾರಣಕ್ಕಾಗಿ ಮಕ್ಕಳ ವಯಸ್ಸಿಗೆ ಮನಸ್ಸಿಗೆ ಬುದ್ಧಿಗೆ ತಕ್ಕಂತೆ ಸ್ಪಂದಿಸುವುದು ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾಗುತ್ತದೆ.

ಮಕ್ಕಳ ಕಲಿಕೆಯ ಸಮಕಾಲೀನತೆ ಎಂದಾಗ ಹೇಳಲೇಬೇಕಾದ ಹೆಸರು ಪ್ರಥಮ್ ಬುಕ್ಸ್. ಈ ಕಾಲದ ಮಕ್ಕಳಿಗೆ ತೀರಾ ಅಗತ್ಯವಿರುವ ಆಡಾಡ್ತಾನೇ ಕಲಿಯುವಂಥ STEM (Science, Technology, Engineering, and Mathematics) ಪುಸ್ತಕಗಳನ್ನು ಪ್ರಥಮ್ ಬುಕ್ಸ್ ನೀಡುತ್ತಿದೆ. ಎರಡು ಕಾರಣಕ್ಕೆ ಪ್ರಥಮ್ ಬುಕ್ಸ್ ಪ್ರಸ್ತುತತಕ್ಕೆ ಪ್ರಸ್ತುತ ಅನಿಸುವುದು. ಒಂದು ಪ್ರಿಂಟ್ ಪುಸ್ತಕದಲ್ಲಿ ಎಷ್ಟು ಪ್ರಯೋಗಳನ್ನು ಮಾಡುತ್ತದೆಯೋ ಅಷ್ಟನ್ನೂ ಆನ್​ಲೈನ್​ನಲ್ಲೂ ಮಾಡುತ್ತದೆ. ಏಕ ಕಾಲದಲ್ಲಿ ಟ್ಯಾಬ್ ನಲ್ಲಿ ಮಕ್ಕಳು ಒಂದು ಕತೆಯ ಆಡಿಯೋ, ಎವಿ (ಆಡಿಯೋ ವಿಷ್ಯುವಲ್) ನೋಡಬಹುದು. ಜೊತೆಗೆ ಪ್ರಿಂಟ್ ಪುಸ್ತಕವನ್ನು ಕೈಯಲ್ಲಿ ಹಿಡಿದು ಈ ವಾಕ್ಯವನ್ನು ಹೇಗೇ ಓದುವುದು ಎನ್ನುವುದನ್ನೂ ಕೇಳಬಹುದು.

Google analytics ಪ್ರಕಾರ, ಕೊರೊನಾ ಸಮಯದಲ್ಲಿ ಪ್ರಥಮ್ ಬುಕ್ಸ್‌ನ ಆನ್‌ಲೈನ್ ಅಂಗಳ ‘Story Weaver’ ಜಾಲತಾಣದ ಜಾಗತಿಕ ವೀಕ್ಷಣಾ ಹರಿವು ಶೇ 180ರಷ್ಟು ಹೆಚ್ಚಾಗಿದೆ. ಭಾರತೀಯ ಮಕ್ಕಳ ಜೊತೆಗೇ ಕೊರೊನಾ ಪೀಡಿತ ಫ್ರಾನ್ಸ್ ಮತ್ತು ಇಟಲಿ ದೇಶಗಳ ಜನರು ಈ ತಾಣವನ್ನು ಹೆಚ್ಚು ಬೆಳೆಸಿಕೊಂಡಿದ್ದಾರೆ.  ಶಾಲೆಗಳು ಮುಚ್ಚಿದ್ದ ಹೊತ್ತಿನಲ್ಲಿ ಕೇರಳದ ಸರಕಾರಿ ಶಾಲೆಯ ಶಿಕ್ಷಕರಿಗೆ ಶೈಕ್ಷಣಿಕ ಸಂಪನ್ಮೂಲವನ್ನು ಒದಗಿಸುವ ಜಾಲತಾಣ Kites ಕೂಡ Story viewer ಅನ್ನು ಸಂಪನ್ಮೂಲವಾಗಿ ಬಳಸಿದೆ. ಯುನೆಸ್ಕೊ ಬಿಡುಗಡೆಗೊಳಿಸಿರುವ ಆನ್​ಲೈನ್​ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವ ಜಾಲತಾಣಗಳ ಪಟ್ಟಿಯಲ್ಲಿ Story Weaver ಅನ್ನೂ ಸೇರಿಸಿದೆ.

ಇದೀಗ ಪ್ರಕಟಗೊಂಡಿರುವ ಪ್ರಥಮ್ ಬುಕ್ಸ್ ನ ಎರಡು ಪುಸ್ತಕಗಳು:

1) ನಿಮ್ಮ ದೇಹ ನಿಮ್ಮದೇ : ಲೈಂಗಿಕತೆಯ ವಿಷಯಕ್ಕೆ ಬಂದಾಗ ಪೋಷಕರಿಗೆ ಬಾಯಿ ಕಟ್ಟಿದಂತಾಗುತ್ತದೆ. ಅಂತಹವರು ‘ನಿಮ್ಮ ದೇಹ ನಿಮ್ಮದೇ’ (2020) ಪುಸ್ತಕವನ್ನು ಒಮ್ಮೆ ಓದಬೇಕು. ಯಾಮಿನಿ ವಿಜಯನ್ ಬರೆದ ಈ ಪುಸ್ತಕಕ್ಕೆ ಐಂದ್ರಿ ಸಿ. ಚಿತ್ರಗಳನ್ನು ರಚಿಸಿದ್ದಾರೆ. ಪುಸ್ತಕದಲ್ಲಿ ದೇಹದ ಭಾಗಗಳನ್ನು ಸೂಚಿಸಲು ಸುಳ್ಳು ಹೆಸರುಗಳು ಅಥವಾ ಸೌಮ್ಯೋಕ್ತಿಗಳಿಗೆ ಬದಲಾಗಿ ನಿಜವಾದ ಹೆಸರುಗಳನ್ನೇ ಬಳಸಿರುವುದರಿಂದ ಮಕ್ಕಳು ತಮ್ಮ ದೇಹವನ್ನು ಗಮನಿಸಿ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಮಕ್ಕಳು ತಮಗೆ ಇರಿಸುಮುರುಸು ಅಥವಾ ನೋವನ್ನುಂಟುಮಾಡುವ ಸ್ಪರ್ಶಗಳಿಗೆ ‘ಬೇಡ’ ಎಂದು ಹೇಳುವ ಮೂಲಕ ಸ್ವಯಂ ಅರಿವು ಹೊಂದುವ ಮತ್ತು ತಮ್ಮ ತಮ್ಮ ಪರಿಧಿಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವುದು ಇಲ್ಲಿನ ಉದ್ದೇಶವಾಗಿದೆ. ಈ ಪುಸ್ತಕವು ದಿವ್ಯಾಂಗ ಮಕ್ಕಳ ವಿಚಾರಗಳನ್ನೂ ಸೇರಿಸಿಕೊಳ್ಳಲು ಪ್ರಯತ್ನಿಸಿದೆ.

2) ಅಮ್ಮು ಮತ್ತು ಗುಬ್ಬಚ್ಚಿಗಳು: ಅಮ್ಮು ಮತ್ತು ಗುಬ್ಬಚ್ಚಿಗಳು (2020), ಲೇಖಕರು ವಿನೀತ, ಚಿತ್ರಗಳು ಜಯೇಶ್ ಸಿವನ್ ಅವರದು. ತಂದೆ-ತಾಯಿಗೋಸ್ಕರ ಕಾಯುತ್ತಿರುವ ಹತಾಶೆ ತುಂಬಿದ ಮಗುವಿನ ಕತೆಯ ಪುಸ್ತಕ. ತನ್ನ ಪ್ರೀತಿಯ ಅಜ್ಜಿ ಮನೆಯಲ್ಲಿ ಆಹಾರ ಹುಡುಕಿ ಬರುವ ಪಕ್ಷಿಗಳೊಂದಿಗೆ  ಹುಡುಗ ದಿನಗಳನ್ನು ದೂಡುತ್ತಿರುತ್ತಾನೆ. ವಿಚ್ಛೇದನ, ಬೇರ್ಪಡುವಿಕೆ ಇತ್ಯಾದಿ ಪದಗಳನ್ನು ಬಳಸದೆಯೇ ಪ್ರಥಮ್ ಬುಕ್ಸ್ ಹೊರತಂದಿರುವ ಈ ಪುಸ್ತಕ ಮಗುವಿನ ದುಃಖ ಮತ್ತು ತಂದೆತಾಯಿಯರ ಗೈರನ್ನು ವಾಸ್ತವಿಕವಾಗಿ ತೆರೆದಿಡುತ್ತದೆ.‌ ದುಃಖಿಸುತ್ತಿರುವ ಮೊಮ್ಮಗನನ್ನು ಕುರಿತು ಅಜ್ಜಿ ‘ನ್ಯಾಯಾಲಯ ಇನ್ನೂ ತೀರ್ಪು ಕೊಟ್ಟಿಲ್ಲ ಗೊತ್ತೇನು, ಯಾಕೆಂದರೆ ಅವರಿಗೆ ನಿನ್ನ ಮೇಲೆ ಪ್ರೀತಿಯಿದೆ. ಸ್ವಲ್ಪ ಕಾಲ ಹಿಡಿಯುತ್ತದೆ’ ಎಂದು ಸಮಾಧಾನಗೈಯುತ್ತಾಳೆ.

ಈಗ ಮತ್ತೆ ಮಕ್ಕಳ ಕಲಿಕೆಯ ಸಮಕಾಲೀನತೆಗೆ ಬರುವುದಾದರೆ, ನನ್ನದೇ ಶಾಲೆಯಲ್ಲಿ ಕಲಿಯುವ ಪ್ರತಿ ಮಗುವಿನ ಕಲಿಕೆಯ ರೀತಿ ವಿಭಿನ್ನ. ಬಹುತೇಕ ಮಕ್ಕಳ ನಡೆನುಡಿಯಲ್ಲಿ ತಾವು ನೋಡಿದ ಮಕ್ಕಳ ವಿಡಿಯೋ, ಚಿತ್ರಕ್ಕೆ ಸಂಬಂಧಿಸಿದ ಪ್ರಭಾವವಿರುತ್ತದೆ. ಇದೊಂಥರಾ ಅಕಾಲಿಕ ಪ್ರೌಢತೆ. ಅವರ ಗ್ರಹಿಕೆಯ ಮಟ್ಟವನ್ನು ನಾವು ಊಹೆ ಮಾಡಿಕೊಳ್ಳಲು ಆಗದಷ್ಟು ವೇಗದಲ್ಲಿದೆ. ಈ ಕುರಿತಾದ ಒಂದು ಕತೆ ಹೇಳಿ ಇದನ್ನ ಮುಗಿಸುತ್ತೇನೆ.

ಕಳೆದವರ್ಷ ಅಕ್ಟೋಬರ್ 2ರ ಹಿಂದು ಮುಂದು ಒಂದುವಾರ ಮಕ್ಕಳಿಗೆ ಗಾಂಧೀಜಿ ಬಗ್ಗೆ ಹೇಳುತ್ತಿದ್ದೆ. ಆ ಸಪ್ತಾಹದಲ್ಲಿ ಕೆಲವು ಮಕ್ಕಳ ಸಸ್ಯಾಹಾರವನ್ನೂ ರೂಢಿಸಿಕೊಂಡಿದ್ದರು. ಅದಾದ ಮೇಲೂ ಕೆಲವು ಮಕ್ಕಳು ಸಸ್ಯಾಹಾರದಲ್ಲೇ ಮುಂದುವರಿಯುತ್ತಿದ್ದಾಗ, ಒಂದು ದಿನ: ಮಗುವೊಂದು ಇನ್ನೊಂದು ಮಗುಗೆ ಚಿಕನ್ ತಿನ್ನುವೆಯಾ ಅಂತ ಕೇಳಿತು. ಈ ಮಗು ಒಲ್ಲೇ ಎಂದಿತು. ಮೊದಲ ಮಗು ‘ಇದು ಸಿರಿಧಾನ್ಯ ತಿಂದ ಕೋಳಿ ಕಣೋ… ನೀ ತಿನ್ನಬಹುದು ಎಂದಿತು!’

ಆಗಿದ್ದಿಷ್ಟೇ. ಕೃಷಿ, ಕೋಳಿ, ಕುರಿ ಸಾಕಣೆ ಸೇರಿದಂತೆ ಕೆಲವು ವೃತ್ತಿಗಳ ಪ್ರತ್ಯಕ್ಷ ಶಿಕ್ಷಣ ಪರಿಚಯಕ್ಕೆಂದು ಮಕ್ಕಳನ್ನು ಫೀಲ್ಡಿಗೆ ಕರೆದುಕೊಂಡು ಹೋದಾಗ, ಕೋಳಿಗಳ ಆಹಾರದ ತೌಡನ್ನು ಮೊದಲ ಮಗು ಸಿರಿಧಾನ್ಯ ಎಂದು ಭಾವಿಸಿದೆ. ನಮ್ಮ ಊರಿನಲ್ಲಿ ಸಪ್ಲೈ ಆಗುವ ಚಿಕನ್ ಎಲ್ಲ ನಾವು ನೋಡಲು ಹೋದ ಫಾರಮ್​ನದ್ದೇ. ಹಾಗಿದ್ದ ಮೇಲೆ ಆ ಸಿರಿಧಾನ್ಯ ತಿಂದ ಕೋಳಿಯನ್ನ ತಿಂದರೆ ಸಿರಿಧಾನ್ಯವನ್ನೇ ತಿಂದ ಹಾಗಲ್ಲವೇ? ತರ್ಕಶಾಸ್ತ್ರದ ಪ್ರಕಾರ ಇದು ನಿಜ ಕೂಡ!

ಪರಿಚಯ: ಹೇಮಾ ಖುರ್ಸಾಪುರ ಅವರಿಗೆ ಮಕ್ಕಳಿಗಾಗಿ ಅನುವಾದ ಮಾಡುವುದು, ನರ್ಸರಿ ಮಕ್ಕಳಿಗೆ ಕಲಿಸುವುದೆಂದರೆ ಅತೀವ ಆಸಕ್ತಿ. ಸದ್ಯ ಶಿಗ್ಗಾವಿಯಲ್ಲಿ ತಮ್ಮದೇ ಶಾಲೆ ನಡೆಸುತ್ತಿದ್ದಾರೆ.

ಓದು ಮಗು ಓದು: ನಮ್ಮಮ್ಮ ಭಾರೀ ಪ್ಲ್ಯಾನ್ ಮಾಡ್ತಾರೆ!

Published On - 1:57 pm, Fri, 15 January 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ