ನಿಮಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ವಾ? ಇಲ್ಲಿದೆ ಸರಳ ಪರಿಹಾರಗಳು

ನಿಮಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ವಾ? ಇಲ್ಲಿದೆ ಸರಳ ಪರಿಹಾರಗಳು
ಸಾಂದರ್ಭಿಕ ಚಿತ್ರ

ಮದುವೆ ಎಂಬುದು ಮನುಷ್ಯರ ಜೀವನದ ಮಹತ್ವದ ಘಟನೆ. ಆದ್ರೆ ಕೆಲವರಿಗೆ ಸರಿಯಾದ ಸಮಯಕ್ಕೆ ಕಂಕಣಭಾಗ್ಯ ಕೂಡಿ ಬರದೇ ವಿವಾಹ ವಿಳಂಬವಾಗ್ತಿರುತ್ತೆ. ಇದಕ್ಕೆ ಕಾರಣ ನಮ್ಮ ಪೂರ್ವಜನ್ಮದ ಕರ್ಮಗಳು ಅನ್ನೋದು ಹಿರಿಯರ ಮಾತು. ಹೌದು, ಈ ಮಾತು ಖಂಡಿತವಾಗಿಯೂ ನಿಜ ಎನ್ನುತ್ತವೆ ನಮ್ಮ ಶಾಸ್ತ್ರಗಳು. ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆಗೆ ಕೂಡಾ ಒಳ್ಳೆಯದಾಗುತ್ತೆ. ಅದೇ ಪಾಪ […]

sadhu srinath

|

Dec 23, 2019 | 3:23 PM

ಮದುವೆ ಎಂಬುದು ಮನುಷ್ಯರ ಜೀವನದ ಮಹತ್ವದ ಘಟನೆ. ಆದ್ರೆ ಕೆಲವರಿಗೆ ಸರಿಯಾದ ಸಮಯಕ್ಕೆ ಕಂಕಣಭಾಗ್ಯ ಕೂಡಿ ಬರದೇ ವಿವಾಹ ವಿಳಂಬವಾಗ್ತಿರುತ್ತೆ. ಇದಕ್ಕೆ ಕಾರಣ ನಮ್ಮ ಪೂರ್ವಜನ್ಮದ ಕರ್ಮಗಳು ಅನ್ನೋದು ಹಿರಿಯರ ಮಾತು. ಹೌದು, ಈ ಮಾತು ಖಂಡಿತವಾಗಿಯೂ ನಿಜ ಎನ್ನುತ್ತವೆ ನಮ್ಮ ಶಾಸ್ತ್ರಗಳು. ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.

ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆಗೆ ಕೂಡಾ ಒಳ್ಳೆಯದಾಗುತ್ತೆ. ಅದೇ ಪಾಪ ಕರ್ಮಗಳನ್ನು ಮಾಡಿದರೆ ಅದು ಮುಂದಿನ ಪೀಳಿಗೆಯನ್ನು ಕಾಡುತ್ತೆ ಎನ್ನಲಾಗುತ್ತೆ. ಕೆಲವೊಂದು ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟ ಪಟ್ಟರೂ ನಮ್ಮ ಏಳಿಗೆ ಆಗುವುದಿಲ್ಲ ಅದಕ್ಕೆ ಮುಖ್ಯ ಕಾರಣ ಹಿಂದಿನವರು ಮಾಡಿರುವ ಪಾಪ ಕರ್ಮಗಳು.

ಮದುವೆ ವಿಳಂಬ ಆಗುವುದು ಕೂಡಾ ನಮ್ಮ ಹಿರಿಯರು ಮಾಡಿರುವ ಪಾಪ ಕರ್ಮಗಳಿಂದ ಎಂದು ಹೇಳಲಾಗುತ್ತೆ. ಕೆಲವರು ಎಷ್ಟೇ ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೇ ಮದುವೆ ವಿಳಂಬವಾಗುತ್ತೆ. ಇದಕ್ಕೆ ಹಿಂದೂ ಧರ್ಮದ ಪ್ರಕಾರ, ಪಿತೃದೋಷ ಅಥವಾ ಸರ್ಪದೋಷ ಕಾರಣ ಎನ್ನಲಾಗುತ್ತೆ. ನಿಮಗೆ ಗೊತ್ತಾ? ಆಧ್ಯಾತ್ಮದಲ್ಲಿ ಇಂತಹ ದೋಷಗಳ ನಿವಾರಣೆಗೆ ಸರಳ ಪರಿಹಾರಗಳಿವೆ.

ಶೀಘ್ರ ಕಲ್ಯಾಣಕ್ಕೆ ಸರಳ ಪರಿಹಾರಗಳು: 1.ಪಿತೃ ದೋಷ ನಿವಾರಣೆ ಮಾಡಿಕೊಂಡರೆ ಕಂಕಣಭಾಗ್ಯ ಕೂಡಿಬರುತ್ತೆ ಎನ್ನಲಾಗುತ್ತೆ. ಪಿತೃ ದೋಷ ನಿವಾರಣೆ ಆಗಬೇಕು ಅಂದ್ರೆ ಒಳ್ಳೆಯ ಕರ್ಮವನ್ನು ಮಾಡಬೇಕು. ಬಡವರಿಗೆ ಬಟ್ಟೆ, ಹಣ, ಆಹಾರವನ್ನು ದಾನ ಮಾಡಬೇಕು. 2.ಶನಿವಾರದಂದು ಅನ್ನದ ಉಂಡೆ ಮಾಡಿ. ಅದನ್ನು ಗೋವು, ಕಾಗೆ, ಮೀನುಗಳಿಗೆ ನೀಡಬೇಕು. 3.ಸೋಮವಾರದಂದು ಶಿವನಿಗೆ ಅಭಿಷೇಕ ಮಾಡಿ. ಹಾಲು, ಮೊಸರು, ಎಳನೀರು, ಹೂವು, ಜೇನುತುಪ್ಪ, ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿದ್ರೆ ಶೀಘ್ರ ಕಲ್ಯಾಣವಾಗುತ್ತೆ. 4.ವ್ಯಾಪಾರ ಅಥವಾ ಮದುವೆಗೆ ಸರ್ಪದೋಷ ಅಡ್ಡಿಯುಂಟು ಮಾಡುತ್ತೆ. ಇದಕ್ಕೆ ಪರಿಹಾರ ಸುಬ್ರಹ್ಮಣ್ಯನ ಆರಾಧನೆ. ಯಾಕಂದ್ರೆ ಸುಬ್ರಹ್ಮಣ್ಯನನ್ನು ಸರ್ಪದೋಷ ನಿವಾರಕ ಎಂದು ನಂಬಲಾಗಿದೆ.

ಇನ್ನು ವಿವಾಹ ವಿಳಂಬಕ್ಕೆ ನಾಗದೋಷ ಇರುವಂಥವರು ಸಾಮೂಹಿಕವಾಗಿ ಪರಿಹಾರ ಮಾಡಿಸಿಕೊಂಡಿರುತ್ತಾರೆ. ನೂರರಿಂದ ಇನ್ನೂರು ಜನ ಸೇರಿರುವಂಥ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸಲು ಮುಂದಾಗುತ್ತಾರೆ. ಕೆಲವರಿಗೆ ಅಲ್ಪ ಪ್ರಮಾಣದ ದೋಷ ಇದ್ದಲ್ಲಿ ಇಂಥ ಕಡೆ ಮಾಡಿಸಿದರೆ ಸಾಕು, ದೋಷ ನಿವಾರಣೆ ಆಗುತ್ತೆ.

ಆದರೆ ಕೆಲವರಿಗೆ ಈ ಪೂಜೆ-ಹವನ ಸಾಕಾಗುವುದಿಲ್ಲ. ಹೀಗಾಗೇ ಅಂತಹವರು ನಾಲ್ಕೈದು ಬಾರಿ ಪರಿಹಾರ ಮಾಡಿಸಬೇಕಾಗುತ್ತೆ. ಇನ್ನು ಸರ್ಪಸಂಸ್ಕಾರವನ್ನು ಯಾರು ಮಾಡಬೇಕು ಅನ್ನೋ ಪ್ರಶ್ನೆ ಕೂಡ ಹಲವರನ್ನು ಕಾಡುತ್ತೆ. ತಾವೇ ಸ್ವತಃ ಸರ್ಪದ ಹತ್ಯೆ ಮಾಡಿದವರು, ಸರ್ಪ ಹತ್ಯೆ ನೋಡಿದವರು ಅಥವಾ ಹತ್ಯೆಗೆ ಕಾರಣರಾದವರು ಮಾತ್ರ ಸರ್ಪಸಂಸ್ಕಾರ ಮಾಡಬೇಕಾಗುತ್ತೆ.

ವಿಶೇಷವಾಗಿ ಗಮನಿಸಬೇಕಾದ ಸಂಗತಿ ಏನಂದ್ರೆ ತಂದೆ- ತಾಯಿ ಬದುಕಿದ್ದವರು ಸರ್ಪಸಂಸ್ಕಾರವನ್ನು ಮಾಡಬಾರದು. ಇದು ಶ್ರೇಯಸ್ಕರವಲ್ಲ ಅಂತಾ ನಮ್ಮ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada