World Heritage Day 2022: ಭಾರತದ 5 ಪ್ರಮುಖ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ಈ ದಿನವನ್ನು ವಿಶ್ವ ಸ್ಮಾರಕ ಮತ್ತು ಸ್ಥಳದ ದಿನ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಹತ್ತು ಹಲವು ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವಪೂರ್ಣ ತಾಣಗಳು ಇದ್ದು ಅವು ನಮ್ಮ ಸಾಂಸ್ಕೃತಿಕ ವೈವಿದ್ಯತೆಯನ್ನು ತೋರಿಸುತ್ತದೆ.
ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕ ತಾಣಗಳ (World Heritage Day 2022) ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಸಾಂಸ್ಕೃತಿ ಪರಂಪರೆ, ಐತಿಹಾಸಿಕ ಸ್ಥಳಗಳು ಇವುಗಳ ಬಗ್ಗೆ ನಮ್ಮಲ್ಲಿ ಕಾಳಜಿ ಹಾಗೂ ಎಚ್ಚರ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ಸಾಂಸ್ಕೃತಿಕ ವೈವಿದ್ಯವನ್ನು ಸಂರಕ್ಷಿಸಲು ಕೂಡ ಈ ದಿನವು ನೆನಪಿಸುತ್ತದೆ. ಈ ದಿನವನ್ನು ವಿಶ್ವ ಸ್ಮಾರಕ ಮತ್ತು ಸ್ಥಳದ ದಿನ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಹತ್ತು ಹಲವು ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವಪೂರ್ಣ ತಾಣಗಳು ಇದ್ದು ಅವು ನಮ್ಮ ಸಾಂಸ್ಕೃತಿಕ ವೈವಿದ್ಯತೆಯನ್ನು ತೋರಿಸುತ್ತದೆ.
ಇಲ್ಲಿ ಭಾರತದ ಐದು ಪ್ರಮುಖ ಪಾರಂಪರಿಕ ತಾಣಗಳ ಬಗ್ಗೆ ವಿವರ ನೀಡಲಾಗಿದೆ
ಅಜಂತಾ ಗುಹೆಗಳು, ಮಹಾರಾಷ್ಟ್ರ: ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಇರುವ ಅಜಂತಾ ಗುಹೆಗಳು ಬೌದ್ಧ ಧಾರ್ಮಿಕ ಕೆತ್ತನೆಗಳಿಂದ ಖ್ಯಾತಿ ಪಡೆದುಕೊಂಡಿದೆ. ಅಲ್ಲಿ ಸುಮಾರು 30 ರಷ್ಟು ಬೌದ್ಧ ಗುಹಾಂತರ ಸ್ಮಾರಕಗಳು ಇವೆ. ಈ ಗುಹಾಂತರ ದೇವಾಲಯಗಳ ಬಗ್ಗೆ ಅಂದಿನ ಚೀನಾದ ಬೌದ್ಧ ಪ್ರಯಾಣಿಕರು ಕೂಡ ಉಲ್ಲೇಖಿಸಿದ್ದಾರೆ. ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಕೂಡ ಅಂದರೆ, 17ನೇ ಶತಮಾನದ ಆರಂಭದಲ್ಲಿ ಕೂಡ ಈ ಗುಹಾಂತರ ದೇಗುಲಗಳ ಬಗ್ಗೆ ಉಲ್ಲೇಖವಿದೆ.
ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ: ವಿಶ್ವದ ಮೂರರಲ್ಲಿ ಎರಡರಷ್ಟು ಭಾಗ ಒಂದು ಕೋಡಿನ ರೈನೋಸಾರಸ್ಗಳು ಕಾಜಿರಂಗಾ ನೇಷನಲ್ ಪಾರ್ಕ್ನಲ್ಲಿ ಇದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಬಿಗ್ ಫೈವ್ ಎಂಬ ಪಟ್ಟಿಯಲ್ಲಿ ಒಂದು ಕೋಡಿನ ರೈನೋಸಾರಸ್, ರಾಯಲ್ ಬೆಂಗಾಲ್ ಟೈಗರ್, ಏಷಿಯನ್ ಆನೆ, ಕಾಡು ನೀರೆಮ್ಮೆ ಹಾಗೂ ಜಿಂಕೆ ಇದೆ. ಈ ಪ್ರದೇಶವು ಎತ್ತರದ ಹುಲ್ಲುಗಾವಲು, ದಟ್ಟ ಅರಣ್ಯ, ಬ್ರಹ್ಮಪುತ್ರ ಸಹಿತ ನಾಲ್ಕು ಮುಖ್ಯ ನದಿಗಳು ಇರುವ ಪ್ರದೇಶವಾಗಿದೆ.
ತಾಜ್ ಮಹಲ್, ಉತ್ತರ ಪ್ರದೇಶ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ. ಶಹಜಹಾನ್ ಈ ಸ್ಮಾರಕವನ್ನು ತನ್ನ ಮೂರನೇ ಪತ್ನಿ ಮುಮ್ತಾಜ್ ಬೇಗಂ ಸಮಾಧಿಯಾಗಿ ಕಟ್ಟಿಸಿದ. ಇದು ಯುನೆಸ್ಕೋದ 1983 ರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.
ಕೋನಾರ್ಕ್ ಸೂರ್ಯ ದೇವಾಲಯ, ಒಡಿಸ್ಸಾ: ಕೊನಾರ್ಕ್ ಸೂರ್ಯ ದೇವಾಲಯ 13ನೇ ಶತಮಾನದ ದೇಗುಲವಾಗಿದೆ. ಮಹಾನದಿ ತಟದ, ಬಂಗಾಳ ಕೊಲ್ಲಿಯ ಪೂರ್ವ ತೀರದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. ಸೂರ್ಯನ ರಥ, 24 ಚಕ್ರಗಳು ಮತ್ತು ಏಳು ಕುದುರೆಗಳಿಂದ ಕೂಡಿದ ಕೆತ್ತನೆಗಳಿಂದ ಈ ದೇವಾಲಯ ನಿರ್ಮಾಣ ಮಾಡಲಾಗಿದೆ.
ಸಂಚಿ ಸ್ತೂಪ, ಮಧ್ಯಪ್ರದೇಶ: ಸಂಚಿಯ ಬೌದ್ಧ ಸ್ತೂಪ ಕ್ರಿಸ್ತಪೂರ್ವ 200 ರಿಂದ ಕ್ರಿಸ್ತಪೂರ್ವ 100ನೇ ಶತಮಾನದವರೆಗೆ ನಿರ್ಮಾಣವಾದ ಬೌದ್ಧ ಸ್ಮಾರಕಗಳಾಗಿವೆ. ಇದು ಮಧ್ಯಪ್ರದೇಶದ ಭೋಪಾಲ್ನಿಂದ ಸುಮಾರು 45 ಕಿಲೋಮೀಟರ್ನಷ್ಟು ವ್ಯಾಪ್ತಿಯಲ್ಲಿದೆ. ಜನವರಿ 24, 1989 ರಲ್ಲಿ ಯುನೆಸ್ಕೊ ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.
ಇದನ್ನೂ ಓದಿ: ಹೊಯ್ಸಳರ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳನ್ನು ವಿಶ್ವ ಪಾರಂಪರಿಕ ಕೇಂದ್ರವೆಂದು ಪರಿಗಣಿಸಲು ನಾಮನಿರ್ದೇಶನ
ಇದನ್ನೂ ಓದಿ: ಹಂಪಿಯಲ್ಲಿ ದೇವಾಯತನಮ್ ಸಂಭ್ರಮ: ದೇಗುಲಗಳ ವಾಸ್ತುಶಿಲ್ಪ ಚಿಂತನೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆ
Published On - 11:49 am, Mon, 18 April 22