ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಅನುವಾದಕ ಕೆ. ನಲ್ಲತಂಬಿ

‘ಕನ್ನಡ ಸಿನಿಮಾದ ಬಗ್ಗೆ ಹೀಗೊಂದು ಪುಸ್ತಕ ತಮಿಳಿನಲ್ಲಿ ಬಂದಿರುವುದು ಅನೇಕ ಕನ್ನಡ ಸಿನಿಮಾ ರಸಿಕರಿಗೆ ತಿಳಿದಿರಲು ಸಾಧ್ಯವಿಲ್ಲ. ಮಾಹಿತಿಪೂರಕವಾದ ಈ ಕೃತಿಯನ್ನು ಅನುವಾದಿಸುವಾಗ ನನಗೆ ಸಾಕಷ್ಟು ಆಸಕ್ತಿಕರ ವಿಷಯಗಳು ತಿಳಿಯುತ್ತಾ ಹೋದವು. ಈ ಪುಸ್ತಕ  ಶೀಘ್ರದಲ್ಲೇ ಹೊರಬರಲಿದೆ.‘ ಕೆ. ನಲ್ಲತಂಬಿ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಅನುವಾದಕ ಕೆ. ನಲ್ಲತಂಬಿ
ಅನುವಾದಕ, ಲೇಖಕ ಕೆ. ನಲ್ಲತಂಬಿ
Follow us
ಶ್ರೀದೇವಿ ಕಳಸದ
|

Updated on:Dec 30, 2020 | 11:01 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ತಮಿಳು-ಕನ್ನಡ ಅನುವಾದಕ, ಲೇಖಕ ಕೆ. ನಲ್ಲತಂಬಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ನವೀನ ಕನ್ನಡ ಸಿನೆಮಾ ತಮಿಳು  : ವಿಠ್ಠಲ್ ರಾವ್ ಕನ್ನಡಕ್ಕೆ : ಕೆ. ನಲ್ಲತಂಬಿ ಪ್ರ: ನಿಜ್ಹಲ್ ಪಬ್ಲಿಕೇಶನ್

ಈ ಪುಸ್ತಕ ಕನ್ನಡ ಸಿನಿಮಾಗಳ ಬಗ್ಗೆ (1960-70) ಬಹಳ ವಿಸ್ತಾರವಾಗಿ, ಕನ್ನಡ ನಾಟಕ ರಂಗದಿಂದ ತೊಡಗಿ ಸಿನಿಮಾದವರೆಗಿನ ಅನೇಕ ಮಾಹಿತಿಗಳನ್ನು ಕೂಲಂಕಷವಾಗಿ ಚರ್ಚಿಸುವ ಅದ್ಭುತವಾದ ಬರಹಗಳು ಇದರಲ್ಲಿವೆ. ಗುಬ್ಬಿ ವೀರಣ್ಣ, ಎಂ. ವಿ. ಸುಬ್ಬಯ್ಯ ನಾಯುಡು, ಸಿ. ಹೊನ್ನಪ್ಪ ಭಾಗವತರ್, ಹಿರಣ್ಣಯ್ಯ, ಜಮಕಂಡಿ ಕಂಪನಿ, ಸೂಳೇ ದೇಸಾಯ್ ಕಂಪನಿಗಳಿಂದ ತೊಡಗಿ ಪುಟ್ಟಣ್ಣ ಕಣಗಾಲ್, ಬಿ. ವಿ. ಕಾರಂತ, ಕಾರಂತ, ಎಂ. ಎಸ್. ಸತ್ಯು, ಪಟ್ಟಾಭಿರಾಮಿ ರೆಡ್ಡಿ, ಜಿ. ವಿ. ಅಯ್ಯರ್, ಗಿರೀಶ್ ಕಾರ್ನಾಡ್, ನಾಗ್ ಸಹೋದರರು, ಗಿರೀಶ್ ಕಾಸರವಳ್ಳಿ, ಹೀಗೆ  18 ಅಧ್ಯಾಯಗಳಾಗಿ ಕನ್ನಡ ಸಿನಿಮಾದ ಬಗ್ಗೆ ಬರೆದಿರುವ ಒಂದು ಅದ್ಭುತವಾದ ಅಧ್ಯಯನದ ಕೃತಿ. ಬಹಳ ಸರಳವಾಗಿ ಬರೆಯಲ್ಪಟ್ಟಿದೆ. ವಿಪರ್ಯಾಸವೆಂದರೆ 2011 ರಲ್ಲಿ ಕನ್ನಡ ಸಿನಿಮಾದ ಬಗ್ಗೆ ತಮಿಳಿನಲ್ಲಿ ಬಂದ ಈ  ಪುಸ್ತಕ ತಮಿಳು ಸಿನಿಮಾ ರಸಿಕರಿಗೆ  ಅಗತ್ಯವಿರಲಿಲ್ಲ. ಬಹಳ ಕಡಿಮೆಯ ಸಂಖ್ಯೆಯಲ್ಲಿ ಈವರೆಗೆ ಮಾರಾಟವಾಗಿದೆ. ಕನ್ನಡ ಸಿನಿಮಾದ ಬಗ್ಗೆ ಹೀಗೊಂದು ಪುಸ್ತಕ ತಮಿಳಿನಲ್ಲಿ ಬಂದಿರುವುದು ಅನೇಕ ಕನ್ನಡ ಸಿನಿಮಾ ರಸಿಕರಿಗೆ ತಿಳಿದಿರಲು ಸಾಧ್ಯವಿಲ್ಲ. ಮಾಹಿತಿಪೂರಕವಾದ ಈ ಕೃತಿಯನ್ನು ಅನುವಾದಿಸುವಾಗ ನನಗೆ ಸಾಕಷ್ಟು ಆಸಕ್ತಿಕರ ವಿಷಯಗಳು ತಿಳಿಯುತ್ತಾ ಹೋದವು. ಈ ಪುಸ್ತಕ  ಶೀಘ್ರದಲ್ಲೇ ಹೊರಬರಲಿದೆ.

ಕೃ: ಮಾರ್ಗಜ್ಹಿ ಉರ್ಚವಮ್ (ಧನುರ್ ಉತ್ಸವ)

ಲೇ : ಸಚಿತ್ರ ದಾಮೋದರನ್

ಪ್ರ: ಸಂಧ್ಯಾ ಪಬ್ಲಿಕೇಶನ್ 

ಧನುರ್ ಮಾಸದ ಮೂವತ್ತು ದಿನಗಳೂ ವ್ರತ ಆಚರಿಸಿ, ಆಂಡಾಳ್ ರಚಿಸಿದ ಆಯ್ದ ಮೂವತ್ತು ಬಾಸುರಗಳನ್ನು  ಹಾಡಿ ಸಂಭ್ರಮಿಸುತ್ತಾರೆ. ಹಾಗೆ ಆಚರಿಸುವ ಆ ದಿನಗಳನ್ನು ‘ಪಾವೈ ನೋಂಬು’ (ಸ್ತ್ರೀ ವ್ರತ) ಎಂದು ಕೋದೈ ಆಂಡಾಳ್ ಕರೆಯುತ್ತಾಳೆ. ಆದೇನದು ಸ್ತ್ರೀ ವ್ರತ ಇದರಲ್ಲಿ ಪುರುಷರು ಪಾಲ್ಗೊಳ್ಳುವುದಿಲ್ಲವೇ? ಎಂದು ಕೇಳಿದರೆ, ಆ ಸ್ತ್ರೀಯರು ವ್ರತ ಆಚರಿಸುವುದೇ ತನ್ನೊಂದಿಗೆ ಒಡಹುಟ್ಟಿದ ಸಹೋದರರಿಂದ ಹಿಡಿದು, ತನಗೆ ಬರುವ ಗಂಡನವರೆಗೆ ಎಲ್ಲರೂ ಸುಖವಾಗಿರಬೇಕೆಂಬ ಉದ್ದೇಶದಿಂದಲೇ.

ಈ ಮೂವತ್ತು ಬಾಸುರಗಳ ಅರ್ಥ, ಅದರ ಹಿಂದಿನ ಪೌರಾಣಿಕ ಕಥೆಗಳ ಹಿನ್ನೆಲೆ ಇವುಗಳ ಜತೆ ಜತೆಯಲ್ಲಿಯೇ ಅದಕ್ಕೆ ಒಂದು ವೈಜ್ಞಾನಿಕ, ವೈದ್ಯಕೀಯ ವಿವರಣೆಗಳನ್ನು ನೀಡುತ್ತಾ ಬರೆದಿರುವ ಮೂವತ್ತು ಅಂಕಣಗಳು. ಇದು ಬಾಸುರಗಳ ಬಗ್ಗೆಯ ಒಂದು ಹೊಸ ಬಗೆಯ ಕಣ್ಣೋಟ. ಬಹಳ ಕಾವ್ಯಾಮಯವಾಗಿ, ಸರಳವಾಗಿ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಬರೆದಿರುವ ಕೃತಿ. ತಮಿಳು ಸಾಹಿತ್ಯಕ್ಕೆ ಒಂದು ಒಳ್ಳೆಯ ಸೇರ್ಪಡೆ. ಇದು ಸಚಿತ್ರ ಅವರ ಚೊಚ್ಚಲು ಕೃತಿ ಎಂದು ಹೇಳಲು ಸಾಧ್ಯವೇ ಇಲ್ಲ, ಅಷ್ಟು ಸೊಗಸಾಗಿಸಿದೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ನಾ. ದಾಮೋದರ ಶೆಟ್ಟಿ; ’ರಂಗಕೈರಳಿ‘ ಮತ್ತು ’ಮಿನುಗೆಲೆ ಮಿನುಗೆಲೆ ನಕ್ಷತ್ರ‘

Published On - 1:19 pm, Tue, 29 December 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್