Adhik Maas Amavasya 2023: ಅಧಿಕ ಶ್ರಾವಣ ಮಾಸದ ಅಮಾವಾಸ್ಯೆಯ ಮುಹೂರ್ತ, ಪೂಜೆ ವಿಧಾನ ಬಗ್ಗೆ ತಿಳಿದಿದೆಯಾ?

ಅಮವಾಸ್ಯೆ ಮೂಲಕ ಅಂದರೆ ಆಗಸ್ಟ್ 16 ರಂದು ಈ ತಿಂಗಳು ಮುಕ್ತಾಯಗೊಂಡು ನಿಜ ಶ್ರಾವಣ ಮಾಸ ಆರಂಭವಾಗಲಿದೆ. ಈ ಅಮವಾಸ್ಯೆಯಂದು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಜೊತೆಗೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಪೂರ್ವಜರನ್ನು ಸಂತೃಪ್ತಿಪಡಿಸಲು ತರ್ಪಣ, ಪಿಂಡದಾನ ಮಾಡಿದರೆ ಪಿತೃದೋಷವೂ ನಿವಾರಣೆಯಾಗುತ್ತದೆ.

Adhik Maas Amavasya 2023: ಅಧಿಕ ಶ್ರಾವಣ ಮಾಸದ ಅಮಾವಾಸ್ಯೆಯ ಮುಹೂರ್ತ, ಪೂಜೆ ವಿಧಾನ ಬಗ್ಗೆ ತಿಳಿದಿದೆಯಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 16, 2023 | 5:02 AM

ಚಾತುರ್ಮಾಸದ ಮೊದಲ ತಿಂಗಳು ಶ್ರಾವಣ ಮಾಸ. ಅದರಲ್ಲಿಯೂ ಈ ಬಾರಿ ಅಧಿಕ ಶ್ರಾವಣ ಮಾಸ ಬಂದಿರುವುದರಿಂದ ವ್ರತಾಚರಣೆ ಮಾಡುವವರಿಗೆ ಶುಭವಾಗಿದೆ. ಅಮವಾಸ್ಯೆ ಮೂಲಕ ಅಂದರೆ ಆಗಸ್ಟ್ 16 ರಂದು ಬುಧವಾರ, ಈ ತಿಂಗಳು ಮುಕ್ತಾಯ ಗೊಂಡು ನಿಜ ಶ್ರಾವಣ ಮಾಸ ಆರಂಭವಾಗಲಿದೆ. ಈ ಅಮವಾಸ್ಯೆಯಂದು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಜೊತೆಗೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಪೂರ್ವಜರನ್ನು ಸಂತೃಪ್ತಿಪಡಿಸಲು ತರ್ಪಣ, ಪಿಂಡದಾನ ಮಾಡಿದರೆ ಪಿತೃದೋಷವೂ ನಿವಾರಣೆಯಾಗುತ್ತದೆ.

ಅಮವಾಸ್ಯೆಯ ದಿನ ಸ್ನಾನ ಮಾಡಿ ಶ್ರದ್ದೆಯಿಂದ ದಾನ ಮಾಡಿದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಜೊತೆಗೆ ನಿಮ್ಮ ಜಾತಕದಲ್ಲಿರುವ ಕಂಟಕಗಳಿಂದ ಮುಕ್ತಿ ದೊರೆಯುತ್ತದೆ. ಆದರೆ ಈ ದಿನ ವ್ರತಾಚರಣೆ, ದೇವಸ್ಥಾನಗಳಿಗೆ ಹೋಗುವವರು ಕಪ್ಪು ಬಟ್ಟೆಯನ್ನು ಧರಿಸಬಾರದು. ಇದೆಲ್ಲದರ ಜೊತೆಗೆ ಅರಳಿ ಮರವನ್ನು ಪೂಜಿಸಿ, 5, 11 ಅಥವಾ 21 ಸುತ್ತು ಸುತ್ತಿ ಬರುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.

ಸಮಯ, ಆಚರಣೆ ಯಾವಾಗ?

ಅಧಿಕ ಮಾಸದ ಅಮಾವಾಸ್ಯೆ ತಿಥಿ ಆರಂಭವಾಗುವುದು ಆಗಸ್ಟ್ 15 ರಂದು ಮಂಗಳವಾರ ಮಧ್ಯಾಹ್ನ 12.42ರಿಂದ. ತಿಥಿ ಮುಕ್ತಾಯವಾಗುವುದು, ಆಗಸ್ಟ್ 16 ರಂದು ಬುಧವಾರ ಮಧ್ಯಾಹ್ನ 03.07 ಕ್ಕೆ. ಯಾವ ತಿಥಿಯಲ್ಲಿ ಸೂರ್ಯ ಉದಯದ ಮೂಹೂರ್ತ ವಿರುತ್ತದೆಯೋ ಅದೇ ದಿನ ಆಚರಣೆ ಮಾಡಲಾಗುತ್ತದೆ. ಹಾಗಾಗಿ ಇದರ ಅನುಗುಣವಾಗಿ ಅಧಿಕ ಅಮಾವಾಸ್ಯೆಯನ್ನು ಆಗಸ್ಟ್‌ 16 ರಂದು ಬುಧವಾರ ಆಚರಿಸಲಾಗುವುದು.

ಇದನ್ನೂ ಓದಿ: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?

ಯಾವ ರೀತಿಯಲ್ಲಿ ಆಚರಣೆ ಮಾಡಬೇಕು?

ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಬಳಿಕ ಉಪವಾಸ ಆರಂಭಿಸಬೇಕು. ಯಾವುದೇ ರೀತಿಯ ಮಾಂಸಾಹಾರ ಮತ್ತು ಅಕ್ಕಿ ಬೆರೆಸಿದ ಆಹಾರಗಳನ್ನು ಸೇವಿಸಬಾರದು. ಹಣ್ಣು, ತರಕಾರಿ ರವೆ ಸೇರಿಸಿದ ಆಹಾರಗಳನ್ನು ಸೇವಿಸಬಹುದು. ಪೂಜೆ ಮುಗಿಸಿ, ದೇವಸ್ಥಾನಗಳಿಗೆ ಹೋಗಿ ಬರಬಹುದು. ಇಲ್ಲವಾದಲ್ಲಿ ಹಸುವಿಗೆ ಪ್ರಸಾದ ನೀಡಿ, ನೀವು ನೀರು ಆಹಾರ ಸೇವಿಸಬಹುದು. ನಿಮಗೆ ಆಗುವುದಾದರೆ ಹತ್ತಿರದಲ್ಲಿರುವ ಬಡವರ ಮನೆಗೆ ಬಟ್ಟೆ, ಎಳ್ಳು, ಹೆಸರುಕಾಳು, ಸಿಹಿತಿಂಡಿಗಳನ್ನು ಕೊಟ್ಟು ಬರಬಹುದು. ಗಂಡಸರು ಗಾಯತ್ರಿ ಮಂತ್ರ ಪಠಿಸಿದರೆ ಒಳಿತು. ಹೆಂಗಸರು ಶಿವನ ನಾಮದೇಯದಿಂದ ಆರಂಭವಾಗುವ ಯಾವ ಶ್ಲೋಕವನ್ನಾದರೂ ಹೇಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ