ಜೀವನವೆಂಬ ಬಹುಮೂಲ್ಯ ನಾಣ್ಯ ಸಮಯ ನೋಡಿ ತನ್ನ ಮುಖವ ಪರಿಚಯಿಸುತ್ತದೆ, ಅದಕ್ಕೆ ಸಿದ್ಧವಾಗಿರಿ

Chanakya Niti: ಆಚಾರ್ಯ ಚಾಣಕ್ಯ ಹೇಳುವಂತೆ ಆಭರಣ, ವೇಷಭೂಷಣದಿಂದ ವ್ಯಕ್ತಿ ಶೋಭಾಯಮಾನವಾಗಿ ಕಾಣಿಸುವುದಿಲ್ಲ. ಬದಲಿಗೆ ಕೈಯಾರೆ ತಾನು ಮಾಡುವ ದಾನದಿಂದ ಆತ ಕಂಗೊಳಿಸುತ್ತಾನೆ.

ಜೀವನವೆಂಬ ಬಹುಮೂಲ್ಯ ನಾಣ್ಯ ಸಮಯ ನೋಡಿ ತನ್ನ ಮುಖವ ಪರಿಚಯಿಸುತ್ತದೆ, ಅದಕ್ಕೆ ಸಿದ್ಧವಾಗಿರಿ
ಜೀವನವೆಂಬ ಬಹುಮೂಲ್ಯ ನಾಣ್ಯ ಸಮಯ ನೋಡಿಕೊಂಡು ತನ್ನ ಮುಖವನ್ನು ಪರಿಚಯಿಸುತ್ತದೆ, ಅದಕ್ಕೆ ಸಿದ್ಧವಾಗಿರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 14, 2021 | 6:42 AM

ಆಚಾರ್ಯ ಚಾಣಕ್ಯನ ಗ್ರಂಥದಲ್ಲಿ ಉಲ್ಲೇಖವಾಗಿರುವ ಈ ಐದು ಸಂಗತಿಗಳನ್ನು ಯಾರು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳುವರೋ ಅವರ ಜೀವನ ಸುಂದರವಾಗಿರುತ್ತದೆ. ಅಂದರೆ ದುಃಖಗಳು ಅವರಿಂದ ದೂರವಾಗಿಯೇ ಉಳಿದಿರುತ್ತವೆ. ಆಚಾರ್ಯ ಚಾಣಕ್ಯ ಮನುಷ್ಯರ ಜೀವನದಲ್ಲಿ ಉಪಯುಕ್ತವಾಗುವ ಎಲ್ಲ ಸಂಗತಿಗಳನ್ನು ತನ್ನ ನೀತಿ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾನೆ. ಆ ನೀತಿಗಳು ಇಂದಿಗೂ, ಎಂದೆಂದಿಗೂ ದಾರಿದೀಪವಾಗಿ ಜನರ ಕೈಹಿಡಿದು ನಡೆಸುತ್ತದೆ.

ಪ್ರಪಂಚದಲ್ಲಿ ಯಾರ ಮನೆಯಲ್ಲಿ ಕಳಂಕ ಇರುವುದಿಲ್ಲ ಹೇಳಿ? ರೋಗಗಳು, ದುಃಖಗಳಿಂದ ಮುಕ್ತರಾದವರು ಯಾರಿದ್ದಾರೆ ಹೇಳಿ? ಸದಾ ಸುಖದಲ್ಲಿಯೇ ಮುಳುಗಿರುವವರು ಯಾರಿದ್ದಾರೆ ಹೇಳಿ? ಈ ಪ್ರಶ್ನೆಗಳಲ್ಲಿಯೇ ಜೀವನದ ಸಾಧನೆಯ ಮಾರ್ಗ, ಜೀವನದ ಸಾರ್ಥಕತೆ ಅಡಕವಾಗಿದೆ. ಇದನ್ನೇ ಆಚಾರ್ಯ ಚಾಣಕ್ಯ ಸರಳವಾಗಿ ಹೇಳಿರುವುದು ಸುಖ ಮತ್ತು ದುಃಖ ಎಂಬುದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಹುಮೂಲ್ಯವಾದ ಆ ನಾಣ್ಯ ಸಮಯ ನೋಡಿಕೊಂಡು ತನ್ನ ಮುಖಗಳನ್ನು ಪರಿಚಯಿಸುತ್ತದೆ.

ಆದರೆ ಮನುಷ್ಯರು ತಮ್ಮ ಜೀವನದಲ್ಲಿ ಎದುರಾಗುವ ಕಷ್ಟಕೋಟಲೆಗಳನ್ನು ತಡೆಯಬಹುದು ಮತ್ತು ದುಃಖಗಳಿಗೆ ಒಂದು ಹಂತದವರೆಗೂ ಕಡಿವಾಣ ಹಾಕಬಹುದು. ಆಚಾರ್ಯ ಚಾಣಕ್ಯನ ತನ್ನ ಗ್ರಂಥದಲ್ಲಿ ಇಂತಹ ಜೀವನದ ಬಗ್ಗೆ ಅನೇಕ ಸುಳಿವುಗಳನ್ನು ನೀಡಿದ್ದಾನೆ. ಅದನ್ನು ಜನ ಅರಿತು ಜೀವನ ನಡೆಸಿದರೆ ಸಂಕಟಗಳನ್ನು ದೂರ ಮಾಡಿಕೊಂಡು ಸಮಚಿತ್ತದಿಂದ, ಸಮಯೋಚಿತವಾಗಿ ಬದುಕಬಹುದು. ಅಂತಹ ಜನರ ಬಳಿ ದುಃಖ ಎಂಬುದು ಅಷ್ಟು ಸುಲಭವಾಗಿ ಸುಳಿಯುವುದಿಲ್ಲ.

1. ಮನುಷ್ಯನ ಜೀವನದಲ್ಲಿ ಖ್ಯಾತಿ ಸಂಪಾದನೆ ಎಂಬುದು ಆತ ತನ್ನ ಜೀವನ ಹೇಗೆ ನಡೆಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ. ಮಾತುಕತೆಯಿಂದ ಆತನ ವರ್ಚಸ್ಸು ಬೆಳೆಯುತ್ತದೆ. ಪ್ರೀತಿ ಪ್ರೇಮ ಹಂಚುವುದರಿಂದ ಜೀವನದಲ್ಲಿ ಮಾನ-ಸಮ್ಮಾನ ವೃದ್ಧಿಸುತ್ತದೆ. ತಾನು ಮಾಡುವ ಊಟದಿಂದ ಆತ ಬಲಾಢ್ಯನಾಗಿ ಕಂಗೊಳಿಸುತ್ತಾನೆ. ಈ ವಿಷಯಗಳನ್ನಾಧರಿಸಿ, ಅದನ್ನು ಸಾಧಿಸಿಕೊಳ್ಳುವತ್ತ ಮನುಷ್ಯ ಮನಸ್ಸು ಮಾಡಿದರೆ ವ್ಯಕ್ತಿಯ ಜೀವನ ಸುಂದರವಾಗಿರುತ್ತದೆ.

2. ಆಚಾರ್ಯ ಏನು ಹೇಳುತ್ತಾನೆ ಅಂದರೆ ಪರೋಪಕಾರ ಮತ್ತು ತಪಸ್ಸಿನಿಂದ ಸಿಗುವ ಪುಣ್ಯ ತಾತ್ಕಾಲಿಕವಾಗಿರುತ್ತದೆ. ಆದರೆ ಅದೇ ನೀವು ಮಾಡುವ ದಾನ ಯಾರಾದರೂ ಅರ್ಹರಿಗೆ, ಸುಪಾತ್ರರಿಗೆ, ಅಗತ್ಯವಿರುವವರಿಗೆ ಸಂದಾಯವಾದರೆ ನೀವು ಮಾಡುವ ಪರೋಪಕಾರದಿಂದ ಕಲ್ಯಾಣವಾಗುತ್ತದೆ. ಇಂತಹ ಪುಣ್ಯ ದೀರ್ಘಕಾಲ ಬದುಕಿಬಾಳಬಲ್ಲದು. ಇದರ ಫಲಶ್ರುತಿಯಾಗಿ ಪುಣ್ಯ ಎಂಬುದು ಬಹು ಕಾಳ ನಿಮ್ಮ ಬಳಿಯೇ ಇರುತ್ತದೆ. ಹಾಗಾಗಿ ದಾನ ಎಂಬುದು ಅರ್ಹರಿಗೆ ಸಲ್ಲಬೇಕು.

3. ಆಚಾರ್ಯ ಚಾಣಕ್ಯ ಹೇಳುವಂತೆ ಯಾರು ಹುಟ್ಟಾ ಅಂಧರಾಗಿರುತ್ತಾರೋ ಅವರು ಅಸಹಾಯಕರಾಗಿ ದೃಷ್ಟಿ ಕಳೆದುಕೊಂಡಿರುತ್ತಾರೆ. ಆದರೆ ಯಾರು ಆಸೆಯ ಅಧೀನರಾಗಿರುತ್ತಾರೋ, ಅಹಂಕಾರಿ ಆಗಿರುತ್ತಾರೋ, ಧನ ಸಂಪತ್ತಿನ ಹಿಂದೆ ಬಿದ್ದಿರುತ್ತಾರೋ ಅಂತಹವರು ಸ್ವಯಂ ಅಂಧರಾಗಿರುತ್ತಾರೆ. ಹಾಗಾಗಿಯೇ ಇಂತಹ ವ್ಯಸನಗಳಿಂದ ದೂರವಾಗಿರಿ, ಜೀವನವನ್ನು ಸುಂದರವಾಗಿಸಿಕೊಳ್ಳಿ.

4. ಆಚಾರ್ಯ ಚಾಣಕ್ಯ ಹೇಳುವಂತೆ ದುರಾಸೆಯ ಮನುಷ್ಯನಿಗೆ ಒಂದು ಕಾಣಿಕೆ ನೀಡಿ ಸುಲಭವಾಗಿ ಸಂತುಷ್ಟಗೊಳಿಸಬಹುದು. ಕಠೋರ ವ್ಯಕ್ತಿಯ ಎದುರು ಕೈಜೋಡಿಸಿ ಸಂತುಷ್ಟಗೊಳಿಸಬಹುದು. ಮೂರ್ಖನನ್ನು ಸನ್ಮಾನಿಸಿ, ಆತನನ್ನು ಸಂತುಷ್ಟಗೊಳಿಸಬಹುದು, ಅದೇ ಒಬ್ಬ ವಿದ್ವಾಂಸನ ಎದುರು ಸತ್ಯವನ್ನಷ್ಟೇ ಹೇಳಿ ಆತನನ್ನು ಸಂತುಷ್ಟವಾಗಿಸಬಹುದು.

5. ಆಚಾರ್ಯ ಚಾಣಕ್ಯ ಹೇಳುವಂತೆ ಆಭರಣ, ವೇಷಭೂಷಣದಿಂದ ವ್ಯಕ್ತಿ ಶೋಭಾಯಮಾನವಾಗಿ ಕಾಣಿಸುವುದಿಲ್ಲ. ಬದಲಿಗೆ ಕೈಯಾರೆ ತಾನು ಮಾಡುವ ದಾನದಿಂದ ಆತ ಕಂಗೊಳಿಸುತ್ತಾನೆ. ಗಂಧ ತೀಡಿಕೊಳ್ಳುವುದರಿಂದ ನಿರ್ಮಲನಾಗಿ ಕಾಣಿಸುವುದಿಲ್ಲ, ಶುದ್ಧ ನೀರಿನಿಂದ ಸ್ನಾನ ಮಾಡಿದರೂ ಆಕರ್ಷಕನಾಗಿ ಕಾಣಿಸುತ್ತಾನೆ. ಎದುರುಗಿನ ವ್ಯಕ್ತಿಗೆ ಭೋಜನ ಹಾಕಿ ಹೊಟ್ಟೆ ತುಂಬಿಸಿದರೆ ಸಾಲದು ಅದಕ್ಕಿಂತ ಹೆಚ್ಚಾಗಿ ಗೌರವ ಆದರದಿಂದ ಆತನನ್ನು ನಡೆಸಿಕೊಂಡಾಗ ಫಲ ಜಾಸ್ತಿಯಿರುತ್ತದೆ. ಆಧ್ಯಾತ್ಮಿಕ ಜ್ಞಾನ-ಧ್ಯಾನದಿಂದ ಮುಕ್ತಿ ಪಥದತ್ತ ಸಾಗಿದರೆ ಜೀವನ ಸರಳ-ಸುಂದರ.

(Chanakya Niti in kannada person who adopt these 5 things of acharya Chanakya misery stay away from his life)

Published On - 6:26 am, Sun, 14 November 21

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ