Chanakya Niti: ಸ್ನೇಹ, ಸಂಬಂಧ ಬೆಳೆಸುವ ಮುನ್ನ ಈ ವಿಚಾರಗಳ ಬಗ್ಗೆ ನಿಗಾ ವಹಿಸುವುದು ಉತ್ತಮ

ಒಬ್ಬ ವ್ಯಕ್ತಿ ನೈತಿಕವಾಗಿ ಎಷ್ಟರ ಮಟ್ಟಿಗೆ ಉತ್ತಮನಾಗಿದ್ದಾನೆ ಎಂದು ಪರೀಕ್ಷಿಸಬಹುದಾದ ಗುಣಗಳ ಬಗ್ಗೆ ಚಾಣಕ್ಯ ಹೇಳಿದ್ದಾರೆ. ಚಾಣಕ್ಯ ಹೇಳುವಂತೆ ಈ ಕೆಳಗಿನ ಗುಣಗಳನ್ನು ಹೊಂದಿರುವ ಜನರನ್ನು ಸುಲಭವಾಗಿ ನಂಬಬಹುದಂತೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

Chanakya Niti: ಸ್ನೇಹ, ಸಂಬಂಧ ಬೆಳೆಸುವ ಮುನ್ನ ಈ ವಿಚಾರಗಳ ಬಗ್ಗೆ ನಿಗಾ ವಹಿಸುವುದು ಉತ್ತಮ
ಚಾಣಕ್ಯ ನೀತಿ
Follow us
TV9 Web
| Updated By: Skanda

Updated on: Sep 07, 2021 | 7:54 AM

ಆಚಾರ್ಯ ಚಾಣಕ್ಯ ಓರ್ವ ಮಹಾನ್ ಅರ್ಥಶಾಸ್ತ್ರಜ್ಞ, ನೀತಿಶಾಸ್ತ್ರಜ್ಞ ಮತ್ತು ದಾರ್ಶನಿಕ. ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಆಚಾರ್ಯ ಚಾಣಕ್ಯರ ರಾಜತಾಂತ್ರಿಕತೆ ಮತ್ತು ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳದವರಿಲ್ಲ. ವಿಷ್ಣು ಗುಪ್ತ ಮತ್ತು ಕೌಟಿಲ್ಯ ಎಂದೂ ಕರೆಯಲ್ಪಡುವ ಚಾಣಕ್ಯರ ನೀತಿ ಮಾತುಗಳು ಇಂದಿಗೂ ಪ್ರಸ್ತುತ. ತನ್ನ ರಾಜತಾಂತ್ರಿಕತೆಯಿಂದಲೇ ಶತ್ರು ಘನಾನಂದನನ್ನು ನಾಶಪಡಿಸುವ ಮೂಲಕ ಚಂದ್ರಗುಪ್ತ ಮೌರ್ಯನಿಗೆ ಸಾಮ್ರಾಜ್ಯ ಸ್ಥಾಪಿಸಲು ನೆರವು ನೀಡಿದ ಆಚಾರ್ಯ ಚಾಣಕ್ಯ ರಾಜತಾಂತ್ರಿಕತೆಯಷ್ಟೇ ಸ್ಪಷ್ಟವಾಗಿ ಜೀವನ ಮೌಲ್ಯಗಳ ಬಗ್ಗೆಯೂ ವಿವರಿಸಿದ್ದಾರೆ. ಜೀವನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ವಿವರಿಸಿರುವ ಅವರ ಸಲಹೆಗಳು ಇಂದಿನ ಕಾಲಕ್ಕೂ ಅನ್ವಯವಾಗುತ್ತವೆ.

ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿಯೊಂದಿಗೆ ಸ್ನೇಹವನ್ನು ಬೆಳೆಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಒಂದು ಸ್ನೇಹ ಉತ್ತಮ ಸಂಬಂಧಕ್ಕೆ ದಾರಿಯಾಗಬೇಕೇ ಹೊರತು ಮೋಸ, ವಂಚನೆಗಲ್ಲ. ಹೀಗಾಗಿ ಮೋಸ ಹೋಗುವುದನ್ನು ತಪ್ಪಿಸಲು ಕೆಲವಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿ ನೈತಿಕವಾಗಿ ಎಷ್ಟರ ಮಟ್ಟಿಗೆ ಉತ್ತಮನಾಗಿದ್ದಾನೆ ಎಂದು ಪರೀಕ್ಷಿಸಬಹುದಾದ ಗುಣಗಳ ಬಗ್ಗೆ ಚಾಣಕ್ಯ ಹೇಳಿದ್ದಾರೆ. ಚಾಣಕ್ಯ ಹೇಳುವಂತೆ ಈ ಕೆಳಗಿನ ಗುಣಗಳನ್ನು ಹೊಂದಿರುವ ಜನರನ್ನು ಸುಲಭವಾಗಿ ನಂಬಬಹುದಂತೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ತ್ಯಜಿಸುವ ಗುಣ ಆಚಾರ್ಯ ಚಾಣಕ್ಯರ ಪ್ರಕಾರ ತನ್ನ ಸಂತೋಷವನ್ನು ಇತರರಿಗಾಗಿ ತ್ಯಾಗ ಮಾಡುವ ವ್ಯಕ್ತಿ ಎಂದಿಗೂ ಮೋಸ ಮಾಡುವುದಿಲ್ಲ. ಅಂತಹ ಜನರು ಸ್ವಾರ್ಥಿಗಳಲ್ಲ. ಅವರನ್ನು ಸುಲಭವಾಗಿ ನಂಬಬಹುದು. ಸ್ವಾರ್ಥಿಗಳು ಯಾವಾಗಲೂ ತಮ್ಮ ಬಗ್ಗೆ ಯೋಚಿಸುವುದಲ್ಲದೇ ಇತರರಿಗೆ ಒಳಿತಾಗುವುದನ್ನು ತಪ್ಪಿಸುವುಕ್ಕೂ ಹೊಂಚು ಹಾಕುತ್ತಾರೆ. ಹೀಗಾಗಿ ಅಂತಹ ಜನರಿಂದ ಯಾವಾಗಲೂ ದೂರವಿದ್ದು ನಿಸ್ವಾರ್ಥಿಗಳ ಒಡನಾಟ ಬೆಳೆಸಿಕೊಳ್ಳುವುದು ಉತ್ತಮ.

ದಾನ ಮನೋಭಾವ ಧರ್ಮಗಳಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಹಣ, ಸಂಪತ್ತು ಇದ್ದ ಕೂಡಲೇ ದಾನ ನೀಡುವುದು ಸಾಧ್ಯವಿಲ್ಲ. ಏಕೆಂದರೆ ದಾನ ಮಾಡುವವರಿಗೆ ಪರರ ಬಗ್ಗೆ ಯೋಚಿಸುವ ಮನೋಭಾವ ಇರಬೇಕಾಗುತ್ತದೆ. ಅಂತಹ ಮನೋಧರ್ಮ ಹೊಂದಿರುವವರು ಹೃದಯದಲ್ಲಿ ಶುದ್ಧವಾಗಿರುತ್ತಾರೆ ಮತ್ತು ಸತ್ಯವುಳ್ಳವರಾಗಿರುತ್ತಾರೆ. ಅವರು ಎಂದಿಗೂ ಮೋಸ ಮಾಡಲಾರರು. ಅಂತಹ ಜನರೊಂದಿಗೆ ಯಾವಾಗಲೂ ಸ್ನೇಹವನ್ನು ಇಟ್ಟುಕೊಳ್ಳಬೇಕು.

ಧರ್ಮದ ಅನುಯಾಯಿ ಚಾಣಕ್ಯರ ಪ್ರಕಾರ ಧರ್ಮದ ಹಾದಿಯಲ್ಲಿ ನಡೆಯುವ ವ್ಯಕ್ತಿಯು ಯಾವಾಗಲೂ ಧರ್ಮದ ಮಾರ್ಗದಲ್ಲೇ ಹಣವನ್ನು ಗಳಿಸುತ್ತಾನೆ. ಅಂತಹ ಜನರನ್ನು ಯಾವಾಗಲೂ ನಂಬಬೇಕು, ಏಕೆಂದರೆ ಅವರು ಎಂದಿಗೂ ಮೋಸ ಮಾಡುವುದಿಲ್ಲ. ಅಂತಹ ಜನರೊಂದಿಗೆ ಸ್ನೇಹಿತರಾಗುವುದು ಉತ್ತಮ.

ಸತ್ಯದ ನಡತೆ ಆಚಾರ್ಯ ಚಾಣಕ್ಯ ಹೇಳುವಂತೆ ಸತ್ಯವನ್ನು ಮಾತನಾಡುವ ಜನರಿಂದ ಯಾರೂ ಎಂದಿಗೂ ಮೋಸ ಹೋಗುವುದಿಲ್ಲ. ಅಂತಹ ಜನರು ತಮ್ಮ ಹಿತಾಸಕ್ತಿಗಾಗಿ ಬೇರೆಯವರನ್ನು ಎಂದಿಗೂ ತೊಂದರೆಗೆ ಒಳಪಡಿಸುವುದಿಲ್ಲ. ಅವರು ಸುಳ್ಳು ಹೇಳುವ ಯೋಚನೆಯನ್ನೂ ಮಾಡುವುದಿಲ್ಲವಾದ್ದರಿಂದ ಎಷ್ಟೇ ಕಷ್ಟವಾದರೂ ಇನ್ನೊಬ್ಬರಿಗೆ ಮೋಸ ಮಾಡಲಾರರು.

ಇದನ್ನೂ ಓದಿ: Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ

Chanakya Niti: ಹಣ ನಿರ್ವಹಣೆಯ 5 ವಿಷಯಗಳನ್ನು ತಿಳಿದವರು ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸುವುದಿಲ್ಲ – ಚಾಣಕ್ಯ ನೀತಿ

(Chanakya Niti Things need to be followed while selecting friends)

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ