AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanteras Astrology: ಶನಿಗ್ರಹ ಸಂಚಾರದ ಫಲ – ಅಕ್ಟೋಬರ್ 23 ರಿಂದ ಧನ್​ ತೇರಾಸ್ ಸಂದರ್ಭದಲ್ಲಿ ಈ 4 ರಾಶಿಗಳ ಜನರಿಗೆ ಅಪಾರ ಧನ ಯೋಗ ಪ್ರಾಪ್ತಿ

Dhanteras -ಧನ್ ತ್ರಯೋದಶಿ: ಇಂತಹ ಪರಿಸ್ಥಿತಿಯಲ್ಲಿ ಶನಿ ಸಂಕ್ರಮಣದಿಂದಾಗಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಅನೇಕ ಜನರು ದೀರ್ಘಕಾಲದ ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಾರೆ.

Dhanteras Astrology: ಶನಿಗ್ರಹ ಸಂಚಾರದ ಫಲ - ಅಕ್ಟೋಬರ್ 23 ರಿಂದ ಧನ್​ ತೇರಾಸ್ ಸಂದರ್ಭದಲ್ಲಿ ಈ 4 ರಾಶಿಗಳ ಜನರಿಗೆ ಅಪಾರ ಧನ ಯೋಗ ಪ್ರಾಪ್ತಿ
ಶನಿಗ್ರಹ ಸಂಚಾರದ ಫಲ - ಅಕ್ಟೋಬರ್ 23 ರಿಂದ ಧನ್​ ತೇರಾಸ್ ಸಂದರ್ಭದಲ್ಲಿ ಈ 4 ರಾಶಿಗಳ ಜನರಿಗೆ ಅಪಾರ ಧನ ಯೋಗ ಇದೆ
TV9 Web
| Edited By: |

Updated on:Oct 17, 2022 | 7:36 PM

Share

ಶನಿ ಗ್ರಹ ಸಂಕ್ರಮಣ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಮಕರ ರಾಶಿಯಲ್ಲಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ, ಅಂದರೆ ಅಕ್ಟೋಬರ್ 23) ದಂದು ವೇಗವಾಗಿ ಚಲಿಸುತ್ತಾನೆ. ಶನಿಗ್ರಹ ಸಂಕ್ರಮಣದಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಕಷ್ಟು ಲಾಭ ನಿರೀಕ್ಷಿಸಬಹುದು.. ಅದೇ ಸಮಯದಲ್ಲಿ ಅನೇಕ ಜನರು ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಈ ದಿನ ಶನಿ ಸಂಕ್ರಮಣದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ಇಲ್ಲಿ ಕಂಡುಹಿಡಿಯೋಣ..

  1. ಕರ್ಕಾಟಕ: ಈ ರಾಶಿಯವರಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಸಾಮರಸ್ಯ ಮತ್ತು ಶಾಂತಿ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಹೊಸ ಡೀಲ್ ಲಭ್ಯವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶವಿದೆ. ನೀವು ಮಾಡುತ್ತಿರುವ ಕೆಲಸವನ್ನು ಶ್ಲಾಘನೆಗಳು ಕೇಳಿಬರಲಿವೆ.
  2. ಮಿಥುನ: ಶನಿ ಗ್ರಹ ಸಂಕ್ರಮಣದಿಂದ ಈ ರಾಶಿಯವರಿಗೆ ವಿಶೇಷ ಸ್ಥಾನಮಾನವನ್ನು ತರಬಹುದು. ಈ ಸಮಯ ಅವರಿಗೆ ಉತ್ತಮವಾಗಿದೆ. ನಿಮಗೆ ಇನ್ನು ಅದೃಷ್ಟದ ಸಂಪೂರ್ಣ ಬೆಂಬಲವಿದೆ. ಆದಾಯದ ಮೂಲಗಳು ಉತ್ಪತ್ತಿಯಾಗುತ್ತವೆ. ಆರ್ಥಿಕ ಲಾಭವಿರುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
  3. ವೃಶ್ಚಿಕ : ಈ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದು. ವೈವಾಹಿಕ ಜೀವನ ಯಶಸ್ವಿಯಾಗಲಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗಲಿದೆ. ಎಲ್ಲಾ ವಿಷಯಗಳಲ್ಲಿ ನೀವು ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಹೊಸ ಎತ್ತರವನ್ನು ತಲುಪಲು ಇದು ನಿಮಗೆ ಸಹಾಯ ಮಾಡುತ್ತದೆ.
  4. ಮೇಷ: ಈ ರಾಶಿಯ ಅಧಿಪತಿಯಾದ ಶನಿಯ ಸಂಚಾರವು ಬಹಳಷ್ಟು ಒಳ್ಳೆಯದನ್ನು ಮಾಡುತ್ತದೆ. ಅವರಲ್ಲಿ ಯಾವುದೇ ನ್ಯಾಯಾಲಯದ ಪ್ರಕರಣವಿದ್ದರೆ ಅದರಿಂದ ಮುಕ್ತಿ ಪಡೆಯಬಹುದು. ಕುಟುಂಬ ಸಮೇತರಾಗಿ ಹೊರ ಹೋಗುವ ಅವಕಾಶವಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಹೊಸ ಉದ್ಯೋಗ ಪಡೆಯುವ ಅವಕಾಶವೂ ಇದೆ.

Published On - 6:06 am, Thu, 13 October 22