ದೇವಸ್ಥಾನಗಳಲ್ಲಿ ಗಂಟೆ ಬಾರಿಸುವುದರ ಧಾರ್ಮಿಕ- ವೈಜ್ಞಾನಿಕ ಮಹತ್ವ ಏನು ಗೊತ್ತಾ?

significance of ringing bells in temples: ದೇವಾಲಯದ ಗಂಟೆಯನ್ನು ಬಾರಿಸಿದರೆ, ಅದರಿಂದ ಹೊರಹೊಮ್ಮುವ ದೊಡ್ಡ ಶಬ್ದವು ದೇಹದ ಏಳು ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ. ಇದು ನಾವು ದೇವಾಲಯದಲ್ಲಿ ಪಡೆದುಕೊಂಡ ಧನಾತ್ಮಕ ಕಂಪನಗಳನ್ನು ನಮ್ಮಲ್ಲಿ ಹಾಗೇ ಇರಿಸುತ್ತದೆ. ದೇಹದ ಏಳು ಚಕ್ರಗಳು ಸಕ್ರಿಯಗೊಳ್ಳುವುದರಿಂದ ಪೂಜೆಯಿಂದ ಪಡೆದುಕೊಂಡ ಭಕ್ತಿಯು ನಮ್ಮಲ್ಲಿಯೇ ಇರುತ್ತದೆ.

ದೇವಸ್ಥಾನಗಳಲ್ಲಿ ಗಂಟೆ ಬಾರಿಸುವುದರ ಧಾರ್ಮಿಕ- ವೈಜ್ಞಾನಿಕ ಮಹತ್ವ ಏನು ಗೊತ್ತಾ?
ದೇವಸ್ಥಾನಗಳಲ್ಲಿ ಗಂಟೆ ಬಾರಿಸುವುದು ಧಾರ್ಮಿಕ- ವೈಜ್ಞಾನಿಕ ಮಹತ್ವ?
Follow us
|

Updated on: Sep 16, 2024 | 5:05 AM

ನೀವು ದೇವಸ್ಥಾನಕ್ಕೆ ಹೋದಾಗಲೆಲ್ಲಾ ಮುಖ್ಯ ದ್ವಾರದಲ್ಲಿ ಗಂಟೆ ಇರುವುದನ್ನು ನೋಡಿರುತ್ತೀರಿ. ಜನರು ಪೂಜೆಗೆಂದು ದೇವಸ್ಥಾನಕ್ಕೆ ಹೋದಾಗಲೆಲ್ಲ ಆ ಗಂಟೆಯನ್ನು ಖಂಡಿತ ಒಮ್ಮೆಯಾದರೂ ಬಾರಿಸುತ್ತಾರೆ. ಸಾಮಾನ್ಯವಾಗಿ ದೇವಸ್ಥಾನವನ್ನು ಪ್ರವೇಶಿಸಿದಾಗ ಗಂಟೆಯನ್ನು ಬಾರಿಸಿ ದೇವಸ್ಥಾನದ ಮುಖ್ಯ ದ್ವಾರವನ್ನು ಪ್ರವೇಶಿಸುತ್ತೇವೆ. ಆದರೆ ದೇವಸ್ಥಾನದಿಂದ ಹೊರಡುವಾಗ ಕೂಡ ಕಡ್ಡಾಯವಾಗಿ ಗಂಟೆ ಬಾರಿಸಬೇಕು ಎನ್ನುವುದು ನಿಮಗೆ ತಿಳಿದಿದೆಯೇ..? ಹಾಗಾದರೆ ಗಂಟೆ ಬಾರಿಸುವುದರ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಲೋಣ.

ದೇವರ ಗಮನ ಆಕರ್ಷಿಸಲು: ದೇವಾಲಯದ ಗಂಟೆಯನ್ನು ಬಾರಿಸುವುದು ದೇವರ ಪ್ರವೇಶಕ್ಕೆ ಅನುಮತಿಯ ಕೇಳಿಕೊಳ್ಳುವುದರ ಸಂಕೇತವಾಗಿದೆ. ದೇವಸ್ಥಾನದಲ್ಲಿ ನಾವು ಗಂಟೆಯನ್ನು ಬಾರಿಸಿದಾಕ್ಷಣ ಆ ಗಂಟೆಯ ಸದ್ದು ನಮ್ಮ ಮನಸ್ಸು ಮತ್ತು ಮೆದುಳಿನ ಎಲ್ಲಾ ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ. ಅದೇ ಸಮಯದಲ್ಲಿ, ಎಲ್ಲಾ ದೇವರುಗಳು ನಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.

ನಕಾರಾತ್ಮಕ ಶಕ್ತಿಯಿಂದ ಮುಕ್ತಿ: ದೇವಾಲಯದಲ್ಲಿ ಗಂಟೆಯನ್ನು ಬಾರಿಸಿದರೆ ಅದು ನಿಮ್ಮ ಸುತ್ತ ಇರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಹಾಗೂ ನಿಮ್ಮ ಸುತ್ತ ಸಕಾರಾತ್ಮಕ ಅಥವಾ ಧನಾತ್ಮಕ ಶಕ್ತಿಯ ಕಂಪನವನ್ನು ಹರಡುತ್ತದೆ. ಹೆಚ್ಚಿನವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಧನಾತ್ಮಕ ಅನುಭವವನ್ನು ಪಡೆದುಕೊಂಡಿದ್ದೇವೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ದೇವಸ್ಥಾನದಲ್ಲಿ ಅವರಿಗೆ ಧನಾತ್ಮಕ ಶಕ್ತಿಯನ್ನು ನೀಡಿದ ಅಂಶಗಳಲ್ಲಿ ಗಂಟೆಯೂ ಒಂದು ಎಂಬುದನ್ನು ಗಮನಿಸಿ.

ಇದನ್ನೂ ಓದಿ: Significance of Navratri – ದಸರಾ 2024 ಶಾರದೀಯ ನವರಾತ್ರಿ 2024 ಪ್ರಾರಂಭ ದಿನಾಂಕ, ಕಲಶ ಸ್ಥಾಪನಾ ಮುಹೂರ್ತದ ವಿವರ ತಿಳಿಯಿರಿ

ದೇವರನ್ನು ಸಂತುಷ್ಟಗೊಳಿಸಲು: ದೇವಾಲಯದ ಗಂಟೆಯನ್ನು ಬಾರಿಸುವ ಮೂಲಕ ದೇವರನ್ನು ಜಾಗೃತಗೊಳಿಸಬಹುದು. ಗಂಟೆ ಬಾರಿಸುವ ಮೂಲಕ ದೇವತೆಗಳು ಸಂತುಷ್ಟರಾಗುತ್ತಾರೆ. ಈ ಕಾರಣದಿಂದ ನಾವು ದೇವಸ್ಥಾನವನ್ನು ಪ್ರವೇಶಿಸಿದಾಗ ಮತ್ತು ದೇವಸ್ಥಾನದಿಂದ ಹಿಂದಿರುಗಿದಾಗ ಗಂಟೆಯನ್ನು ಬಾರಿಸಬೇಕು. ದೇವರನ್ನು ಜಾಗೃತಗೊಳಿಸುವ ಮೂಲಕ ನಾವು ನಮ್ಮ ಇಚ್ಛೆಯನ್ನು ದೇವರ ಬಳಿ ಹೇಳಿಕೊಳ್ಳುವುದರಿಂದ ಅವುಗಳೆಲ್ಲಾ ಶೀಘ್ರದಲ್ಲೇ ದೇವರಿಗೆ ತಲುಪುತ್ತದೆ.

ಏಳು ಚಕ್ರಗಳು ಸಕ್ರಿಯಗೊಳ್ಳುವುದು: ದೇವಾಲಯದ ಗಂಟೆಯನ್ನು ಬಾರಿಸಿದರೆ, ಅದರಿಂದ ಹೊರಹೊಮ್ಮುವ ದೊಡ್ಡ ಶಬ್ದವು ದೇಹದ ಏಳು ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ. ಇದು ನಾವು ದೇವಾಲಯದಲ್ಲಿ ಪಡೆದುಕೊಂಡ ಧನಾತ್ಮಕ ಕಂಪನಗಳನ್ನು ನಮ್ಮಲ್ಲಿ ಹಾಗೇ ಇರಿಸುತ್ತದೆ. ದೇಹದ ಏಳು ಚಕ್ರಗಳು ಸಕ್ರಿಯಗೊಳ್ಳುವುದರಿಂದ ಪೂಜೆಯಿಂದ ಪಡೆದುಕೊಂಡ ಭಕ್ತಿಯು ನಮ್ಮಲ್ಲಿಯೇ ಇರುತ್ತದೆ.

ದೇಹ ಮತ್ತು ಮನಸ್ಸು ಶುದ್ಧವಾಗುವುದು: ದೇವಸ್ಥಾನ ಪ್ರವೇಶಿಸುವ ಮುನ್ನ ಗಂಟೆ ಬಾರಿಸಿದರೆ ದೇಹ ಮತ್ತು ಮನಸ್ಸು ಶುದ್ಧಿಯಾಗುತ್ತದೆ. ನೀವು ದೇವಸ್ಥಾನದಿಂದ ಹೊರಡುವ ಮೊದಲು ಗಂಟೆ ಬಾರಿಸಿದರೆ, ನಿಮ್ಮ ಸಂದೇಶವು ನೇರವಾಗಿ ದೇವರಿಗೆ ತಲುಪುತ್ತದೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಒಂದು ಪ್ರಮುಖ ಆಚರಣೆ: ಧಾರ್ಮಿಕ ಆಚರಣೆಯ ವೇಳೆ ಸಾಕಷ್ಟು ನಾದಗಳನ್ನು ಬಾರಿಸುತ್ತೇವೆ. ಶಂಖ, ತಾಳ, ಘಂಟೆ, ವಾದ್ಯ, ಮದ್ದಳೆ ಮುಂತಾದ ಉಪಕರಣಗಳಿಂದ ನಾದವನ್ನು ಗೈಯುತ್ತಾರೆ. ಆದರೆ ಇವುಗಳನ್ನು ನಿತ್ಯವೂ ಬಾರಿಸುವುದಿಲ್ಲ. ಕೇವಲ ಘಂಟೆಯನ್ನು ಮಾತ್ರ ಬಾರಿಸುತ್ತೇವೆ. ಘಂಟೆಯ ನಾದದಿಂದ ಮನಸ್ಸು ಪ್ರಶಾಂತಗೊಳ್ಳುವುದು. ಆರಾಧಕರ ಮತ್ತು ಭಕ್ತರ ಮನಸ್ಸಿನಲ್ಲಿ ದೇವರ ಮೇಲೆ ಭಕ್ತಿ, ಉತ್ಸಾಹ, ಏಕಾಗ್ರತೆ ಮತ್ತು ಆಂತರಿಕ ಶಾಂತಿ ಮತ್ತು ನಿರ್ಮಲ ಮನಸ್ಸನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿ:  Vishwakarma puja 2024 – ವಿಶ್ವಕರ್ಮ ಜಯಂತಿಯನ್ನು ಸೂರ್ಯ ಸಂಕ್ರಾಂತಿ ದಿನವೇ ಆಚರಿಸಲಾಗುತ್ತದೆ ಏಕೆ? ಪೂಜಾ ವಿಧಾನ, ಮಹತ್ವದ ವಿವರ ಇಲ್ಲಿದೆ

ದೇವಸ್ಥಾನದ ಘಂಟೆಯ ಹಿಂದಿನ ವೈಜ್ಞಾನಿಕ ಹಿನ್ನೆಲೆ: ಪುರಾತನ ಕಾಲದ ದೇವಸ್ಥಾನಗಳಲ್ಲಿ ಹೆಚ್ಚಿನ ದೇವಾಲಯಗಳು ಪ್ರವೇಶ ದ್ವಾರದಲ್ಲಿ ದೊಡ್ಡ ಘಂಟೆಯನ್ನು ಹೊಂದಿರುತ್ತದೆ. ದೇವಾಲಯವನ್ನು ಪ್ರವೇಶಿಸುವಾಗ ಮೊದಲು ದೊಡ್ಡ ಘಂಟೆಯನ್ನು ಬಾರಿಸುತ್ತಾರೆ. ಅದು ದೇವಸ್ಥಾನದ ಪದ್ಧತಿ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ದೇವಾಲಯದ ದೊಡ್ಡ ಘಂಟೆಗಳು ಸಾಮಾನ್ಯವಾಗಿ ಕ್ಯಾಡ್ಮಿಯಮ್, ಸೀಸ, ತಾಮ್ರ, ಸತು, ನಿಕಲ್, ಕ್ರೋಮಿಯಂ ಮತ್ತು ಮ್ಯಾಂಗನೀಸ್ಗಳನ್ನು ಒಳಗೊಂಡಿರುತ್ತದೆ. ಈ ಲೋಹಗಳ ಮಿಶ್ರಣದಲ್ಲಿ ತಯಾರಾದ ಘಂಟೆಗಳನ್ನು ಬಾರಿಸಿದಾಗ ನಮ್ಮ ಎಡ ಮತ್ತು ಬಲ ಮೆದುಳಿನ ಮೇಲೆ ಏಕತೆಯನ್ನು ಉಂಟುಮಾಡುತ್ತವೆ.

ದೇವಾಲಯದಲ್ಲಿ ಘಂಟೆಗಳು ಇರಬೇಕು: ದೇವಾಲಯದಲ್ಲಿ ನಾವು ಬಾರಿಸುವ ಘಂಟೆಯ ನಾದವು ತೀಕ್ಷ್ಣವಾದ ಮತ್ತು ಶಾಶ್ವತವಾದ ಉತ್ಪಾದನೆಯನ್ನು ಮಾಡುತ್ತದೆ. ಒಮ್ಮೆ ಘಂಟೆಯಿಂದ ಹೊರಡುವ ನಾದವು ಕನಿಷ್ಠ ಏಳು ಸೆಕೆಂಡ್ಗಳ ಕಾಲ ಇರುತ್ತದೆ. ನಮ್ಮ ದೇಹದಲ್ಲಿಯೂ ಏಳು ರಂಧ್ರಗಳು ಮತ್ತು ಚಕ್ರಗಳಿರುತ್ತವೆ. ಘಂಟೆಯ ನಾದವು ಅವುಗಳನ್ನು ಪ್ರವೇಶಿಸಿ ಸ್ಪರ್ಶಿಸುತ್ತವೆ. ನಮ್ಮ ಮೆದುಳಿನ ಮೇಲೆ ಗಮನಾರ್ಹ ಪ್ರಭಾವ ಬೀರುವುದರ ಜೊತೆಗೆ ಮನಸ್ಸಿಗೆ ನಿರಾಳತೆಯನ್ನು ನೀಡುವುದು. ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಘಂಟೆಯನ್ನು ಬಾರಿಸಿದರೆ ನಿಮ್ಮ ಮನಸ್ಸು ಮತ್ತು ಮಿದುಳು ಜಾಗ್ರತವಾಗುತ್ತದೆ. ಏಕಾಗ್ರತೆಯಿಂದ ದೇವರಲ್ಲಿ ಮನಸ್ಸನ್ನು ಕೆಂದ್ರೀಕರಿಸಲು ಸಹಾಯ ಮಾಡುವುದು. ಇವು ದೇವಸ್ಥಾನದಲ್ಲಿ ಅಳವಡಿಸುವ ಘಂಟೆಗಳ ಹಿಂದೆ ಇರುವ ನಿಜವಾದ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು ಎಂದು ಧಾರ್ಮಿಕ ಪಾಠಗಳು ತಿಳಿಸುತ್ತವೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)