AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesha Chaturthi 2022: ಹುಬ್ಬಳ್ಳಿಯ ಸರಾಫಗಟ್ಟಿಯಲ್ಲಿ ವಿರಾಜಮಾನನಾಗಿದ್ದಾನೆ ಬೆಳ್ಳಿ ಗಣೇಶ; ಈ ಭಾರಿ ವಿಶೇಷ ಶ್ರೀ ಸಿದ್ದಾರೂಢ ಮಹಾತ್ಮೆ ನಾಟಕ

ಹುಬ್ಬಳ್ಳಿಯ ಸರಾಫ್​ಗಟ್ಟಿಯಲ್ಲಿ ಕಳೆದ 15 ವರ್ಷಗಳಿಂದ ಬೆಳ್ಳಿ ವಿಘ್ನನಿವಾರಕನನ್ನು ಪ್ರತಿಷ್ಠಾಪಿಸಲಾಗುತ್ತಿದೆ.

Ganesha Chaturthi 2022: ಹುಬ್ಬಳ್ಳಿಯ ಸರಾಫಗಟ್ಟಿಯಲ್ಲಿ ವಿರಾಜಮಾನನಾಗಿದ್ದಾನೆ ಬೆಳ್ಳಿ ಗಣೇಶ; ಈ ಭಾರಿ ವಿಶೇಷ ಶ್ರೀ ಸಿದ್ದಾರೂಢ ಮಹಾತ್ಮೆ ನಾಟಕ
ಹುಬ್ಬಳ್ಳಿಯ ಸರಾಫಗಟ್ಟಿಯ ಬೆಳ್ಳಿ ಗಣೇಶ
TV9 Web
| Edited By: |

Updated on:Aug 31, 2022 | 6:46 PM

Share

ಹುಬ್ಬಳ್ಳಿಯ ಗಣೇಶೋತ್ಸವ ನಾಡಿನೆಲ್ಲಡೆ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಹುಬ್ಬಳ್ಳಿಯ ಗಣೇಶೋತ್ಸವ ನೋಡಲು ನಾಡಿನ ನಾನಾ ಭಾಗದಿಂದ ಜನರು ಬರುತ್ತಾರೆ. ಅಷ್ಟೇನು ವಿಶೇಷವೆಂದರೆ ಇಲ್ಲಿನ ಗಣೇಶನ ಮೆರವಣಿಗೆ ಮತ್ತು ಹುಬ್ಬಳ್ಳಿಯ ಹೃದಯ ಭಾಗವಾದ ಮರುಕಟ್ಟೆ ಪ್ರದೇಶಗಳಲ್ಲು ಕೂಡಿಸುವಂತಂಹ ಗಣೇಶಗಳು ಮತ್ತು ಅಲ್ಲಿ ಏರ್ಪಡಿಸುವ ಪೌರಾಣಿಕ, ಐತಿಹಾಸಿಕ ಶೋಗಳು.

ಮಾರುಕಟ್ಟೆಯ ಭಾಗವಾದಂತಹ ಮರಾಟಗಲ್ಲಿ, ಮೂರುಸಾವಿರ ಮಠ, ದುರ್ಗದಬೈಲ್​​​, ಸರಾಫ್​ಗಟ್ಟಿ ಮತ್ತು ಶೀಲವಂತರ ಓಣಿ. ಇಲ್ಲಿ ಹುಬ್ಬಳ್ಳಿಯ ಅತಿ ಎತ್ತರವಾದ ಗಣಪತಿಗಳನ್ನು ಕೂಡಿಸುವುದರೊಂದಿಗೆ, ಸರಾಫ್​ಗಟ್ಟಿ, ಶೀಲಿವಂತರ ಓಣಿಯಂತಹ ಓಣಿಗಳಲ್ಲಿ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಹೀಗೆ ಹುಬ್ಬಳ್ಳಿಯ ಅಕ್ಕಸಾಲಿಗರೇ ಹೆಚ್ಚಾಗಿ ಇರುವ ಓಣಿಯಾದ ಸರಾಫ್​​ಗಟ್ಟಿಯಲ್ಲಿ ಪ್ರತಿವರ್ಷ ಬೆಳ್ಳಿ ಗಣೇಶನನ್ನು ಪ್ರತಿಷ್ಠಪಾತಿಸುತ್ತಾರೆ.

ಹಿನ್ನೆಲೆ ಹೀಗಿದೆ

ಸರಾಫಗಟ್ಟಿ ಗಣೇಶೋತ್ಸವ ಮಂಡಳಿಯು 75 ವರ್ಷಗಳ ಹಿಂದೆ ಅಂದರೆ 1947ರಿಂದ ಗಣೇಶನನ್ನು ಕೂಡಿಸಲು ಪ್ರಾರಂಭಿಸಿದರು. 1947ರಿಂದ ಮಣ್ಣಿನಿಂದ ತಯಾರಿಸಿದ ಗಣೇಶನನ್ನು ಪ್ರತಿಷ್ಠಾಪಿಸುತ್ತಾ ಬಂದಿದೆ. ಮಂಡಳಿಯು ಕಳೆದ 15 ವರ್ಷಗಳ ಹಿಂದೆ ದೇಶದಲ್ಲೇ ಮೊದಲ ಬಾರಿಗೆ 121 ಕೇಜಿಯ, 6 ಅಡಿ ಎತ್ತರದ ಗಣೇಶ ಮತ್ತು 2.5 ಅಡಿ ಎತ್ತರದ ಬೆಳ್ಳಿ ಮೂಷಿಕನನ್ನು ಪ್ರತಿಷ್ಠಾಪಿಸಲಾಯಿತು.

ಈ ಗಣೇಶನನ್ನು ತಯಾರಿಸಲು ಕೇವಲ ಮೂರು ತಿಂಗಳು ಸಮಯ ತೆಗೆದುಕೊಳ್ಳಲಾಯಿತು. ಈ ಮಂಡಳಿಯಿಂದ 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಯೋಧರಿಗಾಗಿ 51,000 ರೂ ಧನ ಸಹಾಯ ಮಾಡಲಾಗಿದೆ. ಪ್ರತಿ ವರ್ಷ ಮಂಡಳಿ ಬಡ ಮಕ್ಕಳ್ಳಿಗೆ ಪಠ್ಯ-ಪುಸ್ತಕ ಮತ್ತು ಮಕ್ಕಳಿಗೆ ಅವಶ್ಯಕವಾದಂತಹ ವಸ್ತುಗಳನ್ನು ನೀಡುತ್ತಿದೆ.

ಪ್ರತಿವರ್ಷ ಗಣೇಶ ಪ್ರತಿಷ್ಠಾಪನೆಯಾದ ನಂತರ ಅದೇ ಪೆಂಡಾಲ್​ನಲ್ಲಿ ಗೊಂಬೆಗಳ ಮುಖಾಂತರ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸುತ್ತಿದ್ದರು. ಆದರೆ ಈ ಬಾರಿ ಕಲಾವಿದರನ್ನು ಕರೆಸಿ ಅವರಿಂದ ನಾಟಕವನ್ನು ಮಾಡಿಸುತ್ತಿದ್ದಾರೆ. ಈ ಬಾರಿ ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢರ ಮಹಾತ್ಮೆ ಎಂಬ ನಾಟವನ್ನು ಮಾಡಿಸುತ್ತಿದ್ದಾರೆ.

ಗಣೇಶನ ವಿಶೇಷತೆ ಅಂದರೆ ಗಣೇಶನನ್ನು ಪ್ರತಿಷ್ಠಾಪಿಸಿದ ನಂತರ ಗಣೇಶನ ಎದುರಿಗೆ ಮೂಷಿಕನನ್ನು ಪ್ರತಿಷ್ಠಾಪಿಸಲಾಗುತ್ತದೆ. ಭಕ್ತಾದಿಗಳು ತಮ್ಮ ಬೇಡಿಕೆಗಳನ್ನು ಮೂಷಿಕನ ಕಿವಿಯಲ್ಲಿ ಹೇಳಿದರೆ ಬೇಡಿಕೆಗಳು ಇಡೇರುತ್ತವೆ ಎನ್ನುವ ಪ್ರತೀತಿ ಇದೆ. ಗಣೇಶನಿಗೆ ಬಂಗಾರದ ಕೀಲವನ್ನು ತೊಡಿಸುತ್ತಾರೆ. ಇಲ್ಲಿ ಪ್ರಸಾದ ವ್ಯವಸ್ಥೆ 6ನೇ ದಿವಸದ ನಂತರ ಪ್ರಾರಂಭವಾಗುತ್ತದೆ.

Published On - 6:46 pm, Wed, 31 August 22