ಮಹಾಲಯ ಅಮಾವಾಸ್ಯೆಯ ಮಹತ್ವವೇನು? ಪಿತೃಪಕ್ಷದ ಕೊನೆಯ ದಿನದ ಆಚರಣೆ ಹೇಗೆ ಮಾಡಬೇಕು?
ಪಿತೃ ಪಕ್ಷದಲ್ಲಿನ ಕೊನೆಯ ಶ್ರಾದ್ಧ ದಿನವನ್ನು ಸರ್ವಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯೆಂದು ಕೇಳಲಾಗುತ್ತೆ. ಪಿತೃ ಪಕ್ಷದ ಕೊನೆಯ ಶ್ರಾದ್ಧವು ಅತ್ಯಂತ ಮಹತ್ವದ್ದಾಗಿದೆ.
ಕಳೆದ ಹದಿನೈದು ದಿನಗಳ ಪಿತೃಪಕ್ಷದ ಪಿತೃಕಾರ್ಯಕ್ಕೆ ಇಂದು ಕೊನೆಯ ದಿನ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಬರುವುದರಿಂದ ಈ ದಿನವನ್ನು ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಈ ದಿನ ತಮ್ಮ ಪೂರ್ವಜರಿಗೆ ಎಲ್ಲರೂ ವಿದಾಯವನ್ನು ಸಲ್ಲಿಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಪಿತೃ ಪಕ್ಷದ ಸಮಯದಲ್ಲಿ ಭೂಲೋಕಕ್ಕೆ ಬಂದ ಪೂರ್ವಜರು ಮಹಾಲಯ ಅಮಾವಾಸ್ಯೆಯಂದು ಮರಳಿ ಪರಲೋಕಕ್ಕೆ ತೆರಳುತ್ತಾರೆ. ಹೀಗಾಗಿ ಕೊನೆ ದಿನವಾದ ಮಹಾಲಯ ಅಮವಾಸ್ಯೆಯೆಂದು ಪಿತೃಗಳನ್ನು ಪರಲೋಕಕ್ಕೆ ಗೌರವದಿಂದ ಕಳುಹಿಸಿಕೊಡಬೇಕು.
ಶ್ರಾದ್ಧ ಕರ್ಮ ಮತ್ತು ತರ್ಪಣ ಪಿತೃ ಪಕ್ಷದಲ್ಲಿನ ಕೊನೆಯ ಶ್ರಾದ್ಧ ದಿನವನ್ನು ಸರ್ವಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯೆಂದು ಕೇಳಲಾಗುತ್ತೆ. ಪಿತೃ ಪಕ್ಷದ ಕೊನೆಯ ಶ್ರಾದ್ಧವು ಅತ್ಯಂತ ಮಹತ್ವದ್ದಾಗಿದೆ. ಇನ್ನು ಈ ದಿನದ ಮತ್ತೊಂದು ವಿಶೇಷವೆಂದರೆ ನಮ್ಮ ಪಿತೃಗಳ ಮರಣ ದಿನಾಂಕ ನೆನಪಿಲ್ಲದಿದ್ದಾಗ ನಾವು ಪಿತೃ ಪಕ್ಷದ ಕೊನೆಯ ದಿನವಾದ ಇಂದು ಶ್ರಾದ್ಧವನ್ನು ಮತ್ತು ದಾನವನ್ನು ಅರ್ಪಿಸಬಹುದು.
ಮಹಾಲಯ ಅಮಾವಾಸ್ಯೆಯ ಮಹತ್ವವೇನು? ಧರ್ಮಗ್ರಂಥಗಳಲ್ಲಿ ಮಹಾಲಯ ಅಮಾವಾಸ್ಯೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪಿತೃಗಳ ಮರಣ ದಿನಾಂಕ ನೆನಪಿಲ್ಲದಿದ್ದರೆ ಎಲ್ಲಾ ಪಿತೃಗಳಿಗೂ ನಾವು ಈ ದಿನ ಗೌರವವನ್ನು ಸಲ್ಲಿಸಬಹುದು. ದಾನ ಮಾಡಲು ಕೂಡ ಈ ದಿನ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪಿತೃಗಳು ಮಹಾಲಯ ಅಮಾವಾಸ್ಯೆಯಂದು ತಮ್ಮ ಕುಟುಂಬ ವರ್ಗದವರನ್ನು ಕೊನೆಯದಾಗಿ ಆಶೀರ್ವದಿಸಿ ಹೋಗುತ್ತಾರೆ. ಹಾಗೂ ನಾವು ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವ ಪಿತೃ ಪಕ್ಷದ ನಂತರ ಅಂದರೆ ಮಹಾಲಯ ಅಮಾವಾಸ್ಯೆಯ ನಂತರ ನಮ್ಮ ಕುಟುಂಬದಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಮತ್ತು ವಾಸ್ತು ದೋಷವಿದ್ದರೆ ಅದು ಕೂಡ ದೂರವಾಗಿ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆಯಿದೆ.
ಪಿತೃ ವಿಸರ್ಜನಾ ವಿಧಾನ ಪಿತೃ ಅಮಾವಾಸ್ಯೆಯ ದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಜಲದಲ್ಲಿ ಸ್ನಾನ ಮಾಡಿ ಅಥವಾ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬೇಕು. ನಂತರ ಶುದ್ಧವಾದ ಬಟ್ಟೆಯನ್ನು ಧರಿಸಿ. ಮನೆಯಲ್ಲಿ ಸಾತ್ವಿಕ ಆಹಾರವನ್ನು ತಯಾರಿಸಿ, ಕುಟುಂಬದ ಸದಸ್ಯರೆಲ್ಲರೂ ಸಾತ್ವಿಕ ಆಹಾರವನ್ನು ಸೇವಿಸಬೇಕು. ಸಂಜೆ ಸಮಯದಲ್ಲಿ ಮನೆಯ ಹೊರಗೆ ನಾಲ್ಕು ಮಣ್ಣಿನ ದೀಪವನ್ನು ಹಚ್ಚಬೇಕು. ಈ ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ, ಹತ್ತಿಯಿಂದ ದೀಪದ ಬತ್ತಿಯನ್ನು ತಯಾರಿಸಿ ಅದನ್ನು ಮನೆಯಿಂದ ಹೊರಗೆ ಹಚ್ಚಿಡಬೇಕು. ನಂತರ ಮನೆಯಲ್ಲಿ ಕುಳಿತು ಪಿತೃಗಳಿಗೆ ಪಿತೃ ಪಕ್ಷ ಮುಗಿದಿದೆ ಎಂದು ಪ್ರಾರ್ಥಿಸಬೇಕು.
ಕಾಗೆ ಮತ್ತು ಹಸುಗಳಿಗೆ ನೀಡಿ ಮಹಾಲಯ ಅಮಾವಾಸ್ಯೆಯ ದಿನದಂದು ಮನೆಯ ಮಹಿಳೆಯರು ಮುಂಜಾನೆ ಬೇಗ ಎದ್ದು ಮಡಿಯಿಂದ ಆಹಾರವನ್ನು ತಯಾರಿಸಬೇಕು. ನಂತರ ಮನೆಗೆ ಬ್ರಾಹ್ಮಣರನ್ನು ಕರೆಸಿ ಪೂರ್ವಜರಿಗೆ ಅಂತಿಮ ನಮಸ್ಕಾರವನ್ನು ಸಲ್ಲಿಸಬೇಕು. ಪೂಜೆ ಮುಗಿದ ನಂತರ ಬ್ರಾಹ್ಮಣರಿಗೆ ದಾನವನ್ನು ನೀಡಬೇಕು. ಬ್ರಾಹ್ಮಣರಿಗೆ ದಾನವನ್ನು ನೀಡಿದ ನಂತರ ಕಾಗೆಗಳಿಗೆ ಮತ್ತು ಹಸುಗಳಿಗೆ ತಮ್ಮ ಕೈಯಾರೆ ಆಹಾರವನ್ನು ನೀಡಬೇಕು. ಬಳಿಕ ಪಿತೃಗಳನ್ನು ಪ್ರಾರ್ಥಿಸಿ, ತಾವು ತಿಳಿದು ಅಥವಾ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯನ್ನು ಕೇಳಬೇಕು. ಹೀಗೆ ಮಾಡುವ ಮೂಲಕ ಮಹಾಲಯ ಅಮಾವಾಸ್ಯೆ ಎಂದರೆ ಪಿತೃ ಪಕ್ಷದ ಕೊನೆಯ ದಿನ ಮುಗಿದು ಹೋಗುತ್ತದೆ.
ಇದನ್ನೂ ಓದಿ: ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು