AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು

Ashadha Amavasya 2021: ಈ ದಿನದ ಆರಾಧನೆಯಿಂದ ಜೀವನದಲ್ಲಿ ಕಷ್ಟ-ದುಃಖಗಳೆಲ್ಲ ತೊರೆದು ಹೋಗಿ ಸುಖ- ಶಾಂತಿ, ನೆಮ್ಮದಿಯು ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 09, 2021 | 10:45 AM

Share

ಈ ಬಾರಿಯ ಅಶಾಢ ಅಮವಾಸ್ಯೆಯನ್ನು ಇಂದು ( ಜುಲೈ 9) ಆಚರಿಸಲಾಗುತ್ತದೆ. ಇಂದು ಶುಭ ಶುಕ್ರವಾರವೂ ಹೌದು. ಹಿಂದೂ ನಂಬಿಕೆಯ ಪ್ರಕಾರ ಈ ದಿನ ಬಹಳ ವಿಶೇಷವಾದದ್ದು. ಪೂರ್ವಜರು ಅಥವಾ ಹಿರಿಯರ ದಿನವನ್ನು ನೆನೆಯುತ್ತ ಇಂದು ಅರ್ಪಣೆಗಳನ್ನು ಬಿಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಅವರನ್ನು ನೆನೆಯುವ ದಿನ. ಇದಲ್ಲದೇ ಈ ದಿನದ ಆರಾಧನೆಯಿಂದ ಜೀವನದಲ್ಲಿ ಕಷ್ಟ-ದುಃಖಗಳೆಲ್ಲ ತೊರೆದು ಹೋಗಿ ಸುಖ- ಶಾಂತಿ, ನೆಮ್ಮದಿಯು ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜತೆಗೆ ಜಾತಕದ ಪ್ರಕಾರ ಪಿತೃ ದೋಷ, ಗ್ರಹ ದೋಷ ಮತ್ತು ಶನಿ ದೋಷಗಳಿಂದ ಮುಕ್ತರಾಗುವಂತೆ ಉಪವಾಸ ಕೈಗೊಂಡು ಆಚರಿಸುವ ಪದ್ಧತಿ ಮೊದಲಿನಿಂದಲೂ ಬಂದಿದೆ.

ಆಶಾಢ ಅಮವಾಸ್ಯೆ 2021: ದಿನಾಂಕ ಮತ್ತು ಶುಭ ಮುಹೂರ್ತ ದಿನಾಂಕ: 2021 ಜುಲೈ 9, ಶುಕ್ರವಾರ ಶುಭ ಮುಹೂರ್ತ ಪ್ರಾರಂಭ: ಜುಲೈ 9 ಬೆಳಿಗ್ಗೆ 05:16 ಶುಭ ಮುಹೂರ್ತ ಮುಕ್ತಾಯ: ಜುಲೈ 10 ಬೆಳಗ್ಗೆ 06:46

ಆಶಾಢ ಅಮವಾಸ್ಯೆಯ ಮಹತ್ವ ಗರುಡ ಪುರಾಣದ ಪ್ರಕಾರ ಆಶಾಢ ಅಮವಾಸ್ಯೆಯಂದು ಉಪವಾಸ ಕೈಗೊಳ್ಳುತ್ತಾರೆ. ಜತೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಎಲ್ಲಾ ರೀತಿಯ ಪಾಪಗಳಿಂದ ಮತ್ತು ದೋಷಗಳಿಂದ ಮುಕ್ತರಾಗಲೆಂದು ದಾನ-ಧರ್ಮಗಳಲ್ಲಿ ತೊಡಗುತ್ತಾರೆ. ಈ ದಿನ ಉಪವಾಸ ಕೈಗೊಳ್ಳುವುದರಿಂದ ಪೂರ್ವಜರಿಗೆ ಮತ್ತು ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

ಪೂಜಾ ವಿಧಿ-ವಿಧಾನ *ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರ ವಸ್ತ್ರವನ್ನು ಧರಿಸುವುದು *ಆಶಾಢ ಅಮವಾಸ್ಯೆ ದಿನ ಪ್ರಯುಕ್ತ ಉಪವಾಸ ಕೈಗೊಳ್ಳುವುದು *ಮಂತ್ರಗಳನ್ನು ಪಠಿಸುವುದು *ಪೂರ್ವಜರಿಗೆ ಪೂಜೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ದಾನ-ಧರ್ಮ ಮಾಡುವುದು *ಮುಖ್ಯವಾಗಿ ಹನುಮ ಮತ್ತು ಶನಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ *ಹಿಂದೂ ನಂಬಿಕೆಯ ಪ್ರಕಾರ ಪಂಚ ಭೂತಗಳಿಗೆ (ಗಾಳಿ, ನೀರು, ಬೆಂಕಿ, ಆಕಾಶ ಮತ್ತು ಭೂಮಿ) ಪ್ರಾರ್ಥನೆ ಮಾಡುತ್ತಾರೆ. ಮತ್ತು ವಿಶೇಷ ಪೂಜೆ ಕೈಗೊಳ್ಳುತ್ತಾರೆ

ಇದನ್ನೂ ಓದಿ:

Strawberry Full Moon 2021: ಇಂದು ಸ್ಟ್ರಾಬೆರಿ ಮೂನ್​ ಗೋಚರಿಸುತ್ತಿದೆ! ಭಾರತದಲ್ಲಿ ಈ ವಿಸ್ಮಯವನ್ನು ನೋಡಬಹುದೇ?

Kara Hunnime: ಕಾರ ಹುಣ್ಣಿಮೆ ಆಚರಣೆ ವೇಳೆ ಅವಘಡ, ಎತ್ತು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್