AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Shastra: ಮನೆಯಲ್ಲಿ ಗಿಳಿ ಸಾಕುವುದು ಅಥವಾ ಅದರ ಚಿತ್ರ ಇಡುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಮನೆಯಲ್ಲಿ ಗಿಳಿ ಸಾಕುವ ಅಥವಾ ಅದರ ಚಿತ್ರ ಇಡುವ ಬಗ್ಗೆ ಶಾಸ್ತ್ರಗಳು ಮತ್ತು ಜಾನಪದ ನಂಬಿಕೆಗಳು ಶುಭ-ಅಶುಭ ಫಲಗಳನ್ನು ತಿಳಿಸುತ್ತವೆ. ಇದು ರಾಹು, ಕೇತು, ಶನಿ ದೋಷ ನಿವಾರಣೆ ಮಾಡಿ ಅಕಾಲಿಕ ಮರಣದಿಂದ ರಕ್ಷಿಸುತ್ತದೆ. ದಾಂಪತ್ಯ ಕಲಹ ಶಮನಗೊಳಿಸಿ ಪ್ರೀತಿ ಹೆಚ್ಚಿಸುತ್ತದೆ ಹಾಗೂ ವಾಸ್ತು ಪ್ರಕಾರ ಈಶಾನ್ಯ ದಿಕ್ಕು ಶುಭ. ಜೊತೆಗೆ ಸೂಕ್ತ ಕಾಳಜಿಯಿಂದ ನೋಡಿಕೊಳ್ಳುವುದು ಅತ್ಯಂತ ಅಗತ್ಯ.

Vastu Shastra: ಮನೆಯಲ್ಲಿ ಗಿಳಿ ಸಾಕುವುದು ಅಥವಾ ಅದರ ಚಿತ್ರ ಇಡುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಮನೆಯಲ್ಲಿ ಗಿಳಿ ಸಾಕುವುದರ ಧಾರ್ಮಿಕ ನಂಬಿಕೆImage Credit source: Getty Images
ಅಕ್ಷತಾ ವರ್ಕಾಡಿ
|

Updated on:Jul 22, 2026 | 11:51 AM

Share

ಅನೇಕ ಜನರು ತಮ್ಮ ಮನೆಗಳಲ್ಲಿ ಗಿಳಿಗಳನ್ನು ಸಾಕಲು ಬಯಸುತ್ತಾರೆ. ಗಿಳಿಯ ಆಕರ್ಷಕ ರೂಪ ಮತ್ತು ಮಧುರ ಧ್ವನಿ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಶಾಸ್ತ್ರಗಳು ಮತ್ತು ಜಾನಪದ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಅಥವಾ ಅದರ ಚಿತ್ರವನ್ನು ಇಡುವುದರಿಂದ ಕೆಲವು ನಿರ್ದಿಷ್ಟ ಶುಭ ಹಾಗೂ ಅಶುಭ ಫಲಗಳು ಎದುರಾಗಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಗ್ರಹ ದೋಷಗಳ ನಿವಾರಣೆ:

ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಅಥವಾ ಅದರ ಸುಂದರ ಚಿತ್ರವನ್ನು ಗೋಡೆಯ ಮೇಲಿಡುವುದರಿಂದ ರಾಹು, ಕೇತು ಹಾಗೂ ಶನಿ ಗ್ರಹಗಳ ಕೆಟ್ಟ ದೃಷ್ಟಿ ಕುಟುಂಬದ ಮೇಲೆ ಬೀಳುವುದಿಲ್ಲ. ವಿಶೇಷವಾಗಿ ಗಿಳಿಯ ಉಪಸ್ಥಿತಿಯು ಮನೆಯ ಸದಸ್ಯರಿಗೆ ಎದುರಾಗಬಹುದಾದ ಅಕಾಲಿಕ ಮರಣದ ಗಂಡಾಂತರಗಳನ್ನು ತಪ್ಪಿಸುತ್ತದೆ ಎಂಬ ಭಕ್ತಿಯ ನಂಬಿಕೆಯಿದೆ.

ದಾಂಪತ್ಯ ಹಾಗೂ ವಾಸ್ತು ಸುಧಾರಣೆ:

ಗಿಳಿಯನ್ನು ಇರಿಸುವುದರಿಂದ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳು ಶಮನಗೊಂಡು ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮನೆಯ ವಾತಾವರಣದಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ವಾಸ್ತು ಪ್ರಕಾರ ಗಿಳಿಯನ್ನು ಮನೆಯ ಪೂರ್ವ-ಉತ್ತರ (ಈಶಾನ್ಯ) ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ, ಇದು ಮನೆಗೆ ಸದಾ ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಪಂಜರದಲ್ಲಿ ಗಿಳಿ ಇಡುವಾಗ ವಹಿಸಬೇಕಾದ ಎಚ್ಚರಿಕೆ:

ಮನೆಯಲ್ಲಿ ಗಿಳಿಯನ್ನು ಪಂಜರದಲ್ಲಿ ಇರಿಸಿದ್ದರೆ, ಅದು ಸದಾ ಸಂತೋಷದಿಂದಿರುವುದು ಅತ್ಯಗತ್ಯ. ಒಂದು ವೇಳೆ ಗಿಳಿಯು ಅಸಮಾಧಾನಗೊಂಡರೆ ಅಥವಾ ದುಃಖಿತವಾದರೆ, ಅದು ಮನೆಗೆ ದುರದೃಷ್ಟವನ್ನು ತರಬಹುದು ಮತ್ತು ಕುಟುಂಬದ ಸದಸ್ಯರ ಜೀವನದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಅದನ್ನು ಸೂಕ್ತ ಕಾಳಜಿಯಿಂದ ನೋಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Wed, 22 July 26

Follow Us
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ