ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ರಥೋತ್ಸವ; ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ, ಸ್ಥಳೀಯರು ಭಾಗಿ

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ಥಳೀಯರನ್ನು ಹೊರತುಪಡಿಸಿ ಹೊರಜಿಲ್ಲೆ ಅಥವಾ ರಾಜ್ಯದ ಭಕ್ತರಿಗೆ ಅವಕಾಶ ನೀಡಿರಲಿಲ್ಲ.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ರಥೋತ್ಸವ; ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ, ಸ್ಥಳೀಯರು ಭಾಗಿ
ಕೊಲ್ಲೂರು ಮೂಕಾಂಬಿಕಾ
Follow us
TV9 Web
| Updated By: ganapathi bhat

Updated on:Apr 05, 2022 | 12:53 PM

ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇಂದು (ಏಪ್ರಿಲ್ 3) ರಥೋತ್ಸವ ಕೊವಿಡ್ ಮಾರ್ಗಸೂಚಿಯ ಅನುಸಾರ ಆಯೋಜನೆಯಾಗಿ, ನೆರವೇರಿತು. 500 ಮೀಟರ್​ನಷ್ಟು ದೂರ ಸಾಗಬೇಕಿದ್ದ ರಥೋತ್ಸವವನ್ನು ಅರ್ಧಕ್ಕೇ ಮೊಟಕುಗೊಳಿಸಲಾಯಿತು. ದೇವಾಲಯದ ಆವರಣಕ್ಕೆ ಕಾಲು ಪ್ರದಕ್ಷಿಣೆ ತಂದು ಉತ್ಸವ ಪೂರ್ಣಗೊಳಿಸಲಾಯಿತು.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ಥಳೀಯರನ್ನು ಹೊರತುಪಡಿಸಿ ಹೊರಜಿಲ್ಲೆ ಅಥವಾ ರಾಜ್ಯದ ಭಕ್ತರಿಗೆ ಅವಕಾಶ ನೀಡಿರಲಿಲ್ಲ. ರಥ ಎಳೆಯುವ ವೇಳೆ ಅಂದಾಜು 1000 ಭಕ್ತರ ಜಮಾವಣೆಯಾಗಿತ್ತು.

ಕಳೆದ ವರ್ಷವೂ ಕೋವಿಡ್ ನಿಯಮಾವಳಿಯಿಂದ ರಥೋತ್ಸವ ಮೊಟಕುಗೊಂಡಿತ್ತು. ಈ ಹಿಂದೆ ಕೇರಳ ತಮಿಳುನಾಡು ಭಾಗದಿಂದ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಿದ್ದರು. ಆದರೆ, ಈ ಬಾರಿ ಹೊರಗಿನ ಯಾವುದೇ ಭಕ್ತರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿರಲಿಲ್ಲ. ಬಹುತೇಕ ಕೊರೊನಾ ಮಾರ್ಗಸೂಚಿಯಂತೆ ರಥೋತ್ಸವ ಪೂರ್ಣಗೊಂಡಿತು.

KOLLUR MOOKAMBIKA GODDESS

ಕೊಲ್ಲೂರು ಮೂಕಾಂಬಿಕೆ ಉತ್ಸವ

KOLLUR CAR FESTIVAL

ಕೊಲ್ಲೂರು ರಥೋತ್ಸವ

ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ಸಂಬಂಧ ಸಭೆ ನಿಗದಿ ಬೆಂಗಳೂರಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕರಗ ಉತ್ಸವ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ವಿಶೇಷ ಸಭೆ ಕರೆದಿದ್ದಾರೆ. ಹಿರಿಯ ಅಧಿಕಾರಿಗಳು, ಸ್ಥಳೀಯ ಶಾಸಕರು, ಸಂಸದರು, ದೇವಸ್ಥಾನದ ಆಡಳಿತ ಮಂಡಳಿ ಜೊತೆ ಏಪ್ರಿಲ್ 5ರಂದು ಆಯುಕ್ತರು ಸಭೆ ನಡೆಸಲಿದ್ದಾರೆ.

ಏಪ್ರಿಲ್ 27ರಂದು ಬೆಂಗಳೂರು ಕರಗ ನಿಗದಿಯಾಗಿದೆ. ಆದರೆ, ಸದ್ಯ ಕೊವಿಡ್ ಕೇಸ್​​ ಹೆಚ್ಚಳ ಹಿನ್ನೆಲೆಯಲ್ಲಿ ಹಬ್ಬ, ಜಾತ್ರೆ, ಕರಗ ಉತ್ಸವಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಕೊಡಗು ಜಿಲ್ಲೆಯಲ್ಲಿ 3 ವಾರ ಪ್ರವಾಸೋದ್ಯಮ ಬಂದ್ ಕೊರೊನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಕಾರಣ, ಏಪ್ರಿಲ್ 20ರವರೆಗೆ ಪ್ರವಾಸೋದ್ಯಮ ಬಂದ್ ಮಾಡಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಜನರ ಭೇಟಿ ನಿಷೇಧ ಹೇರಿದೆ. ಪ್ರವಾಸಿಗರ ಭೇಟಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಕೊಡಗು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಕೊವಿಡ್‌ ನಿಯಂತ್ರಣಕ್ಕೆ ಕೊಡಗು ಜಿಲ್ಲಾಡಳಿತದ ಕಠಿಣ ಕ್ರಮ ತೆಗೆದುಕೊಂಡಿದೆ.

ಇದನ್ನೂ ಓದಿ: Karnataka Covid-19 Update: ಕರ್ನಾಟಕದಲ್ಲಿ ಇಂದು 4,373 ಮಂದಿಗೆ ಕೊರೊನಾ ದೃಢ, 19 ಸಾವು

ಇದನ್ನೂ ಓದಿ: ಕೊರೊನಾ ತಡೆಗೆ ದೆಹಲಿಯಲ್ಲಿ ನಡೆಯಿತು ಧನ್ವಂತರಿ ಮಹಾಯಾಗ!

Published On - 10:50 pm, Sat, 3 April 21