Garh Ganesh Temple, Jaipur: ಸೊಂಡಿಲು ಇಲ್ಲದ ಗಣಪ ಬೆಟ್ಟದ ಮೇಲೆ ನೆಲೆಸಿದ್ದಾನೆ, ಭಕ್ತರು ಚೀಟಿ ಬರೆದು ತಮ್ಮ ಕೋರಿಕೆ ಸಲ್ಲಿಸುತ್ತಾರೆ
ಹಿಂದೂ ಧರ್ಮದಲ್ಲಿ ಗಣೇಶನಿಗೆ ಅತ್ಯುನ್ನತ ಸ್ಥಾನವಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಬಪ್ಪನಿಗೆ ಪೂಜೆ ಮಾಡಿ ಪ್ರಾರ್ಥಿಸುತ್ತಾರೆ. ಹಾಗೆ ನೊಡಿದರೆ ದೇಶಾದ್ಯಂತ ಅನೇಕ ವಿನಾಯಕ ದೇವಾಲಯಗಳಿವೆ. ಆದರೆ ಕೆಲವು ಅಪರೂಪದ ದೇವಾಲಯಗಳಿವೆ. ಇವುಗಳಿಗೆ ವಿಶೇಷ ಮಹತ್ವವಿದೆ. ಅಂತಹವುಗಳಲ್ಲಿ ಒಂದು ಗಣೇಶನ ದೇವಸ್ಥಾನವು ಬಹಳ ವಿಶೇಷವಾಗಿದೆ. ಸೊಂಡಿಲು ರಹಿತ ಗಣೇಶನ ವಿಗ್ರಹ ಇದಾಗಿದೆ.
Garh Ganesh Temple, Jaipur: ಹಿಂದೂ ಸಂಸ್ಕೃತಿಯಲ್ಲಿ ಅಸಂಖ್ಯಾತ ದೇವರಿದ್ದಾರೆ. ದೇವ ಮತ್ತು ದೇವತೆಗಳನ್ನು ಪೂಜಿಸುತ್ತಾ, ತಮ್ಮ ಕಷ್ಟಗಳನ್ನು ನಿವಾರಿಸಿ ಜೀವನದಲ್ಲಿ ಸಂತೋಷವನ್ನು ನೀಡಪ್ಪಾ ಎಂದು ಭಕ್ತರು ದೇವರನ್ನು ಪ್ರಾರ್ಥಿಸುತ್ತಾರೆ. ಪ್ರಸ್ತುತ ವಿನಾಯಕ ಚೌತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಉತ್ಸವ 10 ದಿನಗಳ ಕಾಲ ನಡೆಯಲಿದೆ. ಈ ಸಮಯದಲ್ಲಿ, ಗಣಪನ ವಿಗ್ರಹವನ್ನು ಮನೆ ಮನೆಯಲ್ಲಿ ಸ್ಥಾಪಿಸಲಾಗುತ್ತದೆ, ಪೂಜಿಸಲಾಗುತ್ತದೆ ಮತ್ತು ನಂತರ ವಿಸರ್ಜನೆ ಮಾಡಲಾಗುತ್ತದೆ. ಭಾರತದಲ್ಲಿ, ಈ ಹಬ್ಬದ ಸಮಯದಲ್ಲಿ ಪ್ರತಿ ವರ್ಷ ವಿಭಿನ್ನ ಆಚರಣೆಗಳನ್ನು ಆಯೋಜಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಗಣೇಶನಿಗೆ ಅತ್ಯುನ್ನತ ಸ್ಥಾನವಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಬಪ್ಪನಿಗೆ ಪೂಜೆ ಮಾಡಿ ಪ್ರಾರ್ಥಿಸುತ್ತಾರೆ. ಹಾಗೆ ನೊಡಿದರೆ ದೇಶಾದ್ಯಂತ ಅನೇಕ ವಿನಾಯಕ ದೇವಾಲಯಗಳಿವೆ. ಆದರೆ ಕೆಲವು ಅಪರೂಪದ ದೇವಾಲಯಗಳಿವೆ. ಇವುಗಳಿಗೆ ವಿಶೇಷ ಮಹತ್ವವಿದೆ. ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅಂತಹವುಗಳಲ್ಲಿ ಒಂದು ಗಣೇಶನ ದೇವಸ್ಥಾನವು ಬಹಳ ವಿಶೇಷವಾಗಿದೆ. ಸೊಂಡಿಲು ರಹಿತ ಗಣೇಶನ ವಿಗ್ರಹ ಇದಾಗಿದೆ. ಪುರುಷಾಕೃತಿ ಎಂದು ಕರೆಯಲ್ಪಡುವ ಪುಟ್ಟ ಮಗುವಿನ ರೂಪದಲ್ಲಿರುವ ಗಣೇಶ ಇದಾಗಿದೆ.
ದೇವಾಲಯವು ಸುಮಾರು 300 ವರ್ಷಗಳಷ್ಟು ಹಳೆಯದು ಎಂದು ಹೇಳಬಹುದು. ದೇವಾಲಯವನ್ನು ಸಣ್ಣ ಕೋಟೆಯ ರೂಪದಲ್ಲಿ ನಿರ್ಮಿಸಲಾಗಿದೆ. ಸವಾಯಿ ಜೈ ಸಿಂಗ್ ಬೆಟ್ಟದ ತುದಿಯಲ್ಲಿ ದೇವಾಲಯವನ್ನು ನಿರ್ಮಿಸಿದ. ಗಣಪನ ಪ್ರತಿಮೆಯನ್ನು ಜೈಪುರ ನಗರದ ಮೇಲೆ ತನ್ನ ಮಂಗಳಕರ ಕಣ್ಣುಗಳನ್ನು ಇಡುವ ರೀತಿಯಲ್ಲಿ ಇರಿಸಲಾಗಿದೆ. ಇದು ನಗರದ ಈಶಾನ್ಯ (ವಾಸ್ತು ಶಾಸ್ತ್ರದ ಪ್ರಕಾರ ಇಶಾನ್ಯ ದಿಕ್ಕು) ಗಡಿಯಾಗಿ ಕಾರ್ಯನಿರ್ವಹಿಸುತ್ತದೆ.
ಈ ದೇವಾಲಯವು ಹಲವು ಕಾರಣಗಳಿಂದ ವಿಶೇಷವಾಗಿದೆ. ಈ ದೇವಾಲಯದಲ್ಲಿರುವ ವಿನಾಯಕನ ವಿಗ್ರಹವೂ ವಿಶೇಷವಾಗಿದೆ. ಇದಲ್ಲದೆ ಈ ದೇವಾಲಯದಲ್ಲಿ ವಿನಾಯಕನನ್ನು ಪೂಜಿಸುವ ವಿಧಾನವೂ ಸ್ವಲ್ಪ ಭಿನ್ನವಾಗಿದೆ. ಭಕ್ತರು ವಿವಿಧ ವಿಧಾನಗಳನ್ನು ಅಳವಡಿಸಿಕೊಂಡು ತಮ್ಮ ಸಮಸ್ಯೆಗಳನ್ನು ದೇವರ ಮುಂದೆ ಹೇಳಿಕೊಳ್ಳುತ್ತಾರೆ. ಗಣೇಶ ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂದು ಭಕ್ತರು ನಂಬಿದ್ದಾರೆ. ಈ ವಿಶೇಷ ದೇವಾಲಯದ ಬಗ್ಗೆ ಇಂದು ತಿಳಿಯೋಣ…
Garh Ganesh Temple, Jaipur
Maharaja Swai Jai Singh II constructed this temple during his famous “Ashwamegha Yagya” before the establishment of Jaipur.
It is probably the only temple in the country where there is a statue of Lord Ganesha without a trunk. The idol of Lord… pic.twitter.com/NtU07yfL0j
— History Of Rajputana (@KshatriyaItihas) January 6, 2024
ಅದು ಯಾವ ದೇವಸ್ಥಾನ ಈ ದೇವಾಲಯವನ್ನು ಘರ್ (ಗಢ) ಗಣೇಶ ದೇವಾಲಯ ಎಂದು ಕರೆಯಲಾಗುತ್ತದೆ. ಇದು ಗಣೇಶನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿದೆ. ಇದು ಜೈಘರ್ ಕೋಟೆಯ ನಹರ್ಘರ್ ಬಳಿ ಇದೆ. ಈ ದೇವಾಲಯವು ಸುಮಾರು 300 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇದನ್ನು ಸವಾಯಿ ಜೈ ಸಿಂಗ್ ನಿರ್ಮಿಸಿದ್ದಾರೆ. ಮತ್ತು ಮೇಧಾವಿ ವಿದ್ವಾಂಸರನ್ನು ಆಹ್ವಾನಿಸಿ, ಅಶ್ವಮೇಧ ಯಾಗವನ್ನು ಆಯೋಜಿಸಿದ್ದರು ಎಂದು ಹೇಳಲಾಗುತ್ತದೆ.
ಈ ವಿಗ್ರಹದ ಎತ್ತರ ಸುಮಾರು 500 ಮೀಟರ್ ಇದೆ. ಒಟ್ಟು 365 ಮೆಟ್ಟಿಲುಗಳನ್ನು ಹತ್ತಿದ ನಂತರ ಭಕ್ತರು ಈ ದೇವಾಲಯದಲ್ಲಿ ಗಣಪತಿಯನ್ನು ನೋಡಲು ಸಾಧ್ಯವಾಗುತ್ತದೆ. ವರ್ಷದಲ್ಲಿ ಎಷ್ಟು ದಿನಗಳು ಇರುತ್ತವೋ ಅಷ್ಟು ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ಹತ್ತಿ ಆಕಾಶದಲ್ಲಿ ವಿರಾಜಮಾನವಾಗಿರುವ ಸೊಂಡಿಲು ರಹಿತ ಗಣೇಶನ ದರ್ಶನ ಪಡೆಯಬಹುದು. ಸಾವಿರಾರು ಭಕ್ತರು ಪೂಜೆ ಸಲ್ಲಿಸಿ, ತಮ್ಮ ಕೋರಿಕೆ ಸಲ್ಲಿಸಲು ಈ ದೇವಾಲಯಕ್ಕೆ ಬರುತ್ತಾರೆ.