ಈಶ್ವರನು ಶಿವಲಿಂಗದ ರೂಪದಲ್ಲಿ ಪ್ರಕಟಗೊಂಡ ಸುದಿನ ಇಂದು- ಈ ಮಾಸಿಕ ಶಿವರಾತ್ರಿಯ ಮಹತ್ವ ತಿಳಿಯೋಣ ಬನ್ನಿ
ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಮಾಸಿಕ ಶಿವರಾತ್ರಿ ಚತುರ್ದಶಿಯು ಮಹಾದೇವ ಶಿವಲಿಂಗದ ರೂಪದಲ್ಲಿ ಪ್ರಕಟಗೊಂಡ ದಿನವಾಗಿದೆ. ಈ ಘಟನೆ ಸಂಭವಿಸಿದ ಈ ಸುದಿನವನ್ನು ಮಹಾ ಶಿವರಾತ್ರಿ ಹೆಸರಿನಲ್ಲಿ ಭಕ್ತರು ವ್ರತಾಚರಣೆ ಮಾಡುತ್ತಾರೆ. ಇದೊಂದೇ ದಿನಕ್ಕೆ ಶಿವರಾತ್ರಿ ಸೀಮಿತವಾಗಿಲ್ಲ. ಪ್ರತಿ ಮಾಸದಲ್ಲಿ ಕೃಷ್ಣ ಪಕ್ಷದ ಚತುರ್ದಶಿಯ ದಿನ ಶಿವರಾತ್ರಿಯನ್ನು ಆಚರಿಸಲ್ಪಡುತ್ತದೆ.
ಆಂಗ್ಲ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ ತಿಂಗಳು ವರ್ಷದ ಕೊನೆಯ ಮಾಸವಾಗಿರುತ್ತದೆ. ಎಲ್ಲ ತಿಂಗಳುಗಳಲ್ಲಿ ಆಚರಸುವಂತೆ ಈ ಡಿಸೆಂಬರ್ನಲ್ಲಿಯೂ ನಾನಾ ವ್ರತಗಳು ಮತ್ತು ಹಬ್ಬ ಹರಿದಿನಗಳು ಬರುತ್ತವೆ. ಎಲ್ಲ ತಿಂಗಳಲ್ಲಿ ಬರುವಂತೆ ಈ ಮಾಸದಲ್ಲಿಯೂ ಏಕಾದಶಿ, ಪ್ರದೋಷ ವ್ರತ, ಅಮಾವಾಸ್ಯೆ, ಚತುರ್ಥಿ ಮುಂತಾದ ಹಬ್ಬ ಹರಿದಿನಗಳು ಬರುತ್ತವೆ. ಇಂದು ಗುರುವಾರ (ಡಿಸೆಂಬರ್ 2) ಪರಶಿವನ ಭಕ್ತರು ಮಾಸಿಕ ಶಿವರಾತ್ರಿ ಮತ್ತು (masik shivratri) ಪ್ರದೋಷ ವ್ರತ ಆಚರಣೆ ಮಾಡುವುದಿದೆ.
ಮಾಸಿಕ ಶಿವರಾತ್ರಿ ಮತ್ತು ಪ್ರದೋಷ ವ್ರತ (ಗುರುವಾರ- ಡಿಸೆಂಬರ್ 2): ಮಹಾಶಿವರಾತ್ರಿ ವರ್ಷದಲ್ಲಿ ಒಮ್ಮೆ ಮಾತ್ರ ಆಚರಿಸಲ್ಪಡುತ್ತದೆ. ಆದರೆ ಮಾಸಿಕ ಶಿವರಾತ್ರಿ ಹಬ್ಬವು ಪ್ರತಿ ತಿಂಗಳೂ ಬರುತ್ತೆ. ಇದು ಕೃಷ್ಣ ಪಕ್ಷದ ಚತುರ್ದಶಿಯ ದಿನ ಆಚರಿಸಲ್ಪಡುತ್ತದೆ. ಈಶ್ವರನ ಭಕ್ತರು ತಮ್ಮ ಮನೋಕಾಮನೆಗಳನ್ನೆಲ್ಲಾ ಸಿದ್ಧಿಸಿಕೊಳ್ಳುವ ಸಲುವಾಗಿ ಆಚರಿಸುವ ವ್ರತ ಇದಾಗಿದೆ. ಇನ್ನು ಪ್ರದೋಷ ವ್ರತವು ಪ್ರತಿ ತಿಂಗಳೂ ಎರಡು ಬಾರಿ ತ್ರಯೋದಶಿ ದಿನದಂದು ಬರುತ್ತದೆ. ಒಂದು, ಕೃಷ್ಣ ಪಕ್ಷದಲ್ಲಿ ಮತ್ತೊಂದು ಶುಕ್ಲ ಪಕ್ಷದಲ್ಲಿ ಬರುತ್ತದೆ. ಇದನ್ನೂ ಸಹ ಏಕಾದಶಿಯ ಅರ್ಥಪೂರ್ಣವಾಗಿ ಆಚರಿಸಲ್ಪಡುತ್ತದೆ. ಡಿಸೆಂಬರ್ ತಿಂಗಳಲ್ಲಿ ಕೃಷ್ಣ ಪಕ್ಷದ ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ – ಎರಡೂ ಡಿಸೆಂಬರ್ 2ರಂದು ಒಂದೇ ದಿನ ಬರುತ್ತದೆ.
ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಮಾಸಿಕ ಶಿವರಾತ್ರಿ ಚತುರ್ದಶಿಯು ಮಹಾದೇವ ಶಿವಲಿಂಗದ ರೂಪದಲ್ಲಿ ಪ್ರಕಟಗೊಂಡ ದಿನವಾಗಿದೆ. ಈ ಘಟನೆ ಸಂಭವಿಸಿದ ಈ ಸುದಿನವನ್ನು ಮಹಾ ಶಿವರಾತ್ರಿ ಹೆಸರಿನಲ್ಲಿ ಭಕ್ತರು ವ್ರತಾಚರಣೆ ಮಾಡುತ್ತಾರೆ. ಇದೊಂದೇ ದಿನಕ್ಕೆ ಶಿವರಾತ್ರಿ ಸೀಮಿತವಾಗಿಲ್ಲ. ಪ್ರತಿ ಮಾಸದಲ್ಲಿ ಕೃಷ್ಣ ಪಕ್ಷದ ಚತುರ್ದಶಿಯ ದಿನ ಶಿವರಾತ್ರಿಯನ್ನು ಆಚರಿಸಲ್ಪಡುತ್ತದೆ. ಆ ದಿನವನ್ನು ಮಹಾದೇವನಿಗೆ ಸಮರ್ಪಿಸಲಾಗುವುದು. ಇದೇ ಡಿಸೆಂಬರ್ 2 ಗುರುವಾರ ಪ್ರದೋಷ ವ್ರತವೂ ಆಚರಿಸಲ್ಪಡುತ್ತದೆ. ಹಾಗಾಗಿ ಡಬಲ್ ಧಮಾಕಾ ಎಂಬಂತೆ ಈ ದಿನವನ್ನು ವಿಶೇಷವಾಗಿ ಪೂಜಿಸುವ ಶಿವ ಭಕ್ತರಿಗೆ ತಮ್ಮ ಮನೋಕಾಮನೆಗಳೆಲ್ಲಾ ಪೂರ್ತಿಯಾಗುವ ಸುದಿನ. ಇಂದು ಪರಮಾತ್ಮ ಶಿವನನ್ನು ಶ್ರದ್ಧಾ ಭಕ್ತಿಯಿಂದ ಜಪಿಸಿದರೆ ಅಸಂಭ ಎನಿಸುವ ಕಾರ್ಯವೂ ಹೂವು ಎತ್ತಿಡುವಷ್ಟು ಕೆಲವೇ ದಿನಗಳಲ್ಲಿ ಸುಲಲಿತವಾಗಿ ಪೂರೈಸಲ್ಪಡುತ್ತದೆ.
ಮಾಸ ಶಿವರಾತ್ರಿಯ ಮಹತ್ವ: ಸನಾತನ ಧರ್ಮಾಚಾರಣೆಯ ಅನುಸಾರ ಇಂದು ಮಾಸಿಕ ಶಿವರಾತ್ರಿ ಆಚರಿಸಲ್ಪಡುವುದರಿಂದ ಭಕ್ತರ ಮನೋಕಾಮನೆಗಳು ನೆರವೇರುತ್ತವೆ. ಕಠಿಣ, ಶ್ರಮದಾಯಕ ಕೆಲಸಗಳು ಸಲೀಸಾಗಿ ನೆರವೇರುತ್ತವೆ. ಇಂದು ಜಾಗರಣೆ ಮಾಡುವುದಕ್ಕೆ ಮತ್ತು ಶಿವನನ್ನು ಆರಾಧಿಸುವುದಕ್ಕೆ ವಿಶೇಷ ಮಹತ್ವವಿದೆ. ಅವಿವಾಹಿತರು ಈ ದಿನ ಶಿವರಾತ್ರಿ ಆಚರಿಸುವುದರಿಂದ ತಮ್ಮಿಚ್ಛಾನುಸಾರ ಜೀವನಸಾಥಿ ಸಿಗುತ್ತಾರೆ. ಇನ್ನು ವಿವಾಹಿತರಿಗೆ ತಮ್ಮ ಜೀವನದಲ್ಲಿ ಏನೇ ಸಸ್ಯೆಯಿದ್ದರೂ ಅದು ನಿವಾರಣೆಯಾಗುತ್ತದೆ. ಅವರ ಜೀವನಗಳಲ್ಲಿ ಸುಖ ಮತ್ತು ಶಾಂತಿ ಲಭಿಸುತ್ತದೆ. ಶಿವನ ಭಕ್ತರು ವರ್ಷದಲ್ಲಿ ಶಿವರಾತ್ರಿ ವ್ರತಾಚರಣೆ ಪಾಲಿಸುವುದೇ ಆದರೆ ಮಹಾ ಶಿವರಾತ್ರಿಯ ದಿನದಿಂದ ಆರಂಭಿಸುವುದು ಒಳ್ಳೆಯದು.
ಶುಭ ಮುಹೂರ್ತ: ಕೃಷ್ಣ ಪಕ್ಷದ ಚತುರ್ದಶಿಯ ದಿನ ಅಂದರೆ ಡಿಸೆಂಬರ್ 2 ಗುರುವಾರದಂದು ರಾತ್ರಿ 8.26 ನಿಮಿಷಕ್ಕೆ ಮಾಸ ಶಿವರಾತ್ರಿ ಆರಂಭವಾಗುತ್ತದೆ. ಮರು ದಿನ ಡಿಸೆಂಬರ್ 3 ಶುಕ್ರವಾರದಂದು ಸಾಯಂಕಾಲ 04:55 ಕ್ಕೆ ಸಮಾಪ್ತಿಯಾಗುತ್ತದೆ. ಹೀಗೆ ರಾತ್ರಿ ವೇಳೆ ಏಕೆಂದರೆ ಹೆಸರಿನಲ್ಲಿರುವತೆ ಇದು ಶಿವರಾತ್ರಿ. ಹಾಗಾಗಿ ರಾತ್ರಿಯಲ್ಲಿ ಶಿವನನ್ನುಆರಾಧಿಸುವುದು ಸಮಂಜಸವಾದೀತು
ಪೂಜಾ ವಿಧಾನ: ಶಿವರಾತ್ರಿಯ ಪೂಜೆ ನಡುರಾತ್ರಿ ಇರುತ್ತದೆ. ನಿಶಿತ ಕಾಲದಲ್ಲಿ ನಡೆಯುವ ಈ ವಿಶೇಷ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಮುನ್ನ ಸ್ನಾನ ಮಾಡಿ, ಸ್ವಚ್ಛ ಬಟ್ಟೆ ಧರಿಸಿ ಶಿವನ ಪೂಜೆಗೆ ಕುಳಿತುಕೊಳ್ಳಬೇಕು. ಬಳಿಕ ಶಿವಲಿಂಗದ ಮೇಲೆ ಗಂಗಾ ಜಲ, ಕ್ಷೀರಾಭಿಷೇಕ, ತುಪ್ಪ, ಜೇನು ತುಪ್ಪ, ಮೊಸರು, ಸಿಂಧೂರ, ಸಕ್ಕರೆ, ಗುಲಾಬಿ ನೀರು, ಬಿಲ್ವ ಪತ್ರೆ, ಹೂವು ಮುಂತಾದ ಶ್ರೇಯಸ್ಕರ ವಸ್ತುಗಳಿಂದ ಪೂಜೆ ನೆರವೇರಿಸಬೇಕು. ಅಭಿಷೇಕ ಮಾಡುವ ವೇಳೆ ಶಿವನ ಸ್ತುತಿ ಮಾಡಬೇಕು. ಮಂಗಳಾರತಿ ಎತ್ತಿ ನವೇದ್ಯ ಸಮರ್ಪಿಸಬೇಕು. ಅದಾದ ಮೇಲೆ ರುದ್ರಾಕ್ಷಿ ಮಾಲೆಯೊಂದಿಗೆ ಶಿವ ಚಾಲೀಸ್, ಶಿವ ಪುರಾಣ, ಲಿಂಗಾಷ್ಟಕ ಮತ್ತು ಶಿವ ಮಂತ್ರಗಳನ್ನು ಜಪಿಸಬೇಕು. ಇದೇ ಸಂದರ್ಭದಲ್ಲಿ ನಿಮ್ಮ ನಮ್ಮ ಮನೋಕಾಮನೆಗಳನ್ನು ಶಿವ ಬಳಿ ಹೇಳಿಕೊಳ್ಳಬೇಕು. ಪರಮಾತ್ಮ ಅದನ್ನು ನೆರವೇರಿಸುತ್ತಾನೆ.