AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2026: ರಕ್ಷಾ ಬಂಧನ ಹಬ್ಬದಂದೇ ಚಂದ್ರಗ್ರಹಣ; ರಾಖಿ ಕಟ್ಟಲು ಸೂಕ್ತ ಸಮಯ ಯಾವುದು? ಇಲ್ಲಿದೆ ಸ್ಪಷ್ಟ ಉತ್ತರ!

2026ರ ಆಗಸ್ಟ್ 28ರಂದು ರಕ್ಷಾ ಬಂಧನ ಮತ್ತು ಚಂದ್ರಗ್ರಹಣ ಒಟ್ಟಿಗೆ ಬಂದಿವೆ. ಆದರೆ, ಭಾರತದಲ್ಲಿ ಗ್ರಹಣ ಗೋಚರಿಸದ ಕಾರಣ ಸೂತಕ ಅವಧಿ ಅನ್ವಯಿಸುವುದಿಲ್ಲ. ಸಹೋದರಿಯರು ಯಾವುದೇ ಭಯವಿಲ್ಲದೆ ಬೆಳಗಿನ ಶುಭ ಮುಹೂರ್ತದಲ್ಲಿ ಸಹೋದರರಿಗೆ ರಾಖಿ ಕಟ್ಟಬಹುದು. ಧಾರ್ಮಿಕ ಪೂಜಾ ವಿಧಿಗಳಿಗೆ ಯಾವುದೇ ಅಡಚಣೆ ಇಲ್ಲ, ನಿರಾತಂಕವಾಗಿ ಹಬ್ಬವನ್ನು ಆಚರಿಸಿ ಬಾಂಧವ್ಯ ಗಟ್ಟಿಪಡಿಸಿ.

Raksha Bandhan 2026: ರಕ್ಷಾ ಬಂಧನ ಹಬ್ಬದಂದೇ ಚಂದ್ರಗ್ರಹಣ; ರಾಖಿ ಕಟ್ಟಲು ಸೂಕ್ತ ಸಮಯ ಯಾವುದು? ಇಲ್ಲಿದೆ ಸ್ಪಷ್ಟ ಉತ್ತರ!
ರಕ್ಷಾ ಬಂಧನ ಹಬ್ಬದಂದೇ ಚಂದ್ರಗ್ರಹಣ
ಅಕ್ಷತಾ ವರ್ಕಾಡಿ
|

Updated on:Aug 28, 2026 | 7:56 AM

Share

ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯ ಮತ್ತು ಅಪಾರ ನಂಬಿಕೆಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು 2026ರ ಆಗಸ್ಟ್ 28, ಶುಕ್ರವಾರದಂದು ವೈಭವದಿಂದ ಆಚರಿಸಲಾಗುತ್ತಿದೆ. ಆದರೆ, ಇದೇ ದಿನ ಚಂದ್ರಗ್ರಹಣ ಸಂಭವಿಸುತ್ತಿದೆ ಎಂಬ ಸುದ್ದಿಯಿಂದಾಗಿ ಹಲವರಲ್ಲಿ “ಸೂತಕ್ ಅವಧಿ ಅನ್ವಯಿಸುತ್ತದೆಯೇ?” ಹಾಗೂ “ರಾಖಿ ಕಟ್ಟಲು ಯಾವುದೇ ಅಡಚಣೆ ಇದೆಯೇ?” ಎಂಬ ಅನುಮಾನಗಳು ಮೂಡಿವೆ. ಧಾರ್ಮಿಕ ನಿಯಮಗಳು ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಂಶಯಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ.

ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?

ಈ ಬಾರಿಯ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣದ ಸಮಯದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಹಗಲು ವೇಳೆಯಾಗಿರುವುದರಿಂದ ಹಾಗೂ ಚಂದ್ರನು ದಿಗಂತದ ಕೆಳಗಿರುವುದರಿಂದ ಈ ಖಗೋಳ ಘಟನೆ ಭಾರತಕ್ಕೆ ಗೋಚರವಾಗುವುದಿಲ್ಲ.

ಸೂತಕ ಅವಧಿ ಅನ್ವಯಿಸುತ್ತದೆಯೇ?

ಸಾಮಾನ್ಯವಾಗಿ ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಗ್ರಹಣ ಗೋಚರಿಸುವ ಪ್ರದೇಶಗಳಲ್ಲಿ ಈ ಸಮಯದಲ್ಲಿ ಪೂಜೆ, ಶುಭ ಕಾರ್ಯಗಳು ಹಾಗೂ ಆಹಾರ ಸೇವನೆಯನ್ನು ನಿಷೇಧಿಸುವ ಸಂಪ್ರದಾಯವಿದೆ. ಆದರೆ, ಸಾಂಪ್ರದಾಯಿಕ ಪಂಚಾಂಗ ನಿಯಮಗಳ ಪ್ರಕಾರ, ಗ್ರಹಣವು ಎಲ್ಲಿ ಕಣ್ಣಿಗೆ ಕಾಣಿಸುತ್ತದೆಯೋ ಅಲ್ಲಿ ಮಾತ್ರ ಸೂತಕ ನಿಯಮಗಳು ಅನ್ವಯಿಸುತ್ತವೆ. ಭಾರತದಲ್ಲಿ ಗ್ರಹಣ ಕಾಣಿಸದಿರುವುದರಿಂದ ಯಾವುದೇ ಸೂತಕ ಅವಧಿ ಇರುವುದಿಲ್ಲ.

ಇದನ್ನೂ ಓದಿ: ಆ.28ರಂದು ರಕ್ಷಾ ಬಂಧನ; ಈ ಶುಭ ದಿನದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?

ರಕ್ಷಾ ಸೂತ್ರ ಆಚರಣೆಗೆ ಮುನ್ನೆಚ್ಚರಿಕೆಗಳು:

ರಕ್ಷಾ ಸೂತ್ರವು ಶುದ್ಧತೆ ಮತ್ತು ರಕ್ಷಣೆಯ ಸಂಕೇತವಾಗಿದೆ. ಗ್ರಹಣದ ಪ್ರಭಾವ ಭಾರತದಲ್ಲಿ ಇಲ್ಲದಿರುವುದರಿಂದ, ಸಹೋದರಿಯರು ಕಾಯುವ ಅಗತ್ಯವಿಲ್ಲದೇ ಬೆಳಗಿನ ಶುಭ ಮುಹೂರ್ತದಲ್ಲೇ ಸಹೋದರರಿಗೆ ರಾಖಿ ಕಟ್ಟಬಹುದು. ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಧಾರ್ಮಿಕ ಪೂಜಾವಿಧಿಗಳನ್ನು ನೆರವೇರಿಸಬಹುದು.

ಗಂಗಾ ಜಲದಿಂದ ರಾಖಿ ಶುದ್ಧೀಕರಣ ಅಗತ್ಯವೇ?

ಅನೇಕ ಕುಟುಂಬಗಳಲ್ಲಿ ಹಬ್ಬದ ಪೂಜೆಗೂ ಮುನ್ನ ಹಾಗೂ ರಕ್ಷಾ ಸೂತ್ರಕ್ಕೆ ಗಂಗಾಜಲ ಸಿಂಪಡಿಸಿ ಶುದ್ಧೀಕರಿಸುವ ಸಂಪ್ರದಾಯವಿದೆ. ಇದು ಆಧ್ಯಾತ್ಮಿಕ ಭಕ್ತಿ ಮತ್ತು ಸಾಂಪ್ರದಾಯಿಕ ನಂಬಿಕೆಗೆ ಸಂಬಂಧಿಸಿದ ಆಚರಣೆಯಾಗಿದ್ದು, ಗ್ರಹಣದ ಭಯದಿಂದ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಕುಟುಂಬದ ಸಾಂಪ್ರದಾಯಿಕ ಪದ್ಧತಿಯಂತೆ ಇದನ್ನು ಅನುಸರಿಸಬಹುದು. ಭಯವಿಲ್ಲದೆ ಹಬ್ಬ ಆಚರಿಸಿಚಂದ್ರಗ್ರಹಣದ ಕಾರಣದಿಂದಾಗಿ ಹಬ್ಬದ ಸಂಭ್ರಮಕ್ಕೆ ಯಾವುದೇ ಧಕ್ಕೆ ಇಲ್ಲ. ಗ್ರಹಣದ ಪ್ರಭಾವ ಭಾರತದಲ್ಲಿ ಇಲ್ಲದಿರುವುದರಿಂದ ಸಹೋದರ-ಸಹೋದರಿಯರು ನಿರಾತಂಕವಾಗಿ, ಪ್ರೀತಿ-ವಾತ್ಸಲ್ಯದಿಂದ ಹಬ್ಬವನ್ನು ಆಚರಿಸಿ ಪರಸ್ಪರ ಶುಭ ಹಾರೈಸಬಹುದು. ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗಳಿಸುವುದೇ ಈ ರಕ್ಷಾ ಬಂಧನದ ನಿಜವಾದ ಉದ್ದೇಶ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:55 am, Fri, 28 August 26

Follow Us
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು