Selfishness: ಸ್ವಾರ್ಥ ಚಿಂತನೆಯು ಈ ರೀತಿಯೂ ಪರಿಣಾಮ ಬೀರುತ್ತದೆ, ದ್ರೋಣರ ಸ್ವಾರ್ಥದಿಂದ ಏನಾಯಿತು?

ಮಾನವನ ಜೀವನ ಹಸನಾಗಲು ದಾರಿಗಳಿದ್ದಂತೆ... ಜೀವನದಲ್ಲಿ ಪತನವಾಗಲೂ ದಾರಿಗಳಿವೆ. ಅದರಲ್ಲಿ ಪ್ರಸಿದ್ಧ ಮತ್ತು ಬಿಡಲೇಬೇಕಿದ್ದರೂ ಬಿಡಲಾಗದ ಒಂದು ಪತನದ ದಾರಿ ಎಂದರೆ ಅದು ಸ್ವಾರ್ಥ. ಪದವನ್ನು ಬಿಡಿಸಿದರೆ ಸ್ವ+ಅರ್ಥ” ತನಗೋಸ್ಕರವೇ ಬಯಸುವವ ಎಂದು ಭಾವಾರ್ಥವನ್ನು ಹೇಳಬಹುದು.

Selfishness: ಸ್ವಾರ್ಥ ಚಿಂತನೆಯು ಈ ರೀತಿಯೂ ಪರಿಣಾಮ ಬೀರುತ್ತದೆ, ದ್ರೋಣರ ಸ್ವಾರ್ಥದಿಂದ ಏನಾಯಿತು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jan 31, 2023 | 11:28 AM

ಮಹಾಭಾರತವೆಂಬ (Mahabharata) ಇತಿಹಾಸ ಗ್ರಂಥವನ್ನು ಎಲ್ಲರಿಗೆ ಓದಲು ಕಷ್ಟವಾದರೂ, ಅದರ ಕಥೆ, ಭಾವಗಳು, ಅಲ್ಲಿನ ಪಾತ್ರಗಳ ಬಗ್ಗೆ , ಅಲ್ಲಿನ ತತ್ವಗಳ ಬಗ್ಗೆ ತಮ್ಮ ತಮ್ಮ ವ್ಯಾಪ್ತಿಗನುಗುಣವಾಗಿ ಎಲ್ಲರಿಗೂ ತಿಳಿದೇ ಇದೆ. ಪುರಾಣಗಳು, ಇತಿಹಾಸಗ್ರಂಥಗಳು ನಮಗೆ ಹಿಂದಿನ ಇತಿಹಾಸವನ್ನು ತಿಳಿಸುತ್ತಾ ವರ್ತಮಾನದ ಬದುಕನ್ನು ಕಟ್ಟಿಕೊಳ್ಳುವ ಪಾಠವನ್ನು ಹೇಳಿಕೊಡುತ್ತಲೇ ಇವೆ. ಆದರೂ ನಾವು ಕೆಲವೊಮ್ಮೆ ಕಂಡೂ ಕಾಣದಂತೆ ಇರುತ್ತೇವೆ ಅಥವಾ ಬದುಕುತ್ತೇವೆ. ಮಾನವನ ಜೀವನ ಹಸನಾಗಲು ದಾರಿಗಳಿದ್ದಂತೆ… ಜೀವನದಲ್ಲಿ ಪತನವಾಗಲೂ ದಾರಿಗಳಿವೆ. ಅದರಲ್ಲಿ ಪ್ರಸಿದ್ಧ ಮತ್ತು ಬಿಡಲೇಬೇಕಿದ್ದರೂ ಬಿಡಲಾಗದ ಒಂದು ಪತನದ ದಾರಿ ಎಂದರೆ ಅದು ಸ್ವಾರ್ಥ. ಪದವನ್ನು ಬಿಡಿಸಿದರೆ ಸ್ವ+ಅರ್ಥ” ತನಗೋಸ್ಕರವೇ ಬಯಸುವವ ಎಂದು ಭಾವಾರ್ಥವನ್ನು ಹೇಳಬಹುದು. ವರ್ತಮಾನದಲ್ಲಿ ಈ ಸ್ವಾರ್ಥವನ್ನು ಅಭಿಮಾನ ಅಥವಾ ಸ್ವಾಭಿಮಾನ ಎಂದು ಹೇಳಿಕೊಂಡು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಅದೇನೇ ಇರಲಿ ಸ್ವಾರ್ಥದಿಂದಾಗುವ ಪರಿಣಾಮವೇನು ಎನ್ನುವುದರನ್ನು ನೋಡೋಣ.

ದ್ರೋಣರು ಅತ್ಯಂತ ಪ್ರಭಾವಶಾಲಿಯಾದ ಒಬ್ಬ ಯುದ್ಧಚತುರರು. ಬಿಲ್ಲುವಿದ್ಯಾಪ್ರವೀಣರು ಎನ್ನುವುದಕ್ಕೆ ಸಂದೇಹವೇ ಇಲ್ಲ. ಹಾಗೇ ತಪೋನಿಷ್ಠರೂ ಹೌದು. ಮಹಾಭಾರತ ಯುದ್ಧದಲ್ಲಿದ್ದ ಅತ್ಯಧಿಕ ಪರಾಕ್ರಮಿಗಳು ಸಾಕ್ಷಾತ್ ಅಥವಾ ಪರೋಕ್ಷವಾಗಿ ದ್ರೋಣರ ಶಿಷ್ಯರೆಂದರೂ ತಪ್ಪಲ್ಲ. ಅರ್ಜುನನ ಶ್ರದ್ಧೆಯ ಏಕಾಗ್ರತೆಯನ್ನು ಗಮನಿಸಿ ಅವನನ್ನು ಜಗತ್ತಿನ ಅಪ್ರತಿಮ ಧನುರ್ಧಾರಿಯನ್ನಾಗಿ ರೂಪಿಸಿದವರೂ ಅವರೇ. ಅದೇ ರೀತಿ ಪ್ರತಿಯೊಬ್ಬ ಪಾಂಡವ ಮತ್ತು ಕೌರವರಲ್ಲಿ ಅವರ ಅಂತರಂಗದ ಸೂಕ್ಷ್ಮತೆಯನ್ನರಿತು ಅದಕ್ಕನುಗುಣವಾಗಿ ವಿದ್ಯಾದಾನ ಮಾಡಿದ ಗುರುಗಳು ದ್ರೋರಣರು.

ಅದೇ… ಎಷ್ಟೇ ವಿದ್ಯೆಯಿದ್ದರೂ ಮತ್ತು ದಾನ ಮಾಡಿದರೂ ಹಲವು ಬಾರಿಯ ಅವರ ಸ್ವಾರ್ಥದ ನಡೆ ಅವರ ಅಮೋಘ ಜೀವನಕ್ಕೆ ಮುಳುವಾಯಿತು. ವಿದ್ಯಾಭ್ಯಾಸದ ನಂತರ ಗುರದಕ್ಷಿಣೆಯ ವಿಚಾರ ಬಂದಾಗ ತನ್ನ ಸ್ವಾರ್ಥ ನೀಗಿಸುವುದಕ್ಕಾಗಿ ದ್ರುಪದನ ಮೇಲೆ ಪಾಂಡವಾದಿಗಳಿಂದ ಮತ್ತು ಕೌರವಾದಿಗಳಿಂದ ದಾಳಿ ಮಾಡಿಸಿದರು. ಪಾಂಡವರ ಕೌಶಲ ಪರೀಕ್ಷೆಯ ವೇಳೆ ಪುತ್ರವ್ಯಾಮೋಹವೆಂಬ ಸ್ವಾರ್ಥಕ್ಕೆ ಕಟ್ಟುಬಿದ್ದು ಧರ್ಮರಾಯ ಭೀಮರ ಕುರಿತಾಗಿ ನಡೆದ ನಡೆಯನ್ನು ಅವರು ವಿರೋಧಿಸಲಿಲ್ಲ. ದ್ರೌಪದಿಯ ಅಪಮಾನದ ವೇಳೆ ಪ್ರತಿಭಟಿಸಲು ಎದ್ದು ನಿಂತರೂ ಪುತ್ರ ಅಶ್ವತ್ಥಾಮನ ಕಾರಣದಿಂದ ಪ್ರತಿಭಟಿಸಲಾಗಲಿಲ್ಲ.

ಇದನ್ನು ಓದಿ:Spiritual: ಪಿತೃಪಕ್ಷದಲ್ಲಿ ಸಂತಾನವಾದರೇ ದೋಷವಿದೆಯೇ ? ಪಿತೃಪಕ್ಷದಲ್ಲಿ ಸ್ವಪ್ನದಲ್ಲಿ ಪಿತೃ ದರ್ಶನವಾದರೆ ಏನು ಫಲ ?

ಇನ್ನು ಯುದ್ಧದ ವೇಳೆಯಂತು ತನ್ನ ಪುತ್ರನ ಕುರಿತಾದ ಸ್ವಾರ್ಥ ಬಹಳ ಪ್ರಮಾಣದಲ್ಲಿ ಅವರ ವ್ಯಕ್ತಿತ್ವಕ್ಕೆ ಅಪಘಾತವೆಸಗಿತು. ಪುಟ್ಟ ಅಭಿಮನ್ಯುವಿನ ಸಾವಿನ ದವಡೆಗೆ ದೂಡಲು ಇವರೂ ಕಾರಣರಾದರು. ಇಲ್ಲಿ ಕೇವಲ ಅಭಿಮನ್ಯುವಲ್ಲ ಅವರಿಗೆ ತನ್ನ ಅಪ್ಪಟ ಶಿಷ್ಯ ಅರ್ಜುನನ ಪುತ್ರ. ಧರ್ಮ ಸಮ್ಮತವಾದ ಯುದ್ಧಕಲೆಯನ್ನು ಕಲಿಸಿದ ಗುರುದ್ರೋಣರ ನಡೆ ಅರ್ಜುನನ ಪುತ್ರನ ವಿಷಯದಲ್ಲೇ ಅಧರ್ಮವಾಯಿತು. ಆದರೆ ಇಲ್ಲಿ ಪುತ್ರವ್ಯಾಮೋಹವೆಂಬ ಸ್ವಾರ್ಥ ಪ್ರತಿಭಟಿಸಲು ಬಿಡಲಿಲ್ಲ. ಅರ್ಜುನ ಅಶ್ವತ್ಥಾಮನೊಂದಿಗೆ ಯುದ್ಧಕ್ಕೆ ತೆರಳುವುದನ್ನು ಕಂಡ ದ್ರೋಣರು ವಾಮದಲ್ಲಿ (ರಣದಲ್ಲಿ ವಾಮಯುದ್ಧ ನಿಷೇಧವಿದೆ) ಬಂದು ಅವನನ್ನು ತಡೆದು ಯುದ್ಧಕ್ಕೆ ಆಹ್ವಾನಿಸಿ ಪ್ರಹಾರ ಆರಂಭಿಸುತ್ತಾರೆ.

ಈ ಎಲ್ಲಾ ಸ್ವಾರ್ಥ ಕರ್ಮಫಲಗಳೇ ದ್ರೋಣರ ಅಶಾಂತ ಜೀವನಕ್ಕೆ ಸಾಕ್ಷಿಯಾಯಿತು. ಅಲ್ಲದೇ ಪುತ್ರನ ಮರಣವಾಗದೇ ಇದ್ದರೂ ಪುತ್ರ ಮರಣನಾದನೆಂಬ ಅಶುಭ ಮಾತು ಕೇಳುವಂತಾಯಿತು. ತಪಸ್ವಿಗಳಾದ ದ್ರೋಣರಿಗೇ ತಮ್ಮ ಸ್ವಾರ್ಥಫಲ ಬಹುವಿಧವಾಗಿ ಕಾಡಿತು ಎಂದಾದರೆ ನಮ್ಮ ಕಥೆಯೇನು? ಸ್ವಾರ್ಥವೆಂಬುದು ಜೀವನದ ಬಹುದೊಡ್ಡ ಆಪತ್ತು. ನಮಗೇ ತಿಳಿಯದೆ ನಮ್ಮನ್ನಾವರಿಸಿ ನಮ್ಮ ವ್ಯಕ್ತಿತ್ವವನ್ನು ನಾಶಮಾಡುತ್ತಾ ಅಶಾಂತ ಚಿತ್ತರನ್ನಾಗಿಸಿ ಕೊನೆಗೆ ಅವಮಾನಿತರಾಗಿ ಜೀವಂತ ಮರಣದ ಸ್ಥಿತಿಯನ್ನು ತಂದಿಡುತ್ತದೆ ಈ ಸ್ವಾರ್ಥ. ಈ ಒಂದು ಬಾರಿ ಯೋಚಿಸಿ ನಮ್ಮದು ಸ್ವಾರ್ಥವೇ ? ಸ್ವಾಭಿಮಾನವೇ? ಎಂದು. ಸ್ವಾರ್ಥ ನಮ್ಮ ಜೀವನಕ್ಕೆ ಅನರ್ಥವುಂಟು ಮಾಡುವುದು ನಿಶ್ಚಿತ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Tue, 31 January 23

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?