Build Wealth: ಹೆಚ್ಚಿನ ದುಡಿಮೆಯಿಂದಲ್ಲ ಸಂಪತ್ತನ್ನು ನಿರ್ಮಿಸಿಕೊಳ್ಳಬೇಕು, ಶ್ರೀಮಂತರಾಗುವ ಸೂತ್ರವನ್ನು ತಿಳಿಯಿರಿ
ಕೇವಲ ಸಾಕಷ್ಟು ಹಣ ಸಂಪಾದನೆ ಮಾಡುವುದರಿಂದ ಸಂಪತ್ತನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ, ನೀವು ನಿಮ್ಮ ಉಳಿತಾಯದ ಹಣವನ್ನು ಅದು ನಿಯಮಿತವಾದ ಆದಾಯವನ್ನು ನೀಡುವ ರೀತಿಯಲ್ಲಿ ಹೂಡಿಕೆ ಮಾಡಬೇಕು. ಅಂದರೆ, ಹಣ ಹೆಚ್ಚು ಹಣವನ್ನು ಆಕರ್ಷಿಸುತ್ತದೆ.
ಶ್ರೀಮಂತನಾಗಬೇಕೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಈ ಕಾರಣಕ್ಕಾಗಿಯೇ ಮನುಷ್ಯರು ಹಗಲೂ-ರಾತ್ರಿ ದುಡಿಯುತ್ತಾರೆ. ಹೇರಳವಾದ ಹಣ, ಬ್ಯಾಂಕ್ ಬ್ಯಾಲೆನ್ಸ್, ನಿವೇಶನಗಳು-ಮನೆಗಳು, ಹೊಲ-ಗದ್ದೆ-ತೋಟಗಳು, ಕಾರು, ಮತ್ತು ಬಂಗಲೆಗಳನ್ನು ಯಾರು ಬಯಸುವುದಿಲ್ಲ? ಇವೆಲ್ಲವನ್ನೂ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಗಳಿಸಲು ಅಥವಾ ಶ್ರಮವಹಿಸಿ ದುಡಿದು ಹೆಚ್ಚು-ಹೆಚ್ಚು ಸಂಪಾದಿಸುವುದರಿಂದ ಪಡೆಯಲು ಸಾಧ್ಯವಿಲ್ಲ. ನಿಮಗೆ ಬೇಕೆನಿಸುವಷ್ಟು ಸಂಪತ್ತನ್ನು ನಿರ್ಮಿಸಿಕೊಳ್ಳಲು ನೀವು ಬಹಳಷ್ಟು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಸಂಪತ್ತಿನ ನಿರ್ಮಾಣ ಎಂದರೇನು?
ಕೇವಲ ಸಾಕಷ್ಟು ಹಣ ಸಂಪಾದನೆ ಮಾಡುವುದರಿಂದ ಸಂಪತ್ತನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ, ನೀವು ನಿಮ್ಮ ಉಳಿತಾಯದ ಹಣವನ್ನು ಅದು ನಿಯಮಿತವಾದ ಆದಾಯವನ್ನು ನೀಡುವ ರೀತಿಯಲ್ಲಿ ಹೂಡಿಕೆ ಮಾಡಬೇಕು. ಅಂದರೆ, ಹಣ ಹೆಚ್ಚು ಹಣವನ್ನು ಆಕರ್ಷಿಸುತ್ತದೆ. ನೀವು ಉಳಿತಾಯ ಮಾಡಿದ ಹಣವನ್ನು ಅದು ಕಾಲ ಕಳೆದಂತೆ ಸತತವಾಗಿ ಬೆಳೆಯುವ ಹಾಗೂ ನಿಮ್ಮ ಆರ್ಥಿಕ ಗುರಿಗಳಿಗೆ ಹೊಂದುವಂತೆ ಹೂಡಿಕೆ ಮಾಡುವುದನ್ನು ಸಂಪತ್ತಿನ ನಿರ್ಮಾಣ ಎನ್ನಲಾಗುತ್ತದೆ. ಆರ್ಥಿಕ ಗುರಿ ಎಂದರೆ, ನಿಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಯಾವ ಸಮಯದಲ್ಲಿ ನಿಮ್ಮ ಬಳಿ ಎಷ್ಟು ಹಣ ಇರಬೇಕೆನ್ನುವ ಗುರಿಯನ್ನು ಇಟ್ಟುಕೊಳ್ಳುವುದು. ನಿಮಗೆ ಸಾಕೆನಿಸುವಷ್ಟು ಪ್ರಮಾಣದ ಸಂಪತ್ತನ್ನು ನಿರ್ಮಿಸಿಕೊಳ್ಳಲು ಸರಿಯಾದ ಹೂಡಿಕೆಯನ್ನು ಆರಿಸಿಕೊಂಡುಬಿಟ್ಟರೆ ಸಾಲದು, ಅದಕ್ಕೆ ಸಾಕಷ್ಟು ಸಮಯ ನೀಡುವುದೂ ಬಹಳ ಮುಖ್ಯವಾಗುತ್ತದೆ. ದೀರ್ಘಾವಧಿಯ ಹೂಡಿಕೆಯಲ್ಲಿ ನಿಮ್ಮ ಹಣವು ಅನೇಕ ಪಟ್ಟು ಬೆಳೆಯುವ ಅನುಕೂಲತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಎಷ್ಟು ಬೇಗ ಹಣವನ್ನು ಹೂಡಿಕೆ ಮಾಡಲು ಆರಂಭಿಸುವಿರೋ, ಅಷ್ಟೂ ಹೆಚ್ಚು ಲಾಭವನ್ನು ಗಳಿಸುವಿರಿ. ಆದಾಗ್ಯೂ, ಹೆಚ್ಚಿನ ಪ್ರಮಾಣದ ಪ್ರತಿಫಲಗಳು ಎಂದರೆ ಹೆಚ್ಚಿನ ಪ್ರಮಾಣದ ಅಪಾಯಗಳ ಸಾಧ್ಯತೆಗಳೂ ಇರುತ್ತವೆ ಎಂದರ್ಥ. ಯಾವುದೇ ಹಣಕಾಸಿನ ಉತ್ಪನ್ನದಲ್ಲಿ ಹೂಡಿಕೆ ಮಾಡುವ ಮೊದಲು ಅದರಲ್ಲಿರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ. ಇದರಲ್ಲಿ ನೀವು ವಿಫಲರಾದರೆ ಅದು ನಿಮ್ಮ ಆರ್ಥಿಕ ಗುರಿಗಳ ಮೇಲೆ ಕೆಟ್ಟ ಪ್ರಭಾವ ಬೀರಬಹುದು.
ಸಂಪತ್ತಿನ ನಿರ್ಮಾಣವು ಏಕೆ ಮುಖ್ಯವಾಗುತ್ತದೆ?
ಸಂಪತ್ತಿನ ನಿರ್ಮಾಣವು ಅನೇಕ ಕಾರಣಗಳಿಗಾಗಿ ಬಹಳ ಮುಖ್ಯವಾಗುತ್ತದೆ. ಅದು ನಿಮ್ಮ ಭವಿಷ್ಯದ ಗುರಿಗಳನ್ನು ಅಂದರೆ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಣವನ್ನು ಒದಗಿಸುತ್ತದೆ. ಉದಾಹರಣೆಗೆ, ಮನೆಯೊಂದನ್ನು ಕೊಳ್ಳಲು, ಮಕ್ಕಳ ಶಿಕ್ಷಣಕ್ಕಾಗಿ, ಹಾಗೂ ಮದುವೆಗಳ ವೆಚ್ಚಗಳನ್ನು ನಿರ್ವಹಿಸಲು, ಇತ್ಯಾದಿ. ಒಂದು ವೇಳೆ ಉದ್ಯೋಗ ನಷ್ಟವಾದರೆ ಅಥವಾ ಇತರ ಬಗೆಯ ನಷ್ಟಗಳುಂಟಾದರೆ, ಅದು ನಿಮಗೆ ನಿಯಮಿತವಾದ ಆದಾಯವನ್ನು ಒದಗಿಸುತ್ತಿರುತ್ತದೆ. ನಿಮ್ಮ ಬಳಿ ಸಾಕಷ್ಟು ನಗದು ಹಣವನ್ನು ಹೊಂದಿರಲು ಹಾಗೂ ಉತ್ತಮವಾದ ಜೀವನವನ್ನು ನಡೆಸಲು ಇದು ಅತ್ಯುತ್ತಮವಾದ ಮಾರ್ಗವಾಗಿದೆ. ನಿವೃತ್ತಿ ಎನ್ನುವ ಹಂತವು ಪ್ರತಿಯೊಬ್ಬರ ಜೀವನದಲ್ಲೂ ಬಂದೇ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತವೆ. ದಿನನಿತ್ಯದ ವೆಚ್ಚಗಳನ್ನು ನಿರ್ವಹಿಸಲು ನಿಯಮಿತವಾದ ಆದಾಯ ಬೇಕಾಗುತ್ತದೆ. ಆದಾಗ್ಯೂ, ನಿಮಗೆ ಬೇಕಾಗುವಷ್ಟು ಸಂಪತ್ತನ್ನು ನಿರ್ಮಿಸಿಕೊಂಡ ನಂತರ ಹಣದ ಕೊರತೆಯ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ, ಹಾಗೂ ನಿಮಗೆ ಬೇಕೆನಿಸುವಷ್ಟು ದಿನ ನೀವು ಯಾರಿಗೂ ಹೊರೆಯಾಗದೇ ಆರಾಮವಾಗಿ ಬದುಕಬಹುದು. ನಿಮ್ಮ ಆರ್ಥಿಕ ಗುರಿಗಳನ್ನು ಈಡೇರಿಸಿಕೊಳ್ಳಲು ಸಂಪತ್ತಿನ ನಿರ್ಮಾಣವನ್ನು ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಲು 5paisa.com ಜಾಲತಾಣವನ್ನು ಸಂದರ್ಶಿಸಿ (https://bit.ly/3RreGqO ). ಅಲ್ಲಿನ ಅನುಭವಶಾಲಿ ಫಂಡ್ ಮ್ಯಾನೇಜರ್‌ಗಳು ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತಾರೆ.
Published On - 7:07 pm, Thu, 8 September 22