AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆದರ್ಲ್ಯಾಂಡ್ಸ್ ವಿರುದ್ಧ ಸೋಲು; ಭಾರತ ಹಾಕಿ ತಂಡದ ಸೆಮಿಫೈನಲ್‌ ಕನಸು ಭಾಗಶಃ ಭಗ್ನ

Men's Hockey World Cup 2026: 2026ರ ಪುರುಷರ ಹಾಕಿ ವಿಶ್ವಕಪ್‌ನ ಎರಡನೇ ಸುತ್ತಿನಲ್ಲಿ ಭಾರತ ಹಾಕಿ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 3-1 ಗೋಲುಗಳ ಅಂತರದ ಸೋಲು ಕಂಡಿದೆ. ಈ ಸೋಲಿನಿಂದಾಗಿ ಭಾರತದ ಸೆಮಿಫೈನಲ್ ಕನಸು ಭಾಗಶಃ ಭಗ್ನಗೊಂಡಿದೆ. ಏಳು ಪೆನಾಲ್ಟಿ ಕಾರ್ನರ್‌ಗಳಲ್ಲಿ ಒಂದೇ ಗೋಲು ಗಳಿಸಿದ್ದು ಹಿನ್ನಡೆಗೆ ಕಾರಣ. ಈಗ ಭಾರತ ಅರ್ಜೆಂಟೀನಾವನ್ನು ಎದುರಿಸಲಿದ್ದು, ಸೆಮಿಫೈನಲ್ ಆಸೆ ಜೀವಂತವಾಗಿಡಲು ಗೆಲ್ಲಲೇಬೇಕಿದೆ.

ನೆದರ್ಲ್ಯಾಂಡ್ಸ್ ವಿರುದ್ಧ ಸೋಲು; ಭಾರತ ಹಾಕಿ ತಂಡದ ಸೆಮಿಫೈನಲ್‌ ಕನಸು ಭಾಗಶಃ ಭಗ್ನ
India Hockey
ಪೃಥ್ವಿಶಂಕರ
|

Updated on:Aug 22, 2026 | 10:41 PM

Share

2026 ರ ಪುರುಷರ ಹಾಕಿ ವಿಶ್ವಕಪ್‌ನ (Men’s Hockey World Cup) ಮೊದಲ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ ಎರಡನೇ ಸುತ್ತಿಗೆ ಅರ್ಹತೆ ಪಡೆದಿದ್ದ ಭಾರತ ಹಾಕಿ ತಂಡ (Indian Hockey Team), ಎರಡನೇ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿದೆ. ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಬಲಿಷ್ಠ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದ್ದ ಹರ್ಮನ್‌ಪ್ರೀತ್ ಸಿಂಗ್ ಪಡೆ, 3-1 ಗೋಲುಗಳ ಅಂತರದ ಸೋಲನುಭವಿಸಿತು. ಈ ಸೋಲಿನೊಂದಿಗೆ ಭಾರತ ಹಾಕಿ ತಂಡದ ಸೆಮಿಫೈನಲ್ ಕನಸು ಕೂಡ ಭಾಗಶಃ ಭಗ್ನವಾಗಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಏಳು ಪೆನಾಲ್ಟಿ ಕಾರ್ನರ್‌ಗಳು ಸಿಕ್ಕವಾದರೂ ಅದರಲ್ಲಿ ಏಕೈಕ ಗೋಲು ದಾಖಲಿಸಲಷ್ಟೇ ಶಕ್ತವಾಯಿತು.

ಸೆಮಿಫೈನಲ್‌ ಕನಸು ಭಾಗಶಃ ಭಗ್ನ

ನೆದರ್ಲ್ಯಾಂಡ್ಸ್ ವಿರುದ್ಧ ಸೋತಿರುವ ಭಾರತ ಹಾಕಿ ತಂಡದ ಬಳಿ ಯಾವುದೇ ಅಂಕಗಳಿಲ್ಲ, ಇತ್ತ ನೆದರ್ಲ್ಯಾಂಡ್ಸ್ ಬಳಿ ಆರು ಅಂಕಗಳಿವೆ. ನೆದರ್ಲ್ಯಾಂಡ್ಸ್ ಈಗಾಗಲೇ ಮೂರು ಅಂಕಗಳನ್ನು ಹೊಂದಿತ್ತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತಕ್ಕೆ ಮೂರು ಅಂಕಗಳನ್ನು ಗಳಿಸುವ ಸುವರ್ಣಾವಕಾಶವಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಭಾರತವು ಗ್ರೂಪ್ ಇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಇತ್ತ ನೆದರ್ಲ್ಯಾಂಡ್ಸ್ ಮೊದಲ ಸ್ಥಾನಕ್ಕೇರಿದೆ. ಮೂರು ಅಂಕಗಳೊಂದಿಗೆ ಇಂಗ್ಲೆಂಡ್ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಈಗ ಎರಡನೇ ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ.

ಮೊದಲಾರ್ಧದಲ್ಲಿ ರೋಚಕ ಹೋರಾಟ

ಭಾರತವು ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ನೆದರ್ಲ್ಯಾಂಡ್ಸ್ ತಂಡ ಯಾವುದೇ ಗೋಲು ದಾಖಲಿಸದಂತೆ ತಡೆಯಿತು. ಹೀಗಾಗಿ ಮೊದಲಾರ್ಧ 0-0 ಯೊಂದಿಗೆ ಅಂತ್ಯವಾಯಿತು. ಆದರೆ ಮೂರನೇ ಕ್ವಾರ್ಟರ್‌ನ 41 ನೇ ನಿಮಿಷದಲ್ಲಿ, ಟೆಲ್ಜೆನ್‌ಕ್ಯಾಂಪ್ ನೆದರ್ಲ್ಯಾಂಡ್ಸ್ ಪರ ಫೀಲ್ಡ್ ಗೋಲ್ ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ ಹಾಕಿ ತಂಡ

ಹರ್ಮನ್‌ಪ್ರೀತ್ ಏಕೈಕ ಗೋಲು

ನಾಲ್ಕನೇ ಕ್ವಾರ್ಟರ್‌ನ 51 ನೇ ನಿಮಿಷದಲ್ಲಿ ಹೋಡೆಮೇಕರ್ಸ್ ಫೀಲ್ಡ್ ಗೋಲ್ ಗಳಿಸಿ ನೆದರ್ಲ್ಯಾಂಡ್ಸ್‌ಗೆ 2-0 ಮುನ್ನಡೆ ತಂದುಕೊಟ್ಟರು, ಇದು ಭಾರತದ ಮೇಲೆ ಒತ್ತಡ ಹೇರಿತು. ಇದಾದ ತಕ್ಷಣ, 52 ನೇ ನಿಮಿಷದಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಪರ ಮೊದಲ ಗೋಲು ಬಾರಿಸಿದರು. ಹೀಗಾಗಿ ಭಾರತ ಮುನ್ನಡೆ ಸಾಧಿಸಬಹುದೆಂದು ತೋರುತ್ತಿತ್ತು, ಆದರೆ 55 ನೇ ನಿಮಿಷದಲ್ಲಿ ಥಿಜ್ಸ್ ವ್ಯಾನ್ ಡ್ಯಾಮ್ ಬಾರಿಸಿದ ಫೀಲ್ಡ್ ಗೋಲ್ ಭಾರತವನ್ನು ಸೋಲಿನ ದವಡೆಗೆ ತಳ್ಳಿತು. ಭಾರತ ತನ್ನ ಅತ್ಯುತ್ತಮ ಪ್ರಯತ್ನ ಮಾಡಿತ್ತಾದರೂ ನೆದರ್ಲ್ಯಾಂಡ್ಸ್ ರಕ್ಷಣಾ ವಿಭಾಗವನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Sat, 22 August 26

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!