Australian Open 2023: ಆಸ್ಟ್ರೇಲಿಯಾ ಓಪನ್ನಲ್ಲಿ ಫೈನಲ್ ಪ್ರವೇಶಿಸಿದ ಸಾನಿಯಾ-ಬೋಪಣ್ಣ
Australian Open 2023: 2009 ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಹಾಗೆಯೇ ಇದುವರೆಗೆ 7 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಸಾನಿಯಾ ಮಿರ್ಜಾ ಟ್ರೋಫಿಯೊಂದಿಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.
Australian Open 2023: ಭಾರತದ ಟೆನಿಸ್ ತಾರೆಗಳಾದ ಸಾನಿಯಾ ಮಿರ್ಜಾ (Sania Mirza) ಮತ್ತು ರೋಹನ್ ಬೋಪಣ್ಣ (Rohan Bopanna) ಜೋಡಿ ಆಸ್ಟ್ರೇಲಿಯನ್ ಓಪನ್ 2023 ರ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸೆಮಿಫೈನಲ್‌ನಲ್ಲಿ ಸಾನಿಯಾ-ರೋಹನ್ ಬ್ರಿಟನ್‌ನ ಆನ್ ಸ್ಕುಪ್‌ಸ್ಕಿ ಮತ್ತು ಅಮೆರಿಕದ ಡಿ ಕರಾವ್‌ಜಿಕ್ ಜೋಡಿಯನ್ನು 7-6, 6-7, 10-6 ಅಂತರದಲ್ಲಿ ಮಣಿಸಿದರು. ಈ ಮೂಲಕ ಭಾರತೀಯ ತಾರೆಯರು ಫೈನಲ್ಗೆ ಎಂಟ್ರಿ ಕೊಟ್ಟರು. ವಿಶೇಷ ಎಂದರೆ ಇದು ಸಾನಿಯಾ ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾಗಿದೆ.
ಈ ಟೂರ್ನಿ ಆರಂಭಕ್ಕೂ ಮುನ್ನವೇ ಅವರು ನಿವೃತ್ತಿ ಘೋಷಿಸಿದ್ದರು. ಇದೀಗ ಫೈನಲ್ ಪ್ರವೇಶಿಸಿರುವುದರಿಂದ ಪ್ರಶಸ್ತಿಯೊಂದಿಗೆ ಗ್ರ್ಯಾಂಡ್ ಸ್ಲಾಮ್ಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಈ ಟೂರ್ನಿಯ ಬಳಿಕ ಸಾನಿಯಾ ಮಿರ್ಜಾ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಫೆಬ್ರವರಿ 19 ರಂದು ಪ್ರಾರಂಭವಾಗುವ WTA 1000 ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ಅವರು ವೃತ್ತಿ ಬದುಕಿ ವಿದಾಯ ಹೇಳಲಿದ್ದಾರೆ.
ಡಬಲ್ಸ್‌ನಿಂದ ಔಟ್:
ಮಹಿಳೆಯರ ಡಬಲ್ಸ್‌ನಿಂದ ಸಾನಿಯಾ ಮಿರ್ಜಾ ಈಗಾಗಲೇ ಹೊರಬಿದ್ದಿದ್ದಾರೆ. ಈ ಬಾರಿ ಸಾನಿಯಾ ಕಜಕಿಸ್ತಾನ್ ಜೊತೆಗಾರ್ತಿ ಅನ್ನಾ ಡ್ಯಾನಿಲಿನಾ ಅವರೊಂದಿಗೆ ಮಹಿಳಾ ಡಬಲ್ಸ್ನಲ್ಲಿ ಕಣಕ್ಕಿಳಿದಿದ್ದರು. ಆದರೆ ಈ ಜೋಡಿಯು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಬೆಲ್ಜಿಯಂನ ಅಲಿಸನ್ ವ್ಯಾನ್ ಯುಟ್ವಾಂಕ್ ಮತ್ತು ಉಕ್ರೇನ್‌ನ ಅನ್ಹೆಲಿನಾ ಕಲಿನಿನಾ ವಿರುದ್ಧ 4-6, 6-4, 2-6 ಅಂತರದಿಂದ ಸೋಲನುಭವಿಸಿತು.
ಪ್ರಶಸ್ತಿ ಸುತ್ತಿನಲ್ಲಿ ಸಾನಿಯಾ:
ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಎರಡನೇ ಬಾರಿಗೆ ಒಟ್ಟಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಲು ಕೇವಲ ಒಂದು ಗೆಲುವಿನ ದೂರದಲ್ಲಿದ್ದಾರೆ. ಇಬ್ಬರೂ 6 ವರ್ಷಗಳ ಹಿಂದೆ 2017 ರಲ್ಲಿ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಇನ್ನು 2009 ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಹಾಗೆಯೇ ಇದುವರೆಗೆ 7 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಸಾನಿಯಾ ಮಿರ್ಜಾ ಟ್ರೋಫಿಯೊಂದಿಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.