ನಿಯಮ ಉಲ್ಲಂಘನೆ; ದಿನೇಶ್​ ಕಾರ್ತಿಕ್​ಗೆ ಬಿಸಿಸಿಐ ನೋಟಿಸ್

ಪ್ರಮುಖ ಒಪ್ಪಂದಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ತಂಡದ ಕ್ರಿಕೆಟ್​ ಆಟಗಾರ ದಿನೇಶ್​ ಕಾರ್ತಿಕ್​ಗೆ ಬಿಸಿಸಿಐ ನೋಟಿಸ್ ನೀಡಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್​(ಸಿಪಿಎಲ್​) ಆರಂಭಿಕ ಪಂದ್ಯ ಉದ್ಘಾಟನೆ ವೇಳೆ ಟ್ರಿನ್​ಬಾಗೊ ನೈಟ್​ ರೈಡರ್ಸ್​ ಡ್ರೆಸ್ಸಿಂಗ್​ ರೂಮ್​ನಲ್ಲಿ ದಿನೇಶ್​ ಕಾಣಿಸಿಕೊಂಡಿದ್ದರು. ಹೀಗಾಗಿ ದಿನೇಶ್​ ಕಾರ್ತಿಕ್​ಗೆ ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್​ ನೀಡಿದೆ. ಬಿಸಿಸಿಐ ಒಪ್ಪಂದದಂತೆ ಆಟಗಾರರು ಮಂಡಳಿಯ ಅನುಮತಿ ಪಡೆಯದೆ ಯಾವುದೇ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಅಥವಾ ಹಾಜರಾಗಲು ಅನುಮತಿ ಇಲ್ಲ. ಸದ್ಯ ಬಿಸಿಸಿಐ ದಿನೇಶ್​ ಕಾರ್ತಿಕ್​ಗೆ ನೋಟಿಸ್​ […]

ನಿಯಮ ಉಲ್ಲಂಘನೆ; ದಿನೇಶ್​ ಕಾರ್ತಿಕ್​ಗೆ ಬಿಸಿಸಿಐ ನೋಟಿಸ್
Follow us
|

Updated on: Sep 07, 2019 | 2:31 PM

ಪ್ರಮುಖ ಒಪ್ಪಂದಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ತಂಡದ ಕ್ರಿಕೆಟ್​ ಆಟಗಾರ ದಿನೇಶ್​ ಕಾರ್ತಿಕ್​ಗೆ ಬಿಸಿಸಿಐ ನೋಟಿಸ್ ನೀಡಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್​(ಸಿಪಿಎಲ್​) ಆರಂಭಿಕ ಪಂದ್ಯ ಉದ್ಘಾಟನೆ ವೇಳೆ ಟ್ರಿನ್​ಬಾಗೊ ನೈಟ್​ ರೈಡರ್ಸ್​ ಡ್ರೆಸ್ಸಿಂಗ್​ ರೂಮ್​ನಲ್ಲಿ ದಿನೇಶ್​ ಕಾಣಿಸಿಕೊಂಡಿದ್ದರು. ಹೀಗಾಗಿ ದಿನೇಶ್​ ಕಾರ್ತಿಕ್​ಗೆ ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್​ ನೀಡಿದೆ.

ಬಿಸಿಸಿಐ ಒಪ್ಪಂದದಂತೆ ಆಟಗಾರರು ಮಂಡಳಿಯ ಅನುಮತಿ ಪಡೆಯದೆ ಯಾವುದೇ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಅಥವಾ ಹಾಜರಾಗಲು ಅನುಮತಿ ಇಲ್ಲ. ಸದ್ಯ ಬಿಸಿಸಿಐ ದಿನೇಶ್​ ಕಾರ್ತಿಕ್​ಗೆ ನೋಟಿಸ್​ ನೀಡಿ ಉತ್ತರಿಸಲು ಒಂದು ವಾರಗಳ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿ