Ishan Kishan: ಇಶಾನ್ ಕಿಶನ್ಗೆ ಬಿಗ್ ಶಾಕ್ ನೀಡಿದ ಬಿಸಿಸಿಐ: ಇನ್ಮುಂದೆ ತಂಡ ಸೇರುವುದು ಸುಲಭವಲ್ಲ
BCCI Ranji Trophy: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ಇದು ಇಶಾನ್ ಕಿಶನ್ಗೆ ದೊಡ್ಡ ಹೊಡೆತ ನೀಡಲಿದೆ. ಕಿಶನ್ ರಣಜಿಯಲ್ಲಿ ಆಡದಿರುವ ಬಗ್ಗೆ ಭಾರೀ ಕೋಲಾಹಲ ಎದ್ದಿದೆ. ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿಶ್ರಾಂತಿ ಪಡೆದ ನಂತರ ಇಶಾನ್ ಭಾರತ ತಂಡದಿಂದ ಹೊರಗುಳಿದಿದ್ದರು.

ಟೆಸ್ಟ್ ಕ್ರಿಕೆಟ್ (Test Cricket) ಎಂಬುದು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ನಡುವೆ ಆಡಲಾಗುವ ಆಟದ ಅತ್ಯಂತ ಕಷ್ಟಕರ ಸ್ವರೂಪ. ಒಂದು ಪಂದ್ಯವು 5 ದಿನಗಳವರೆಗೆ ನಡೆಯುತ್ತದೆ. ಪ್ರತಿ ಸೆಷನ್‌ನಲ್ಲಿ ಆಟವು ಬದಲಾಗುತ್ತದೆ. ಆದರೆ, ಈಗ ಆಟಗಾರರು ಟೆಸ್ಟ್ ಕ್ರಿಕೆಟ್‌ಗಿಂತ ಟಿ20 ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕಾರಣ ಸ್ಪಷ್ಟ, ಅದರಲ್ಲಿ ಹೆಚ್ಚು ಹಣವಿದೆ ಮತ್ತು ಕ್ರಿಕೆಟ್ ಅಭಿಮಾನಿಗಳು ಫೋರ್ ಮತ್ತು ಸಿಕ್ಸರ್‌ಗಳನ್ನು ಹೆಚ್ಚು ಆನಂದಿಸುತ್ತಾರೆ. ಟಿ20 ಲೀಗ್‌ಗಳನ್ನು ಪ್ರಪಂಚದಾದ್ಯಂತ ಆಡಲಾಗುತ್ತದೆ. ಆಟಗಾರರು ಇದರಲ್ಲಿ ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಭಾರತೀಯ ಆಟಗಾರರಿಗೆ ಇದು ವಿರುದ್ಧವಾಗಿದೆ.
ಭಾರತೀಯ ಆಟಗಾರರಿಗೆ ಐಪಿಎಲ್ ಹೊರತುಪಡಿಸಿ ಬೇರೆ ಯಾವುದೇ ಲೀಗ್‌ನಲ್ಲಿ ಆಡಲು ಅವಕಾಶವಿಲ್ಲ. ಆದರೆ, ಈಗೀಗ ಅನೇಕ ಭಾರತೀಯ ಆಟಗಾರರು ಟೆಸ್ಟ್ ಅಥವಾ ಇನ್ನಾವುದೇ ಸ್ವರೂಪಕ್ಕಿಂತ ಐಪಿಎಲ್‌ಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಆಟಗಾರರು ತಿಂಗಳ ಮೊದಲೇ ಎಲ್ಲವನ್ನೂ ಮರೆತು ಐಪಿಎಲ್ ತಯಾರಿ ಆರಂಭಿಸುತ್ತಾರೆ. ಇದೀಗ ಇಂಥ ಆಟಗಾರರನ್ನು ನಿಯಂತ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಆದೇಶ ಹೊರಡಿಸಿದೆ.
ಕೆಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್ ಇನ್..! ಬಿಸಿಸಿಐ ಆಧಿಕೃತ ಮಾಹಿತಿ
ಬಿಸಿಸಿಐ ಹಲವು ಆಟಗಾರರ ಬಗ್ಗೆ ಅಸಮಾಧಾನ
ಆಟಗಾರರು ದೇಶೀಯ ಕ್ರಿಕೆಟ್ ತೊರೆದು ತಿಂಗಳ ಮೊದಲೇ ಐಪಿಎಲ್ ತಯಾರಿ ಆರಂಭಿಸುವ ಮನೋಭಾವದಿಂದ ಬಿಸಿಸಿಐ ಸಂತುಷ್ಟರಾಗಿಲ್ಲ ಎಂದು ವರದಿಯೊಂದು ಹೇಳಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆಟಗಾರರು ರಣಜಿ ಟ್ರೋಫಿಯನ್ನು ಆಡಬೇಕು ಎಂದು ಬಿಸಿಸಿಐ ಮೂಲ ತಿಳಿಸಿದೆ. ರೆಡ್ ಬಾಲ್ ಕ್ರಿಕೆಟ್ ಅದರಲ್ಲೂ ರಣಜಿ ಟ್ರೋಫಿ ಬಗ್ಗೆ ಟೀಮ್ ಇಂಡಿಯಾದ ಕೆಲವು ಆಟಗಾರರ ವರ್ತನೆಯಿಂದ ಬಿಸಿಸಿಐ ಅಧಿಕಾರಿಗಳು ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.

BCCI
ಕೆಲವೇ ದಿನಗಳಲ್ಲಿ ಎಲ್ಲಾ ಆಟಗಾರರಿಗೆ ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯ ತಂಡಕ್ಕೆ ಆಡಲು ಬಿಸಿಸಿಐ ಸೂಚನೆ ನೀಡಲಿದೆ. ಕೆಲ ಆಟಗಾರರು ಭಾರತ ತಂಡಕ್ಕಾಗಿ ಆಡುತ್ತಿಲ್ಲ ಎಂದಾಗ ರಣಜಿ ಆಡಲೇಬೇಕು ಎಂಬ ನಿಯಮ ಬರಲಿದೆ. ಇಂಜುರಿಯಿಂದಾಗಿ ಎನ್‌ಸಿಎಯಲ್ಲಿ ಚೇತರಿಸಿಕೊಳ್ಳುತ್ತಿರುವ ಆಟಗಾರರಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಜನವರಿಯಿಂದ ಐಪಿಎಲ್ ಮೋಡ್‌ನಲ್ಲಿರುವ ಕೆಲವು ಆಟಗಾರರ ಬಗ್ಗೆ ಮಂಡಳಿಯು ಕೋಪಗೊಂಡಿದೆ ಎಂದು ಹೇಳಲಾಗಿದೆ.
ಕೆಎಲ್ ರಾಹುಲ್ ಅಲಭ್ಯ; ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರಿಗೆ ಅವಕಾಶ?
ಇಶಾನ್ ಕಿಶನ್ ಮೊದಲ ಟಾರ್ಗೆಟ್
ಇತ್ತೀಚೆಗೆ ಇಶಾನ್ ಕಿಶನ್ ರಣಜಿಯಲ್ಲಿ ಆಡದಿರುವ ಬಗ್ಗೆ ಭಾರೀ ಕೋಲಾಹಲ ಎದ್ದಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿಶ್ರಾಂತಿ ಪಡೆದ ನಂತರ ಇಶಾನ್ ತಂಡದಿಂದ ಹೊರಗುಳಿದಿದ್ದರು. ಅಂದಿನಿಂದ ಅವರು ಯಾವುದೇ ಕ್ರಿಕೆಟ್ ಆಡುತ್ತಿಲ್ಲ. ಇಶಾನ್ ಮರಳಿ ಬರಬೇಕಾದರೆ ಮೊದಲು ರಣಜಿ ಆಡಲಿ ಎಂದು ಕೋಚ್ ರಾಹುಲ್ ದ್ರಾವಿಡ್ ಕೂಡ ಹೇಳಿದ್ದರು. ಅತ್ತ ಜಾರ್ಖಂಡ್ ತಂಡ ಹಲವು ರಣಜಿ ಪಂದ್ಯಗಳಲ್ಲಿ ಭಾಗವಹಿಸಿದ್ದರೂ ಒಮ್ಮೆಯೂ ಇಶಾನ್ ಕಾಣಿಸಿಕೊಂಡಿರಲಿಲ್ಲ.
ಹಾಗೆಯೆ ಹಾರ್ದಿಕ್ ಪಾಂಡ್ಯ ಕೂಡ ಇದೇ ಮನೋಭಾವ ಹೊಂದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ 2023ರ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಅಲ್ಲಿಂದೀಚೆಗೆ ಅವರ ಚೇತರಿಕೆಯ ಹಲವು ವಿಡಿಯೋಗಳು ಹೊರಬಂದಿವೆ. ಆದರೆ ಅವರು ಹಿಂದಿರುಗುವ ಸುದ್ದಿ ಬರುತ್ತಿರುವುದು ಐಪಿಎಲ್‌ನಲ್ಲಿ ಮಾತ್ರ. ಹಾರ್ದಿಕ್ ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದೀಗ ಬಿಸಿಸಿಐ ಇಂಥ ಆಟಗಾರರಿಗೆ ಎಚ್ಚರಿಕೆ ನೀಡುವತ್ತ ಚಿತ್ತ ನೆಟ್ಟಿದ್ದು, ದೇಶೀಯ ಪಂದ್ಯಗಳನ್ನು ಆಡದೆ ತಂಡಕ್ಕೆ ಮರಳಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Tue, 13 February 24




