Team India: ರವಿ ಶಾಸ್ತ್ರಿಯ ಕೋವಿಡ್ ಮೂಲ ಪತ್ತೆ ಹಚ್ಚಿದ ಬಿಸಿಸಿಐ: ಗೆದ್ದ ತಂಡದ ವಿರುದ್ದವೇ ಗರಂ

Ravi Shastri-Virat Kohli: ಈ ಕಾರ್ಯಕ್ರಮದ ಫೋಟೋಗಳನ್ನು ಬಿಸಿಸಿಐ ಜೊತೆ ಹಂಚಿಕೊಂಡಿದ್ದು, ಇದೀಗ ಮಂಡಳಿಯು ಈ ಬಗ್ಗೆ ತನಿಖೆ ನಡೆಸಲಿದೆ.

Team India: ರವಿ ಶಾಸ್ತ್ರಿಯ ಕೋವಿಡ್ ಮೂಲ ಪತ್ತೆ ಹಚ್ಚಿದ ಬಿಸಿಸಿಐ: ಗೆದ್ದ ತಂಡದ ವಿರುದ್ದವೇ ಗರಂ
Ravi Shastri, Virat Kohli

ಓವಲ್​ನಲ್ಲಿ ನಡೆದ ಇಂಗ್ಲೆಂಡ್ (England)​ ವಿರುದ್ದದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇನ್ನು ಏಕೈಕ ಟೆಸ್ಟ್ ಪಂದ್ಯ ಬಾಕಿಯಿದ್ದು, ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸರಣಿ ಕೊಹ್ಲಿ ಪಡೆಯ ವಶವಾಗಲಿದೆ. ಇತ್ತ ಭರ್ಜರಿ ಗೆಲುವಿನ ಖುಷಿಯಲ್ಲಿದ್ದ ಟೀಮ್ ಇಂಡಿಯಾ ಸಂಭ್ರಮಕ್ಕೆ ಇದೀಗ ರವಿ ಶಾಸ್ತ್ರಿಯ ಕೊರೋನಾ ಪ್ರಕರಣ ತಣ್ಣೀರೆರಚಿದೆ. ಇತ್ತೀಚೆಗೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ತಂಡದ ಜೊತೆಯಿದ್ದರೂ ಶಾಸ್ತ್ರಿಗೆ ಹೇಗೆ ಕೋವಿಡ್ ತಗುಲಿತು ಎಂಬುದನ್ನು ಬಿಸಿಸಿಐ ತನಿಖೆ ನಡೆಸಿದ್ದು, ಇದೀಗ ಸೋಂಕಿನ ಮೂಲ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ (ಇಸಿಬಿ) ಅನುಮತಿ ಪಡೆದಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಣಾಮ ಇದೀಗ ರವಿಶಾಸ್ತ್ರಿ ಕೊರೋನಾ ಪಾಸಿಟಿವ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ. 

ಈ ವಿಷಯ ತಿಳಿಯುತ್ತಿದ್ದಂತೆ ಬಿಸಿಸಿಐ ಟೀಮ್ ಇಂಡಿಯಾ ನಾಯಕ ಹಾಗೂ ಕೋಚ್​ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೋನಾ ನಿಯಮವನ್ನು ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ವಿವರಣೆ ಕೇಳಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪ್ರತಿಯೊಬ್ಬ ಆಟಗಾರರಿಗೂ ಯಾವುದೇ ಕಾರಣಕ್ಕೂ ಹೊರಗೆ ಓಡಾಡದಂತೆ ತಾಕೀತು ಮಾಡಿದೆ. ಈ ಕಾರಣದಿಂದಾಗಿ ಇದೀಗ ಓವಲ್​ನಲ್ಲಿ 50 ವರ್ಷಗಳ ಬಳಿಕ ಗೆಲುವು ದಾಖಲಿಸಿದರೂ ಟೀಮ್ ಇಂಡಿಯಾ ಭರ್ಜರಿ ಪಾರ್ಟಿ ಮಾಡುವಂತಿಲ್ಲ.

ಇನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮದ ವೇಳೆ ಕೋಣೆಯು ಜನರಿಂದ ತುಂಬಿತ್ತು. ಈ ಸಮಯದಲ್ಲಿ, ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರುದರು. ಈ ಕಾರ್ಯಕ್ರಮದ ಫೋಟೋಗಳನ್ನು ಅಧಿಕಾರಿಯೊಬ್ಬರು ಬಿಸಿಸಿಐ ಜೊತೆ ಹಂಚಿಕೊಂಡಿದ್ದು, ಇದೀಗ ಮಂಡಳಿಯು ಈ ಬಗ್ಗೆ ತನಿಖೆ ನಡೆಸಲಿದೆ. ಇನ್ನು ಈ ಕಾರ್ಯಕ್ರಮದ ಬಳಿಕ ರವಿ ಶಾಸ್ತ್ರಿ ಕೊರೋನಾ ಪಾಸಿಟಿವ್ ಆಗಿದ್ದು, ಆ ಬಳಿಕ ಅವರ ಸಂಪರ್ಕದಲ್ಲಿದ್ದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಇದೀಗ ಇವರೆಲ್ಲರನ್ನೂ ಪತ್ಯೇಕವಾಗಿ ಇರಿಸಲಾಗಿದ್ದು, ಮ್ಯಾಚೆಂಸ್ಟರ್​ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್​ಗೆ ಕೋಚ್ ಸೇರಿದಂತೆ ಪ್ರಮುಖ ಸಿಬ್ಬಂದಿಗಳ ಸೇವೆ ಟೀಮ್ ಇಂಡಿಯಾಗೆ ಅಲಭ್ಯವಾಗಲಿದೆ.

ಆಂಗ್ಲ ಮಾಧ್ಯಮಗಳ ಸುದ್ದಿ ಪ್ರಕಾರ, ಟೀಮ್ ಇಂಡಿಯಾ ಈವೆಂಟ್‌ಗೆ ಸಂಬಂಧಿಸಿದಂತೆ ECB ಯಿಂದ ಯಾವುದೇ ಅನುಮೋದನೆಯನ್ನು ಪಡೆದಿರಲಿಲ್ಲ. ಈ ಘಟನೆ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಕೊರೋನಾ ನಿಯಮ ಉಲ್ಲಂಘನೆಯು ಸರಣಿ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಬಿಸಿಸಿಐ ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಹ್ಲಿ ಹಾಗೂ ರವಿ ಶಾಸ್ತ್ರಿ ಭಾಗವಹಿಸಿದ ಕಾರ್ಯಕ್ರಮ ಮಂಡಳಿಯಿಂದ ಆಯೋಜಿಸಲ್ಪಟ್ಟ ಅಧಿಕೃತ ಕಾರ್ಯಕ್ರಮವಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸರಣಿಯ ಮುಂಚಿತವಾಗಿ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಪತ್ರ ಬರೆದು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹಾಗೂ ಜನದಟ್ಟಣೆಯಲ್ಲಿ ಓಡಾಡದಂತೆ ಮನವಿ ಮಾಡಿದ್ದರು. ಇದೀಗ ಬಿಸಿಸಿಐ ಆದೇಶವನ್ನೇ ಗಾಳಿಗೆ ತೂರಿ ರವಿ ಶಾಸ್ತ್ರಿ ಹಾಗೂ ಕೊಹ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪರಿಣಾಮ ಶಾಸ್ತ್ರಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರುವ ಬಿಸಿಸಿಐ ಇಬ್ಬರಿಂದ ವಿವರಣೆ ಕೇಳಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಡುಕರ ಗಮನಕ್ಕೆ: ಪ್ರತಿದಿನ ಬಿಯರ್ ಕುಡಿಯುವುದು ಒಳ್ಳೆದಂತೆ

ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್

ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

(BCCI miffed at Ravi Shastri, Virat Kohli)

Click on your DTH Provider to Add TV9 Kannada