AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆನ್ ಸ್ಟೋಕ್ಸ್​ಗೆ ಕಣ್ಣು, ಮುಖಕ್ಕೆ ಗಂಭೀರ ಗಾಯ

Ben Stokes' Facial Injury: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕ್ರಿಕೆಟ್ ಆಡುವಾಗ ಮುಖಕ್ಕೆ ಚೆಂಡು ಬಡಿದು ಗಂಭೀರ ಗಾಯಗೊಂಡಿದ್ದಾರೆ. ಅವರ ಬಲ ಕಣ್ಣಿನ ಕೆಳಭಾಗಕ್ಕೆ ಗಾಯವಾಗಿದ್ದು, ಮುಖ ವಿರೂಪಗೊಂಡಿದೆ. ಕೂದಲೆಳೆ ಅಂತರದಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿಯಿಂದ ಪಾರಾಗಿದ್ದಾರೆ. ಈ ಹಿಂದೆಯೂ ಸ್ಟೋಕ್ಸ್ ಹಲವು ಗಾಯಗಳಿಂದ ಬಳಲಿದ್ದು, ಇದು ಅವರ ವೃತ್ತಿಜೀವನಕ್ಕೆ ದೊಡ್ಡ ಸವಾಲಾಗಿದೆ.

ಬೆನ್ ಸ್ಟೋಕ್ಸ್​ಗೆ ಕಣ್ಣು, ಮುಖಕ್ಕೆ ಗಂಭೀರ ಗಾಯ
Ben Stokes
ಪೃಥ್ವಿಶಂಕರ
|

Updated on:Feb 05, 2026 | 8:55 PM

Share

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಗಾಯದ ತೀವ್ರತೆ ಹೇಗಿದೆ ಎಂದರೇ ಸ್ಟೋಕ್ಸ್ ಅವರ ಮುಖವೇ ವಿರೂಪಗೊಂಡಿದೆ. ಬೆನ್ ಸ್ಟೋಕ್ಸ್ ಅವರ ಬಲ ಕಣ್ಣು ಹಾಗೂ ಕಣ್ಣಿನ ಕೆಳ ಭಾಗಕ್ಕೆ ಗಾಯವಾಗಿದೆ. ಸ್ವತಃ ಈ ವಿಚಾರವನ್ನು ಬೆನ್​ ಸ್ಟೋಕ್ಸ್ ಅವರೇ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಸ್ಟೋಕ್ಸ್ ಅವರ ಮುಖಕ್ಕೆ ಚೆಂಡು ಬಲವಾಗಿ ಬಡಿದಿದೆ ಎಂಬುದು ಸ್ಟೋಕ್ಸ್ ಅವರು ನೀಡಿರುವ ಮಾಹಿತಿಯಿಂದಲೇ ಖಚಿತವಾಗಿದೆ.

ಬೆನ್ ಸ್ಟೋಕ್ಸ್​ಗೆ ಗಂಭೀರ ಗಾಯ

ತಮ್ಮ ಗಾಯದ ಫೋಟೋವನ್ನು ಇನ್ಸ್​ಟಾಗ್ರಾಮ್​ ಫೋಸ್ಟ್​ನಲ್ಲಿ ಹಂಚಿಕೊಂಡಿರುವ ಸ್ಟೋಕ್ಸ್ ‘ನೀವು ಕ್ರಿಕೆಟ್ ಚೆಂಡಿನ ಸ್ಥಿತಿಯನ್ನು ಸಹ ಪರಿಶೀಲಿಸಬೇಕು’ ಎಂದು ಬರೆದಿದ್ದಾರೆ. ಸ್ಟೋಕ್ಸ್ ಕ್ರಿಕೆಟ್ ಆಡುವ ಸಮಯದಲ್ಲಿ ಈ ಗಾಯಕ್ಕೆ ತುತ್ತಾಗಿದ್ದಾರೆ ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ. ಬೆನ್ ಸ್ಟೋಕ್ಸ್ ಅವರ ಕಣ್ಣಿನ ಕೆಳಗೆ ರಕ್ತ ಹೆಪ್ಪುಗಟ್ಟಿರುವುದನ್ನು ಮತ್ತು ಅವರ ಕೆನ್ನೆಯ ಬಳಿ ಕೆಂಪು ಗಲೆ ಇರುವುದನ್ನು ಕಾಣಬಹುದು. ಸ್ಟೋಕ್ಸ್ ಅವರ ಮೂಗಿನ ಕೆಳಗೂ ಗಾಯ ಆಗಿದೆ.

ಗಾಯದ ಸ್ಥಿತಿಯನ್ನು ನೋಡಿದರೆ ಸ್ಟೋಕ್ಸ್, ಕೂದಲೆಳೆ ಅಂತರದಿಂದ ದೊಡ್ಡ ಅವಘಡದಿಂದ ಪಾರಾಗಿದ್ದಾರೆ ಎನ್ನಬಹುದು. ಒಂದು ವೇಳೆ ಚೆಂಡು ಇನ್ನು ಸ್ವಲ್ಪ ಮೇಲ್ಬಾಗಕ್ಕೆ ಬಡಿದಿದ್ದರೆ, ಅವರ ಕಣ್ಣಿಗೆ ಗಂಭೀರ ಗಾಯವಾಗುತ್ತಿತ್ತು. ಇದರಿಂದ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದರು. ಇದರಿಂದ ಅವರ ವೃತ್ತಿಜೀವನ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. ಆದರೆ ಸಧ್ಯದ ಪರಿಸ್ಥಿತಿ ನೋಡಿದರೆ, ಸ್ಟೋಕ್ಸ್ ಗಂಡಾಂತರದಿಂದ ಪಾರಾಗಿದ್ದಾರೆ ಎನ್ನಬಹುದು.

ಈ ಹಿಂದೆಯೂ ಗಾಯಕ್ಕೆ ತುತ್ತಾಗಿದ್ದ ಸ್ಟೋಕ್ಸ್

ಬೆನ್ ಸ್ಟೋಕ್ಸ್ ಈ ರೀತಿಯ ಗಾಯಕ್ಕೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಗಂಭೀರ ಗಾಯಗಳಿಂದ ಬಳಲಿದ್ದರು. 2014 ರಲ್ಲಿ, ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಶೂನ್ಯಕ್ಕೆ ಔಟಾಗಿದ್ದಕ್ಕೆ ತಾಳ್ಮೆ ಕಳೆದುಕೊಂಡಿದ್ದ ಸ್ಟೋಕ್ಸ್ ಡ್ರೆಸ್ಸಿಂಗ್ ರೂಮ್ ಲಾಕರ್‌ಗೆ ತಮ್ಮ ಬಲಗೈನಿಂದ ಗುದ್ದಿದ್ದರು. ಇದರಿಂದ ಅವರ ಬಲ ಮಣಿಕಟ್ಟು ಮುರಿದುಕೊಂಡಿತು. ಇದರಿಂದಾಗಿ ಅವರು ಮೂರು ತಿಂಗಳ ಕಾಲ ಆಟದಿಂದ ಹೊರಗುಳಿಯಬೇಕಾಯಿತು. ಜೊತೆಗೆ 2014 ರ ಟಿ20 ವಿಶ್ವಕಪ್​ನಿಂದಲೂ ಹೊರಬಿದ್ದಿದ್ದರು.

2021 ರಲ್ಲಿಯೂ ಸ್ಟೋಕ್ಸ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. 2023-24 ರ ದಿ ಹಂಡ್ರೆಡ್ ಲೀಗ್​ನಲ್ಲಿಯೂ ಸ್ಟೋಕ್ಸ್ ಎಡ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. 2025 ರಲ್ಲಿ ಅವರಿಗೆ ಮತ್ತೆ ಅದೇ ಗಾಯಕ್ಕೆ ತುತ್ತಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಮೂರು ತಿಂಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದರು. 2025 ರಲ್ಲಿ ಭುಜದ ಗಾಯದಿಂದ ಬಳಲುತ್ತಿದ್ದ ಸ್ಟೋಕ್ಸ್ ಭಾರತದ ವಿರುದ್ಧ ಐದನೇ ಟೆಸ್ಟ್​ನಿಂದ ಹೊರಬಿದ್ದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Thu, 5 February 26

ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ
ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ
ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​​ಸಿಎಲ್​​​​ನ CPRO ಹೇಳಿದ್ದಿಷ್ಟು
ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​​ಸಿಎಲ್​​​​ನ CPRO ಹೇಳಿದ್ದಿಷ್ಟು
ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ
ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ಲಂಚ ನೀಡಲು ಹಣವಿಲ್ಲದ್ದಕ್ಕೆ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ
ಲಂಚ ನೀಡಲು ಹಣವಿಲ್ಲದ್ದಕ್ಕೆ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ
ಶುಲ್ಕ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
ಶುಲ್ಕ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕರ್ನಾಟಕ ಸೇನಾ ಪಡೆ
ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕರ್ನಾಟಕ ಸೇನಾ ಪಡೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!