AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Panchami 2026: ನಾಗರ ಪಂಚಮಿಯಂದು ಜೀವಂತ ಹಾವಿಗೆ ಹಾಲು ಎರೆಯುವುದು ಶಾಸ್ತ್ರ ಸಮ್ಮತವೇ?

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಗುತ್ತದೆ. ಈ ಪವಿತ್ರ ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ, ನಾಗದೇವತೆಗೆ ಹಾಲು ಅರ್ಪಿಸುವ ಸಂಪ್ರದಾಯದ ಹಿಂದಿನ ಧಾರ್ಮಿಕ ಪ್ರಾಮುಖ್ಯತೆ, ಶಾಸ್ತ್ರೋಕ್ತ ವಿಧಾನಗಳು ಹಾಗೂ ವನ್ಯಜೀವಿ ವಿಜ್ಞಾನಿಗಳು ನೀಡುವ ಎಚ್ಚರಿಕೆಯ ಕುರಿತಾದ ಸಮಗ್ರ ವಿಶೇಷ ವರದಿ.

Naga Panchami 2026: ನಾಗರ ಪಂಚಮಿಯಂದು ಜೀವಂತ ಹಾವಿಗೆ ಹಾಲು ಎರೆಯುವುದು ಶಾಸ್ತ್ರ ಸಮ್ಮತವೇ?
Naga Panchami
ಅಕ್ಷತಾ ವರ್ಕಾಡಿ
|

Updated on: Aug 04, 2026 | 8:37 AM

Share

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, 2026 ರಲ್ಲಿ ಆಗಸ್ಟ್ 17 ರಂದು ಸೋಮವಾರ ನಾಗರ ಪಂಚಮಿ ಬಂದಿದೆ. ಕುಟುಂಬದ ಕ್ಷೇಮ, ಅಭಿವೃದ್ಧಿ, ಸಂತಾನ ಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಭಕ್ತರು ಈ ದಿನ ನಾಗ ದೇವತೆಯನ್ನು ಪೂಜಿಸುತ್ತಾರೆ.

ನಾಗ ಆರಾಧನೆಯ ಆಧ್ಯಾತ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ:

ಹಿಂದೂ ಸಂಪ್ರದಾಯದಲ್ಲಿ ನಾಗ ದೇವತೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಹಾವುಗಳು ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದವುಗಳು. ಶಿವನು ವಾಸುಕಿ ನಾಗನನ್ನು ತನ್ನ ಕೊರಳಿನಲ್ಲಿ ಧರಿಸಿರುವುದು ಪ್ರಕೃತಿಯ ಶಕ್ತಿ, ರಕ್ಷಣೆ ಮತ್ತು ಸಮತೋಲನದ ಸಂಕೇತವಾಗಿದೆ. ನಾಗರ ಪಂಚಮಿಯಂದು ಭಕ್ತರು ನಾಗ ದೇವತೆಯ ವಿಗ್ರಹ, ನಾಗಶಿಲೆ ಅಥವಾ ಶಿವಲಿಂಗಕ್ಕೆ ಹಾಲು, ನೀರು, ಅರಿಶಿನ-ಕುಂಕುಮ, ಕುಶ ಹುಲ್ಲು ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಹೀಗೆ ಮಾಡುವುದರಿಂದ ನಾಗ ದೇವತೆಯ ಆಶೀರ್ವಾದ ದೊರೆತು, ಕಾಳಸರ್ಪ ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಜೀವಂತ ಹಾವಿಗೆ ಹಾಲು ಕೊಡುವುದು ಶಾಸ್ತ್ರ ಸಮ್ಮತವೇ?

ದೇಶದ ಹಲವು ಭಾಗಗಳಲ್ಲಿ ನಾಗರ ಪಂಚಮಿಯಂದು ಜೀವಂತ ಹಾವುಗಳಿಗೆ ಹಾಲು ಕುಡಿಸುವ ಅಥವಾ ಹಾಲು ಎರೆಯುವ ಪದ್ಧತಿ ಕಂಡುಬರುತ್ತದೆ. ಆದರೆ ಶಾಸ್ತ್ರಗಳು ಮತ್ತು ಪುರಾಣಗಳು ನಾಗದೇವತೆಯ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರೂ, ಜೀವಂತ ಹಾವುಗಳಿಗೆ ಬಲವಂತವಾಗಿ ಹಾಲು ಅರ್ಪಿಸಬೇಕೆಂದು ಎಲ್ಲಿಯೂ ಸ್ಪಷ್ಟ ಸೂಚನೆ ನೀಡಿಲ್ಲ. ವಿದ್ವಾಂಸರ ಪ್ರಕಾರ, ಹಾಲು ಎಂಬುದು ನಾಗಶಿಲೆ, ನಾಗದೇವತೆಯ ಮೂರ್ತಿ ಅಥವಾ ಶಿವಲಿಂಗಕ್ಕೆ ಅರ್ಪಿಸುವ ಭಕ್ತಿಪೂರ್ವಕ ‘ನೈವೇದ್ಯ’ವೇ ಹೊರತು, ಜೀವಂತ ಸರೀಸೃಪಗಳಿಗೆ ನೀಡುವ ಆಹಾರವಲ್ಲ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ವಿಜ್ಞಾನ ಏನು ಹೇಳುತ್ತದೆ? ಹಾವುಗಳು ನಿಜಕ್ಕೂ ಹಾಲು ಕುಡಿಯುತ್ತವೆಯೇ?

ವನ್ಯಜೀವಿ ತಜ್ಞರ ಪ್ರಕಾರ ಹಾವುಗಳು ಸ್ವಾಭಾವಿಕವಾಗಿ ಶೀತಲ ರಕ್ತದ, ಮಾಂಸಾಹಾರಿ ಜೀವಿಗಳಾಗಿವೆ. ಅವುಗಳ ನೈಸರ್ಗಿಕ ಆಹಾರ ಪದ್ಧತಿಯಲ್ಲಿ ಹಾಲಿಗೆ ಯಾವುದೇ ಸ್ಥಾನವಿಲ್ಲ ಮತ್ತು ಹಾಲಿನಲ್ಲಿರುವ ಲ್ಯಾಕ್ಟೋಸ್ ಜೀರ್ಣಿಸಿಕೊಳ್ಳುವ ಶಕ್ತಿ ಅವುಗಳಿಗಿರುವುದಿಲ್ಲ. ಹಬ್ಬದ ಸಮಯದಲ್ಲಿ ಹಾವಾಡಿಗರು ಹಾವುಗಳನ್ನು ಹಲವು ದಿನಗಳ ಕಾಲ ನೀರು ನೀಡದೆ ಸೆರೆಯಲ್ಲಿಟ್ಟುರುತ್ತಾರೆ. ತೀವ್ರ ಬಾಯಾರಿಕೆ ಮತ್ತು ಒತ್ತಡದ ಕಾರಣದಿಂದ ಜೀವ ಉಳಿಸಿಕೊಳ್ಳಲು ಹಾವುಗಳು ಎದುರಿಗಿರುವ ಹಾಲನ್ನು ನೀರೆಂದು ಭಾವಿಸಿ ಕುಡಿಯುತ್ತವೆ. ಆದರೆ ಇದು ಅವುಗಳ ಶ್ವಾಸಕೋಶ ಮತ್ತು ಜಠರಕ್ಕೆ ತೀವ್ರ ಹಾನಿಯನ್ನುಂಟುಮಾಡಿ, ಅವುಗಳ ಸಾವಿಗೆ ಕಾರಣವಾಗಬಹುದು.

ಭಕ್ತಿಯ ಜೊತೆಗೆ ಪ್ರಕೃತಿಯ ಸಂರಕ್ಷಣೆಯೂ ಅತ್ಯಗತ್ಯ:

ನಾಗರ ಪಂಚಮಿಯು ಪ್ರಕೃತಿ ಹಾಗೂ ಜೀವರಾಶಿಯನ್ನು ಗೌರವಿಸುವ ಸುಂದರ ಹಬ್ಬವಾಗಿದೆ. ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಜೀವಂತ ಹಾವುಗಳನ್ನು ಹಿಡಿದು ಕಿರುಕುಳ ನೀಡುವುದಾಗಲಿ ಅಥವಾ ಅವುಗಳ ಜೀವಕ್ಕೆ ಅಪಾಯ ತರುವುದಾಗಲಿ ಸರಿಯಾದ ಅಭ್ಯಾಸವಲ್ಲ. ನಾಗದೇವತೆಯ ಸಂಕೇತವಾಗಿ ನಾಗಶಿಲೆ, ಮಣ್ಣಿನ ನಾಗನ ಮೂರ್ತಿ ಅಥವಾ ಶಿವಲಿಂಗಕ್ಕೆ ಹಾಲು ಅರ್ಪಿಸಿ ಪೂಜಿಸುವ ಮೂಲಕ ಧಾರ್ಮಿಕ ಸಂಪ್ರದಾಯವನ್ನೂ ಗೌರವಿಸಬಹುದು ಮತ್ತು ವನ್ಯಜೀವಿಗಳನ್ನು ರಕ್ಷಿಸಿ ಪ್ರಕೃತಿಯ ಸಮತೋಲನವನ್ನೂ ಕಾಯ್ದುಕೊಳ್ಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್