CSK vs KKR IPL 2026: ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಸಿಎಸ್ಕೆ
CSK vs KKR, IPL 2026: ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸಿಎಸ್ಕೆ ತಂಡ 21 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ ಕೆಕೆಆರ್ ತಂಡ ಗೆದ್ದಿರುವುದು 11 ಪಂದ್ಯಗಳಲ್ಲಿ ಮಾತ್ರ.

ಇಂಡಿಯನ್ ಪ್ರೀಮಿಯರ್ ಲೀಗ್ನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 192 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡ 20 ಓವರ್ಗಳಲ್ಲಿ 160 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸಿಎಸ್ಕೆ ತಂಡ 32 ರನ್ಗಳ ಜಯ ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್.
ಕೊಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
LIVE NEWS & UPDATES
-
CSK vs KKR IPL 2026 Live Score: ಸಿಎಸ್ಕೆ ತಂಡಕ್ಕೆ ಜಯ
- ಕೆಕೆಆರ್ ವಿರುದ್ಧ 32 ರನ್ಗಳ ಜಯ ಸಾಧಿಸಿದ ಸಿಎಸ್ಕೆ
- ಮೊದಲ ಬ್ಯಾಟ್ ಮಾಡಿ 20 ಓವರ್ಗಳಲ್ಲಿ 192 ರನ್ ಕಲೆಹಾಕಿದ್ದ ಸಿಎಸ್ಕೆ
- 193 ರನ್ಗಳ ಗುರಿ ಬೆನ್ನತ್ತಿದ ಕೆಕೆಆರ್ 20 ಓವರ್ಗಳಲ್ಲಿ ಗಳಿಸಿದ್ದು 160 ರನ್ಗಳು ಮಾತ್ರ.
- ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೂಪರ್ ಜಯ
-
CSK vs KKR IPL 2026 Live Score: 62 ರನ್ಗಳ ಅವಶಕ್ಯತೆ
ಕೊನೆಯ 18 ಎಸೆತಗಳಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು 62 ರನ್ಗಳ ಅವಶ್ಯಕತೆ.
ಸೋಲಿನ ಸುಳಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ.
ಗೆಲುವಿನತ್ತ ಸಾಗಿದ ಚೆನ್ನೈ ಸೂಪರ್ ಕಿಂಗ್ಸ್,
ಕ್ರೀಸ್ನಲ್ಲಿ ರೋವ್ಮನ್ ಪೊವೆಲ್ ಹಾಗೂ ರಮಣ್ದೀಪ್ ಸಿಂಗ್ ಬ್ಯಾಟಿಂಗ್.
-
-
CSK vs KKR IPL 2026 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳಲ್ಲಿ 107 ರನ್ ಕಲೆಹಾಕಿರುವ ಕೊಲ್ಕತ್ತಾ ನೈಟ್ ರೈಡರ್ಸ್
ಕೊನೆಯ 30 ಎಸೆತಗಳಲ್ಲಿ 86 ರನ್ಗಳ ಗುರಿ
ಕ್ರೀಸ್ನಲ್ಲಿ ರೋವ್ಮನ್ ಪೊವೆಲ್ ಹಾಗೂ ರಮಣ್ದೀಪ್ ಸಿಂಗ್ ಬ್ಯಾಟಿಂಗ್.
-
CSK vs KKR IPL 2026 Live Score: ಕೆಕೆಆರ್ 6ನೇ ವಿಕೆಟ್ ಪತನ
ನೂರ್ ಅಹ್ಮದ್ ಎಸೆದ 13ನೇ ಓವರ್ನ 5ನೇ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ರಿಂಕು ಸಿಂಗ್ (6).
90 ರನ್ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿರುವ ಕೆಕೆಆರ್.
ಕ್ರೀಸ್ನಲ್ಲಿ ರೋವ್ಮನ್ ಪೊವೆಲ್ ಹಾಗೂ ರಮಣ್ದೀಪ್ ಸಿಂಗ್ ಬ್ಯಾಟಿಂಗ್.
-
CSK vs KKR IPL 2026 Live Score: ಕ್ಲೀನ್ ಬೌಲ್ಡ್
ನೂರ್ ಅಹ್ಮದ್ ಎಸೆದ 11ನೇ ಓವರ್ನ ಕೊನೆಯ ಎಸೆತದಲ್ಲಿ ಕ್ಯಾಮರೋನ್ ಗ್ರೀನ್ ಕ್ಲೀನ್ ಬೌಲ್ಡ್.
ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿ ನಿರ್ಗಮಿಸಿದ ಗ್ರೀನ್.
11 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 85 ರನ್ ಕಲೆಹಾಕಿರುವ ಕೆಕೆಆರ್.
ಕ್ರೀಸ್ನಲ್ಲಿ ರೋವ್ಮನ್ ಪೊವೆಲ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.
-
-
CSK vs KKR IPL 2026 Live Score: ರಹಾನೆ ಔಟ್
ನೂರ್ ಅಹ್ಮದ್ ಎಸೆದ 11ನೇ ಓವರ್ನ 5ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಅಜಿಂಕ್ಯ ರಹಾನೆ (28).
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 4ನೇ ಯಶಸ್ಸು.
ಕ್ರೀಸ್ನಲ್ಲಿ ರಿಂಕು ಸಿಂಗ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್.
-
CSK vs KKR IPL 2026 Live Score: ಕೆಕೆಆರ್ 3ನೇ ವಿಕೆಟ್ ಪತನ
ಅಕಿಲ್ ಹುಸೈನ್ ಎಸೆದ 10ನೇ ಓವರ್ನ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ರಘುವಂಶಿ (27).
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೂರನೇ ಯಶಸ್ಸು.
ಕ್ರೀಸ್ನಲ್ಲಿ ಅಜಿಂಕ್ಯ ರಹಾನೆ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.
-
CSK vs KKR IPL 2026 Live Score: ಒಂದೇ ಓವರ್ನಲ್ಲಿ 2 ಸಿಕ್ಸ್
ಗುರ್ಜಪ್ನೀತ್ ಸಿಂಗ್ ಎಸೆದ 9ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದ ರಹಾನೆ.
5ನೇ ಎಸೆತದಲ್ಲಿ ಮತ್ತೊಂದು ಫೋರ್.
9 ಓವರ್ಗಳ ಮುಕ್ತಾಯದ ವೇಳೆಗೆ ಕೆಕೆಆರ್ ತಂಡದ ಸ್ಕೋರ್- 77/2
ಕ್ರೀಸ್ನಲ್ಲಿ ಅಜಿಂಕ್ಯ ರಹಾನೆ ಮತ್ತು ರಘುವಂಶಿ ಬ್ಯಾಟಿಂಗ್.
-
CSK vs KKR IPL 2026 Live Score: ಪವರ್ಪ್ಲೇ ಮುಕ್ತಾಯ
- ಪವರ್ಪ್ಲೇನಲ್ಲಿ ಕೇವಲ 36 ರನ್ ಕಲೆಹಾಕಿದ ಕೆಕೆಆರ್
- ಮೊದಲ 6 ಓವರ್ಗಳಲ್ಲಿ ಕೇವಲ 36 ರನ್ ನೀಡಿ 2 ವಿಕೆಟ್ ಕಬಳಿಸಿದ ಸಿಎಸ್ಕೆ
- ಫಿನ್ ಅಲೆನ್ (1) ಹಾಗೂ ಸುನಿಲ್ ನರೈನ್ (24) ವಿಕೆಟ್ ಕಳೆದುಕೊಂಡ ಕೆಕೆಆರ್
- ಕೆಕೆಆರ್ ತಂಡಕ್ಕೆ 193 ರನ್ಗಳ ಗುರಿ ನೀಡಿರುವ ಸಿಎಸ್ಕೆ
-
CSK vs KKR IPL 2026 Live Score: ಕೆಕೆಆರ್ ಎರಡನೇ ವಿಕೆಟ್ ಪತನ
ಖಲೀಲ್ ಅಹ್ಮದ್ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದ ಸುನಿಲ್ ನರೈನ್ (24).
ಎರಡನೇ ವಿಕೆಟ್ ಕಳೆದುಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್.
ಕ್ರೀಸ್ನಲ್ಲಿ ಅಂಗ್ಕ್ರಿಶ್ ರಘುವಂಶಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್.
-
CSK vs KKR IPL 2026 Live Score: ಕ್ಯಾಚ್ ಡ್ರಾಪ್
ಅನ್ಶುಲ್ ಕಂಬೋಜ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಸುನಿಲ್ ನರೈನ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲಿದ ರುತುರಾಜ್ ಗಾಯಕ್ವಾಡ್.
4 ಓವರ್ಗಳಲ್ಲಿ 28 ರನ್ ಕಲೆಹಾಕಿರುವ ಕೊಲ್ಕತ್ತಾ ನೈಟ್ ರೈಡರ್ಸ್.
ಕ್ರೀಸ್ನಲ್ಲಿ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.
-
CSK vs KKR IPL 2026 Live Score: ಕೆಕೆಆರ್ ಮೊದಲ ವಿಕೆಟ್ ಪತನ
ಅನ್ಶುಲ್ ಕಂಬೋಜ್ ಎಸೆದ 2ನೇ ಓವರ್ನ 3ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಫಿನ್ ಅಲೆನ್ (1).
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೊದಲ ವಿಕೆಟ್ ಪತನ.
ಕ್ರೀಸ್ನಲ್ಲಿ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.
2 ಓವರ್ಗಳಲ್ಲಿ 14 ರನ್ ಕಲೆಹಾಕಿ ಒಂದು ವಿಕೆಟ್ ಕಳೆದುಕೊಂಡ ಕೆಕೆಆರ್.
-
CSK vs KKR IPL 2026 Live Score: ಮೊದಲ ಓವರ್-ಮೊದಲ ಸಿಕ್ಸ್
- ಖಲೀಲ್ ಅಹ್ಮದ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲಿ 1 ರನ್ ಕಲೆಹಾಕಿದ ಸುನಿಲ್ ನರೈನ್
- ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ
- ಮೂರನೇ ಎಸೆತವನ್ನು ಡಾಟ್ ಮಾಡಿದ ಸುನಿಲ್ ನರೈನ್
- ನಾಲ್ಕನೇ ಎಸೆತದಲ್ಲೂ ಯಾವುದೇ ರನ್ ಇಲ್ಲ.
- ಐದನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ನರೈನ್
- ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ.
ಮೊದಲ ಓವರ್ನಲ್ಲಿ 7 ರನ್ ಕಲೆಹಾಕಿದ ಕೆಕೆಆರ್.
-
CSK vs KKR IPL 2026 Live Score: ಕೆಕೆಆರ್ ಇನಿಂಗ್ಸ್ ಆರಂಭ
- ಕೆಕೆಆರ್ ಆರಂಭಿಕರು: ಫಿನ್ ಅಲೆನ್, ಸುನಿಲ್ ನರೈನ್
- ಸಿಎಸ್ಕೆ ಪರ ಮೊದಲ ಓವರ್: ಖಲೀಲ್ ಅಹ್ಮದ್
- ಕೆಕೆಆರ್ ತಂಡಕ್ಕೆ 193 ರನ್ಗಳ ಗುರಿ ನೀಡಿರುವ ಸಿಎಸ್ಕೆ
-
CSK vs KKR IPL 2026 Live Score: ಸಿಎಸ್ಕೆ ಇನಿಂಗ್ಸ್ ಅಂತ್ಯ
- 20 ಓವರ್ಗಳಲ್ಲಿ 192 ರನ್ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್
- ಸಿಎಸ್ಕೆ ಪರ 32 ಎಸೆತಗಳಲ್ಲಿ 48 ರನ್ ಬಾರಿಸಿದ ಸಂಜು ಸ್ಯಾಮ್ಸನ್.
- ಕೆಕೆಆರ್ ಪರ 2 ವಿಕೆಟ್ ಕಬಳಿಸಿದ ಕಾರ್ತಿಕ್ ತ್ಯಾಗಿ
- ಕೆಕೆಆರ್ ತಂಡಕ್ಕೆ 20 ಓವರ್ಗಳಲ್ಲಿ 193 ರನ್ಗಳ ಗುರಿ
-
CSK vs KKR IPL 2026 Live Score: ಸಿಎಸ್ಕೆ 5ನೇ ವಿಕೆಟ್ ಪತನ
ಕಾರ್ತಿಕ್ ತ್ಯಾಗಿ ಎಸೆದ 18ನೇ ಓವರ್ನ 3ನೇ ಎಸೆದಲ್ಲಿ ಸುಲಭ ಕ್ಯಾಚ್ ನೀಡಿದ ಡೆವಾಲ್ಡ್ ಬ್ರೆವಿಸ್ (41).
ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ಜೇಮಿ ಓವರ್ಟನ್ ಬ್ಯಾಟಿಂಗ್.
18 ಓವರ್ಗಳಲ್ಲಿ 175 ರನ್ ಕಲೆಹಾಕಿರುವ ಚೆನ್ನೈ ಸೂಪರ್ ಕಿಂಗ್ಸ್.
-
CSK vs KKR IPL 2026 Live Score: ಸಿಎಸ್ಕೆ 4ನೇ ವಿಕೆಟ್ ಪತನ
ಸುನಿಲ್ ನರೈನ್ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲೇ ಬೌಲ್ಡ್ ಆದ ಸರ್ಫರಾಝ್ ಖಾನ್ (23).
ಕ್ರೀಸ್ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಶಿವಂ ದುಬೆ ಬ್ಯಾಟಿಂಗ್.
17 ಓವರ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 169 ರನ್ಗಳು.
-
CSK vs KKR IPL 2026 Live Score: ಸರ್ಫು ಸಿಕ್ಸ್
ವೈಭವ್ ಅರೋರ ಎಸೆದ 16ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸರ್ಫರಾಝ್.
ಸರ್ಫರಾಝ್ ಸಿಕ್ಸರ್ನೊಂದಿಗೆ ಸಿಎಸ್ಕೆ ತಂಡದ ಸ್ಕೋರ್ 16 ಓವರ್ಗಳಲ್ಲಿ 163 ರನ್ಗಳು.
ಕ್ರೀಸ್ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಸರ್ಫರಾಝ್ ಬ್ಯಾಟಿಂಗ್.
-
CSK vs KKR IPL 2026 Live Score: 14ನೇ ಓವರ್ನಲ್ಲಿ 15 ರನ್
ವರುಣ್ ಚಕ್ರವರ್ತಿ ಎಸೆದ 14ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸರ್ಫರಾಝ್.
ಕೊನೆಯ ಎರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಡೆವಾಲ್ಡ್ ಬ್ರೆವಿಸ್.
14 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 136 ರನ್ ಕಲೆಹಾಕಿದ ಸಿಎಸ್ಕೆ.
-
CSK vs KKR IPL 2026 Live Score: ಸಿಕ್ – ಬೌಲ್ಡ್
ಕಾರ್ತಿಕ್ ತ್ಯಾಗಿ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಸಂಜು ಸ್ಯಾಮ್ಸನ್.
ಎರಡನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ನ (48) ಕ್ಲೀನ್ ಬೌಲ್ಡ್ ಮಾಡಿದ ಕಾರ್ತಿಕ್ ತ್ಯಾಗಿ.
ಕ್ರೀಸ್ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಸರ್ಫರಾಝ್ ಖಾನ್ ಬ್ಯಾಟಿಂಗ್.
12 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 118 ರನ್ ಕಲೆಹಾಕಿರುವ ಸಿಎಸ್ಕೆ.
-
CSK vs KKR IPL 2026 Live Score: 10 ಓವರ್ ಮುಕ್ತಾಯ
ಕಾರ್ತಿಕ್ ತ್ಯಾಗಿ ಎಸೆದ 10ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಸಂಜು.
10 ಓವರ್ಗಳ ಮುಕ್ತಾಯದ ವೇಳೆಗೆ ಸಿಎಸ್ಕೆ ತಂಡದ ಸ್ಕೋರ್- 102/2
ಕ್ರೀಸ್ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್.
-
CSK vs KKR IPL 2026 Live Score: ಸಂಜು ಸ್ಯಾಮ್ಸನ್ ಫೋರ್
ವರುಣ್ ಚಕ್ರವರ್ತಿ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್.
8 ಓವರ್ಗಳ ಮುಕ್ತಾಯದ ವೇಳೆಗೆ ಸಿಎಸ್ಕೆ ಸ್ಕೋರ್ – 89/2
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್
-
CSK vs KKR IPL 2026 Live Score: ಪವರ್ಪ್ಲೇನಲ್ಲಿ ಸಿಎಸ್ಕೆ ಪವರ್ಫುಲ್
- ವೈಭವ್ ಅರೋರ ಎಸೆದ 6ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಆಯುಷ್.
- ಕೊನೆಯ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಆಯುಷ್ (38)
- 6 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 72 ರನ್ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್
- ರುತುರಾಜ್ ಗಾಯಕ್ವಾಡ್ (7), ಆಯುಷ್ (38) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಕೆಕೆಆರ್.
- ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್
-
CSK vs KKR IPL 2026 Live Score: ಸಿಕ್ಸರ್ ಸಂಜು
ಅನುಕುಲ್ ರಾಯ್ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲೇ ಸ್ಟೈಟ್ ಹಿಟ್ ಸಿಕ್ಸ್ ಬಾರಿಸಿದ ಸಂಜು ಸ್ಯಾಮ್ಸನ್.
ಐದು ಓವರ್ಗಳಲ್ಲಿ 60 ರನ್ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್.
ಕ್ರೀಸ್ನಲ್ಲಿ ಆಯುಷ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್.
-
CSK vs KKR IPL 2026 Live Score: ಆಯುಷ್ ಅಬ್ಬರ
ಕ್ಯಾಮರೋನ್ ಗ್ರೀನ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಆಯುಷ್.
ನಾಲ್ಕನೇ ಎಸೆತದಲ್ಲಿ ಆಯುಷ್ ಬ್ಯಾಟ್ನಿಂದ ಎಕ್ಸ್ಟ್ರಾ ಕವರ್ನತ್ತ ಮತ್ತೊಂದು ಫೋರ್.
ಐದನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಆಯುಷ್ ಮ್ಹಾತ್ರೆ.
ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಸಿಕ್ಸ್ ಬಾರಿಸಿದ ಯುವ ದಾಂಡಿಗ.
ಕ್ರೀಸ್ನಲ್ಲಿ ಆಯುಷ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್.
4 ಓವರ್ಗಳ ಮುಕ್ತಾಯದ ವೇಳೆಗೆ ಸಿಎಸ್ಕೆ ತಂಡದ ಸ್ಕೋರ್ 52/1
-
CSK vs KKR IPL 2026 Live Score: ಬೌಲಿಂಗ್ ಚೇಂಜ್: ಮೊದಲ ವಿಕೆಟ್
ಸ್ಪಿನ್ನರ್ ಅನುಕುಲ್ ರಾಯ್ಗೆ ಚೆಂಡು ನೀಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ.
ಮೂರನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರುತುರಾಜ್ (7). ಸಿಎಸ್ಕೆ ತಂಡದ ಮೊದಲ ವಿಕೆಟ್ ಪತನ.
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಆಯುಷ್ ಮ್ಹಾತ್ರೆ ಬ್ಯಾಟಿಂಗ್.
3 ಓವರ್ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 31 ರನ್ ಕಲೆಹಾಕಿದ ಸಿಎಸ್ಕೆ.
-
CSK vs KKR IPL 2026 Live Score: ಉತ್ತಮ ಆರಂಭ
ಕ್ಯಾಮರೋನ್ ಗ್ರೀನ್ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್.
2 ಓವರ್ಗಳ ಮುಕ್ತಾಯದ ವೇಳೆಗೆ ಸಿಎಸ್ಕೆ ತಂಡದ ಸ್ಕೋರ್ 24
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್.
-
CSK vs KKR IPL 2026 Live Score: ಹ್ಯಾಟ್ರಿಕ್ ಫೋರ್
- ವೈಭವ್ ಅರೋರ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನತ್ತ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್.
- ಎರಡನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಸಿಡಿಸಿದ ಸಂಜು ಸ್ಯಾಮ್ಸನ್.
- ಮೂರನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್ನಿಂದ ಸ್ಲಿಪ್ ಮೂಲಕ ಮೂರನೇ ಫೋರ್.
- ನಾಲ್ಕನೇ ಎಸೆತದಲ್ಲಿ ಒಂದು ರನ್.
- ಐದನೇ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ 1 ರನ್.
- ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ.
ಮೊದಲ ಓವರ್ನಲ್ಲಿ 14 ರನ್ ಕಲೆಹಾಕಿದ ಸಿಎಸ್ಕೆ.
-
CSK vs KKR IPL 2026 Live Score: ಸಿಎಸ್ಕೆ ಇನಿಂಗ್ಸ್ ಆರಂಭ
- ಸಿಎಸ್ಕೆ ಪರ ಆರಂಭಿಕರು: ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್
- ಕೆಕೆಆರ್ ಪರ ಮೊದಲ ಓವರ್: ವೈಭವ್ ಅರೋರ
- ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಕೆಕೆಆರ್
-
CSK vs KKR IPL 2026 Live Score: ಟಾಸ್ ವಿಡಿಯೋ
🚨 Toss 🚨@KKRiders won the toss and elected to bowl first against @ChennaiIPL in Chennai.
Updates ▶️ https://t.co/jWkXVCPxj5#TATAIPL | #KhelBindaas | #CSKvKKR pic.twitter.com/W8VJ0DBKL7
— IndianPremierLeague (@IPL) April 14, 2026
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಸಿಎಸ್ಕೆ ಮೊದಲು ಬ್ಯಾಟ್ ಮಾಡಲಿದೆ.
-
CSK vs KKR IPL 2026 Live Score: ಕೆಕೆಆರ್ ಪ್ಲೇಯಿಂಗ್ 11
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
-
CSK vs KKR IPL 2026 Live Score: ಸಿಎಸ್ಕೆ ಪ್ಲೇಯಿಂಗ್ ಇಲೆವೆನ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್.
-
CSK vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಸಿಎಸ್ಕೆ ತಂಡವು ಮೊದಲು ಬ್ಯಾಟ್ ಮಾಡಲಿದೆ.
-
CSK vs KKR IPL 2026 Live Score: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.
-
CSK vs KKR IPL 2026 Live Score: ಚೆನ್ನೈ ಸೂಪರ್ ಕಿಂಗ್ಸ್ ತಂಡ
-
CSK vs KKR IPL 2026 Live Score: ರೈಡರ್ಸ್ vs ಕಿಂಗ್ಸ್
Momentum on the yellow side 💛 Hunger in the purple camp 💜
It’s time for the battle of 𝗦𝗨𝗣𝗘𝗥 𝗞𝗜𝗡𝗚𝗦 🆚 𝗞𝗡𝗜𝗚𝗛𝗧𝗦#TATAIPL | #KhelBindaas | #CSKvKKR | @ChennaiIPL | @KKRiders pic.twitter.com/rqTJb22P4r
— IndianPremierLeague (@IPL) April 14, 2026
-
CSK vs KKR IPL 2026 Live Score: ಐಪಿಎಲ್ನ 21 ಪಂದ್ಯಕ್ಕೆ ವೇದಿಕೆ ಸಜ್ಜು
- ಚೆನ್ನೈ ಸೂಪರ್ ಕಿಂಗ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ
- ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ
- ಈವರೆಗೆ ಒಂದೇ ಒಂದು ಮ್ಯಾಚ್ ಗೆಲ್ಲದ ಕೆಕೆಆರ್
- ಕೇವಲ ಒಂದು ಪಂದ್ಯ ಮಾತ್ರ ಗೆದ್ದಿರುವ ಸಿಎಸ್ಕೆ
Published On - Apr 14,2026 5:59 PM




